Перейти к содержимому

Nandenado Swami Ninde Idellavu

Shambhavi Bg

0:00 / 0:00

Nandenado Swami Ninde Idellavu

101 просмотр · 1 мес. назад
Shambhavi Bg
37 подписчиков
101 просмотр · 1 мес. назад
Raga: SindhuBhairavi Rachane: Venkata Vithala Dasaru ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ನಂದನಂದನ ಗೋವಿಂದ ಹರಿಕೃಷ್ಣ ||ಅಪ|| ಜನನ ಮರಣ ನಿಂದೇ ಜನ್ಮಸಾಧನ ನಿಂದೇ | ಅನುಕೂಲದರವು ನಿಂದೇನಯ್ಯ || ತನುವುಮನವೂ ನಿಂದೇ ಕಾಯ ದೊರೆವುದೂ ನಿಂದೇ | ಚಿನುಮಯ ಮೂರುತಿ ಅನುಮಾನವ್ಯಾತಕಯ್ಯಾ ||೧|| ಕಾಯಕಷ್ಟವು ನಿಂದೇ ದೇಹದ ಬಲ ನಿಂದೇ | ನ್ಯಾಯ ಅನ್ಯಾಯವೂ ನಿಂದೇ ಸ್ವಾಮಿ|| ಬಾಯಿಮಾತು ನಿಂದೇ ಬರುವ ಭಾಗ್ಯವು ನಿಂದೇ | ಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨|| ಯಾತ್ರೆ ತೀರ್ಥವು ನಿಂದೇ ಕ್ಷೇತ್ರದ ಫಲ ನಿಂದೇ | ಸತ್ಪಾತ್ರ ದಾನ ನೇಮ ನಿಂದೇ ಸ್ವಾಮಿ|| ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠ್ಠಲ | ಸ್ತೋತ್ರ ಮಾಳ್ಪುದು ವಿಚಿತ್ರ ನಿನ್ನದಯ್ಯಾ ||೩||