Перейти к содержимому

ಚಿತ್ರದುರ್ಗ ದಾವಣಗೆರೆ ಕಡೆ ಮಾಡುವ ಸಿಂಪಲ್ ಮತ್ತು ರುಚಿಯಾದ ಸಾಂಬಾರ್ ಪುಡಿ| Traditional Sambar Powder Recipe.

RaJsBasu

0:00 / 0:00

ಚಿತ್ರದುರ್ಗ ದಾವಣಗೆರೆ ಕಡೆ ಮಾಡುವ ಸಿಂಪಲ್ ಮತ್ತು ರುಚಿಯಾದ ಸಾಂಬಾರ್ ಪುಡಿ| Traditional Sambar Powder Recipe.

14 984 просмотра · 5 мес. назад
RaJsBasu
57,7 тыс. подписчиков
14 984 просмотра · 5 мес. назад
ನಮಸ್ಕಾರ ಈ ವೀಡಿಯೋ ನೋಡುವ ಮುನ್ನಾ ದಯವಿಟ್ಟು ಈ ಕೆಳಗಿನದನ್ನು ಓದಿ. ಮೊದಲನೆಯದಾಗಿ ಈ ವೀಡಿಯೋದ ಲೆಂಗ್ತ್ ನೋಡಿ ನಿಮಗೆ ಆಶ್ಚರ್ಯ ಮತ್ತು ಕೋಪ ಎರಡೂ ಬರಬಹುದು. ಇದನ್ನು ಐದಾರು ನಿಮಿಷಗಳಲ್ಲಿ ಹೇಳಬಹುದಿತ್ತು ಇಷ್ಟು ದೊಡ್ಡ ವೀಡಿಯೋ ಮಾಡುವ ಅವಶ್ಯಕತೆ ಇರಲಿಲ್ಲ ಎಂದು. ಇದಕ್ಕೆ ನನ್ನ ಉತ್ತರ ಇಂತಿದೆ. ಯೂಟ್ಯೂಬ್ ನಲ್ಲಿ ಈ ರೆಸಿಪಿಯ ಚಿಕ್ಕ ವೀಡಿಯೋಗಳು ಸಾಕಷ್ಟು ಲಭ್ಯವಿದೆ. ಆದರೆ ನನ್ನ ಉದ್ದೇಶ ಅಡುಗೆಯಲ್ಲಿ ತೀರಾ ಹೊಸಬರಿಗೆ ತಿಳಿಸುವುದು. ಜೊತೆಗೆ ನಮ್ಮ ಭಾಷಾ ಬಳಕೆಯನ್ನು ಹೆಚ್ಚಿಸುವುದು. ಈ ಸಂಬಂಧ ವೀಡಿಯೋದ ಲೆಂಗ್ತ್ ತುಂಬಾ ದೊಡ್ಡದಿದೆ. ಆದುದರಿಂದ ಈ ವೀಡಿಯೋಗೆ ಸಮಯ ವ್ಯಯಿಸುವುದು ವ್ಯರ್ಥ ಎನಿಸಿದರೆ ದಯವಿಟ್ಟು ವೀಡಿಯೋ ಸ್ಕಿಪ್ ಮಾಡಿ. ಹಾಗೆಯೇ ಈ ಸಾಂಬಾರ್ ಪುಡಿ ರೆಸಿಪಿಗಳು ಸಾವಿರಾರು ವಿಧಾನಗಳಲ್ಲಿ ಮಾಡಲ್ಪಡುತ್ತವೆ. ಅವುಗಳಲ್ಲಿ ಇದು ಒಂದು ರುಚಿಕಟ್ಟಾದ ವಿಧಾನ. ಈ ಸಾಂಬಾರ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಅಳತೆ ಇಂತಿದೆ. [ಗ್ರಾಂ ಗಳಲ್ಲಿ] ಧನಿಯಾ/Coriander Seeds-250 grams ಜೀರಿಗೆ/Cumin seeds-125 grams ಅರಿಶಿನ /Whole turmeric-60 grams ಉದ್ದಿನಬೇಳೆ/Black gram-60 grams ಹೆಸರುಬೇಳೆ/Moong dal-60 grams ಕಡಲೆಬೇಳೆ/ Bengal gram-60 grams ಹುರಿಗಡಲೆ/Fried gram-60 grams ಜಾಯಿಕಾಯಿ/Mace-2 or 3 grams ಕಾಳುಮೆಣಸು/Pepper-3 to 4 grams ಲವಂಗ/Clove-3 to 4 grams ಮೆಂತೆ/Fenugreek seeds-10 grams ಗಸಗಸೆ/Poppy seeds-25 grams ಚಕ್ಕೆ/Cinnamon-3 grams ಏಲಕ್ಕಿ/Cardamom-3 grams ಮರಾಠಿ ಮೊಗ್ಗು/Kopak buds [Small]-3 grams ಬಾಳೆಮೊಗ್ಗು/Kopak buds[Wailong] [Big]-3 grams ಚಕ್ರಮೊಗ್ಗು/Star anise-3 grams ಶಾ ಜೀರಿಗೆ/Caraway seeds-3 grams ಪಲಾವ್ ಎಲೆ/Bay leaf-2 grams ಕಸೂರಿಮೇಥಿ/Dry fenugreek leaves-3 grams ಕಲ್ಲುಹೂವು/Stone flower-3 grams ಕಲ್ಲುಪ್ಪು/Crystal salt-20 to 30 grams ಅಕ್ಕಿ/Rice-60 grams ಕರಿಬೇವು/ Curry leaves-15 grams ಬಿಳಿಜೋಳ/Whole Jowar/Sorghum [Optional]-As shown in the video ಗೋಧಿ/Whole Wheat [Optional]-As shown in the video ಮುಂದುವರೆದು, ನಿಮಗೆ ಸಾಸಿವೆಯ ಸ್ವಾದ ಇಷ್ಟ ಎನಿಸಿದರೆ ಮೂರರಿಂದ ಐದು ಗ್ರಾಂ ಸಾಸಿವೆಯನ್ನು ಹುರಿದು ಸೇರಿಸಬಹುದು. ಮೇಲಿನ ಅಳತೆಯನ್ನು ಬಳಸಿ ಮಾಡಿದ ಸಾಂಬಾರ್ ಪುಡಿಯು ಹೆಚ್ಚಿನ ಗತ್ತನ್ನು ಒಳಗೊಂಡಿರದೇ ಮಂದ ಮಸಾಲೆಯ ಚೆಂದದ ರುಚಿ ಹೊಂದಿದೆ. ನೀವು ಹೆಚ್ಚಿನ ಮಸಾಲೆಯನ್ನು ಇಷ್ಟಪಡುವವರಾಗಿದ್ದರೆ, ಮಸಾಲೆಯನ್ನು ಒಂದೆರೆಡು ಗ್ರಾಂ ಹೆಚ್ಚಿಸಿ. ಹಾಗು, ಸಾಂಬಾರ್ ಪುಡಿಯ ಪ್ರಮಾಣವನ್ನು ಹೆಚ್ಚಿಸಬೇಕಾದರೆ ಹೆಸರುಬೇಳೆ, ಕಡಲೆಬೇಳೆ, ಹುರಿಗಡಲೆ ಇವುಗಳ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಿ [ಹೆಚ್ಚು ಬೇಡ 60 gram to 80 grams ನ ಹಾಗೆ]. ಧನ್ಯವಾದಗಳು. ರಾಜ್