Перейти к содержимому

ಸಭೆ ೨೪೦:ರಾಷ್ಟ್ರ ನಿರ್ಮಾಣದಲ್ಲಿ ಆಕಾಶವಾಣಿಯ ಪಾತ್ರ| ನಿರೂಪಣೆ: ಶ್ರೀಮತಿ ಲಾವಣ್ಯ| ಪ್ರಸ್ತುತಿ:ಶ್ರೀ ಲತೀಶ್ ಪಾಲ್ದಾನೆ

Namma Berugalu

0:00 / 0:00

ಸಭೆ ೨೪೦:ರಾಷ್ಟ್ರ ನಿರ್ಮಾಣದಲ್ಲಿ ಆಕಾಶವಾಣಿಯ ಪಾತ್ರ| ನಿರೂಪಣೆ: ಶ್ರೀಮತಿ ಲಾವಣ್ಯ| ಪ್ರಸ್ತುತಿ:ಶ್ರೀ ಲತೀಶ್ ಪಾಲ್ದಾನೆ

54 просмотра · 9 дн. назад
Namma Berugalu
561 подписчик
54 просмотра · 9 дн. назад
ಕಳೆದ ಶನಿವಾರದ ಮಾಸಿಕ ಸಭೆಯಲಿ “ರಾಷ್ಟ್ರ ನಿರ್ಮಾಣದಲ್ಲಿ ಆಕಾಶವಾಣಿಯ ಪಾತ್ರ” ಎಂಬ ಮಹತ್ವದ ವಿಷಯದ ಕುರಿತು ಚರ್ಚಿಸಿದೆವು.📡 ರೇಡಿಯೋ📻 ಕೇವಲ ಮಾಹಿತಿ ನೀಡುವ ಮಾಧ್ಯಮವಲ್ಲ; ಅದು ಜನರನ್ನು ತಲುಪುವ, ಜಾಗೃತಿ ಮೂಡಿಸುವ, ನಮ್ಮ ಭಾಷೆ- ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ದೇಶದ ಏಕತೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಬಲ ಸಾಧನವಾಗಿದೆ. ಈ ವಿಷಯದ ಕುರಿತು ನಮಗೆ ಅಮೂಲ್ಯವಾದ ಒಳನೋಟಗಳನ್ನು ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಶ್ರೀ ಲತೀಶ್ ಪಾಲ್ದಾನೆ ಅವರು ನಮಗೆ ನೀಡಿದರು. ಶ್ರೀಯುತ ಲತೀಶ್ ಪಾಲ್ದಾನೆ ಅವರು ಪ್ರಸ್ತುತ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ, ಇನ್ಫೋಸಿಸ್ ಸಂಸ್ಥೆಯಲ್ಲಿ ಟೆಸ್ಟಿಂಗ್ ಎಕ್ಸ್‌ಕ್ಯೂಟಿವ್ ಆಗಿ ವೃತ್ತಿ ಜೀವನ ಪ್ರಾರಂಭ. ಬಳಿಕ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸೇವೆ. ನಂತರ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ನಿರ್ವಹಕರಾಗಿ ಸೇರಿದ ಇವರು ಇತ್ತೀಚಿಗೆ ಕಾರ್ಯಕ್ರಮ ನಿರ್ವಹಕರಾಗಿ ಪದೋನ್ನತಿ ಹೊಂದಿರುತ್ತಾರೆ. ರೇಡಿಯೋ ನಾಟಕಗಳು, ಧ್ವನಿ ಚಿತ್ರಗಳು, ಆರೋಗ್ಯ ಕಾರ್ಯಕ್ರಮ, ಮಕ್ಕಳ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳ ನಿರ್ಮಾಣದ ಅನುಭವ ಇವರಿಗಿದೆ. ಈ ಸಭೆಯನ್ನು ವೀಕ್ಷಿಸಿ ಹೇಗೆ ಮೂಡಿ ಬಂದಿದೆ ಎಂಬುದನ್ನು ತಿಳಿಸಿ. ಸಭೆಯ ಪೂರ್ಣ ವಿಡಿಯೋ ಇಲ್ಲಿದೆ.. #nammaberugalu #kannadaclub #akashavani #air #rashtranirmana