ಚಂದ್ರಗಾವಿಯ ಸೀರೆ ಚಂದಕ್ಕ ತಂದೇನ. ಶ್ರೀ ದುರ್ಗಾದೇವಿಯ ಅದ್ಬುತ ಭಕ್ತಿಗೀತೆ. ಸಾಹಿತ್ಯ. ಮರಿಲಿಂಗಪ್ಪ ಮುರಾನಪುರ.
SRI DURGA TEMPLE GONAL MURANPUR
0:00 / 0:00
ಚಂದ್ರಗಾವಿಯ ಸೀರೆ ಚಂದಕ್ಕ ತಂದೇನ. ಶ್ರೀ ದುರ್ಗಾದೇವಿಯ ಅದ್ಬುತ ಭಕ್ತಿಗೀತೆ. ಸಾಹಿತ್ಯ. ಮರಿಲಿಂಗಪ್ಪ ಮುರಾನಪುರ.
27 просмотров · 1 дн. назад
SRI DURGA TEMPLE GONAL MURANPUR
203 подписчика
27 просмотров · 1 дн. назад
ತ್ರಿಶೂಲಧಾರಿಣೀಂ ದೇವೀಂ ಸಿಂಹವಾಹನ ಸಂಸ್ಥಿತಾಮ್......ಮುರಾನಪುರ ಸೀಮಾಂತೇ ಭಕ್ತರಕ್ಷಣ ತತ್ಪರಾಮ್.....ಕುಂಕುಮಾಂಕಿತ ಫಾಲಾಕ್ಷೀಂ ಕರುಣಾರಸ ಸಾಗರಾಮ್......ಶರಣಾಗತ ದೀನಾರ್ತೇ ಶ್ರೀ ದುರ್ಗೇದೇವಿ ನಮೋಸ್ತುತೇ.......
ಚಂದ್ರಗಾವಿ ಸೀರೆ ಚಂದಕ್ಕ ತಂದೇನು |ಶ್ರೀ ದುರ್ಗಾದೇವಿ ಉಡುಬಾರಮ್ಮ| ಶ್ರೀ ದುರ್ಗಾದೇವಿ ಉಡು ಬಾರಮ್ಮ ನಮ್ಮವ್ವ| ಜೀವನಕೆ ಸಾರ್ಥಕ ಕೊಡು ಬಾರಮ್ಮ||
ಅಮ್ಮ ಶ್ರೀ ಮುರಾನಪುರೇಶ್ವರೀ ಜಗನ್ಮಾತೆ|
ಹಸಿರು ತೋರಣ ಕಟ್ಟಿ ಹಾದೀಲಿ ಕಾದೇವು,|
ಹರಸವ್ವ ನೀ ಬಂದು ನಮ್ಮಮ್ಮ| ಹಣೆ ತುಂಬ ಕುಂಕುಮ ಕಣ್ಣಲ್ಲಿ ಕರುಣೆಯಾ,| ಕಡಲಂತೆ ಉಕ್ಕಿಸೊ ಜಗದಮ್ಮ||
ಮಂಗಳದ ವಾರದಾ ನಿನಗೊಂದು ಪೂಜೆಯಾ,| ಮನಸಾರೆ ಮಾಡುವೆ ಕೇಳಮ್ಮ|
ಮುರಾನಪುರದ ಶ್ರೀದುರ್ಗಾದೇವಿ ನೀನಮ್ಮ||
ಚಂದ್ರಗಾವಿ ಸೀರೆ ಚಂದಕ್ಕ ತಂದೇನು |ಶ್ರೀ ದುರ್ಗಾದೇವಿ ಉಡುಬಾರಮ್ಮ| ಶ್ರೀ ದುರ್ಗಾದೇವಿ ಉಡು ಬಾರಮ್ಮ ನಮ್ಮವ್ವ| ಜೀವನಕೆ ಸಾರ್ಥಕ ಕೊಡು ಬಾರಮ್ಮ||
ಅಮ್ಮ ಶ್ರೀ ಮುರಾನಪುರೇಶ್ವರೀ ಜಗನ್ಮಾತೆ|
ಕೈಯಲ್ಲಿ ತ್ರಿಶೂಲ ಕಾಲಲ್ಲಿ ಗೆಜ್ಜೆಯಾ, |ನಾದವ ತರುತಿಹೆ ಜಗದೀಶ್ವರಿ| ಸಿಂಹದ ಬೆನ್ನೇರಿ ಸೀಮೆಯ ಕಾಯಲು,| ಧರೆಗಿಳಿದು ಬಂದಂಥ ಭುವನೇಶ್ವರಿ|| ಕಷ್ಟದ ಕಗ್ಗತ್ತಲೆ ಕರಗಿಸಿ ಬಾಳಲಿ,ಜ್ಞಾನದ ದೀಪವ ಹಚ್ಚವ್ವ|
ನಮ್ಮಯ ಮನಸಿನ ಮೈಲಿಗೆ ನೀಗವ್ವ|| ಜಯಜಯತು ಮುರಾನಪುರೇಶ್ವರೀ|
ಚಂದ್ರಗಾವಿ ಸೀರೆ ಚಂದಕ್ಕ ತಂದೇನು |ಶ್ರೀ ದುರ್ಗಾದೇವಿ ಉಡುಬಾರಮ್ಮ| ಶ್ರೀ ದುರ್ಗಾದೇವಿ ಉಡು ಬಾರಮ್ಮ ನಮ್ಮವ್ವ| ಜೀವನಕೆ ಸಾರ್ಥಕ ಕೊಡು ಬಾರಮ್ಮ||
ಅಮ್ಮ ಶ್ರೀ ಮುರಾನಪುರೇಶ್ವರೀ ಜಗನ್ಮಾತೆ|
ಊರೊಳಗು ನೀನೇ ಕೇರಿಯೊಳಗು ನೀನೇ, ಕಾಯುವ ದೇವತೆ ಶ್ರೀ ದುರ್ಗಮ್ಮ| ನಂಬಿದ ಭಕ್ತರ ಕೈಬಿಡದೆ ಸಲಹುವ, ಕರುಣೆಯ ತೋರುವ ತಾಯಮ್ಮ||
ಮುರಾನಪುರದ ಸತ್ಯುಳ್ಳ ಶ್ರೀ ದುರ್ಗಾದೇವಿ ನೀನಮ್ಮ,| ಮುಕ್ತಿಯ ಹಾದಿಯ ತೋರುತ ಹರಸಮ್ಮ|
ಜೀವನಕೆ ಸಾರ್ಥಕ ಕೊಡು ಬಾರಮ್ಮ||
ಚಂದ್ರಗಾವಿ ಸೀರೆ ಚಂದಕ್ಕ ತಂದೇನು |ಶ್ರೀ ದುರ್ಗಾದೇವಿ ಉಡುಬಾರಮ್ಮ| ಶ್ರೀ ದುರ್ಗಾದೇವಿ ಉಡು ಬಾರಮ್ಮ ನಮ್ಮವ್ವ| ಜೀವನಕೆ ಸಾರ್ಥಕ ಕೊಡು ಬಾರಮ್ಮ||
ಅಮ್ಮ ಶ್ರೀ ಮುರಾನಪುರೇಶ್ವರೀ ಜಗನ್ಮಾತೆ|
ಸಾಹಿತ್ಯ.ಶ್ರೀ ದುರ್ಗಾಪಾದ ಸನ್ನಿಧಿ ಮರಿಲಿಂಗಪ್ಪ ಮುರಾನಪುರ.