Перейти к содержимому

ಎ.ಪಿ. ರಂಗನಾಥ್ ಗೆಲುವಿಗೆ ಜೆಡಿಎಸ್ ರಣತಂತ್ರ | ಶ್ರೀ ಸಾಯಿ ಪಾರ್ಟಿ ಹಾಲ್‌ನಲ್ಲಿ ಎನ್‌ಡಿಎ ಸಮಾಲೋಚನಾ ಸಭೆ |

Nirbhaya News Kannada 24X7

0:00 / 0:00

ಎ.ಪಿ. ರಂಗನಾಥ್ ಗೆಲುವಿಗೆ ಜೆಡಿಎಸ್ ರಣತಂತ್ರ | ಶ್ರೀ ಸಾಯಿ ಪಾರ್ಟಿ ಹಾಲ್‌ನಲ್ಲಿ ಎನ್‌ಡಿಎ ಸಮಾಲೋಚನಾ ಸಭೆ |

67 просмотров · 1 дн. назад
Nirbhaya News Kannada 24X7
1,25 тыс. подписчиков
67 просмотров · 1 дн. назад
ಶ್ರೀ ಸಾಯಿ ಪಾರ್ಟಿ ಹಾಲ್‌ನಲ್ಲಿ ಜೆಡಿಎಸ್ ವತಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಪರ ಮತಯಾಚನೆ ನಡೆಸುವ ಕುರಿತು ಸಮಾಲೋಚನಾ ಸಭೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಎಂ. ಎಲ್. ಸಿ ಟಿ.ಶರವಣ ರವರು ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಹಾಗೂ ಪಶ್ಚಿಮ ಜಿಲ್ಲಾಧ್ಯಕ್ಷರಾದಂತ ಟಿ. ತಿಮ್ಮೇಗೌಡರು ಹಾಗೂ ಬಸವನಗುಡಿ ಅಧ್ಯಕ್ಷರಾದ ಹನುಮಂತೇಗೌಡ ರವರು ಹಾಗೂ ಬಸವನಗುಡಿ ಮಹಿಳಾ ಅಧ್ಯಕ್ಷರಾದ ಸುಮಿತ್ರ ರವರು ಹಾಗೂ ಬಸವನಗುಡಿ ವಾರ್ಡ್ ಅಧ್ಯಕ್ಷರಾದಂತ ಅಜಯ್ ಗೌಡ ರವರು ಹಾಗೂ ಶ್ರೀನಗರ ಯೂತ್ ಅಧ್ಯಕ್ಷರಾದ ಮಂಜುನಾಥ್ ಗೌಡರವರು ಗೌಡ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗವಹಿಸಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರನ್ನು ಭೇಟಿ ಮಾಡಿ ಎನ್‌.ಡಿ.ಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಪರವಾಗಿ ಮತಯಾಚನೆ ನಡೆಸುವ ಕಾರ್ಯತಂತ್ರಗಳ ಕುರಿತು ಮುಖಂಡರು ಚರ್ಚಿಸಿದರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಕೋರ್ ಕಮಿಟಿ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡರು. ಚುನಾವಣಾ ಪ್ರಚಾರವನ್ನು ಸಂಘಟಿತವಾಗಿ ನಡೆಸುವುದು, ಶಿಕ್ಷಕರ ಕ್ಷೇತ್ರದ ಮತದಾರರನ್ನು ಸಂಪರ್ಕಿಸುವುದು ಹಾಗೂ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಗೆಲುವಿಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಿದ್ಧತೆ ನಡೆಸಿದರು. #NirbhayaNewsKannada #jds #nda #APRanganath #TSharavana #TThimmegowda #BengaluruTeachersConstituency #teachersconstituency #jdskarnataka #basavanagudi #karnatakapolitics #electioncampaign2026 #bengalurunews #kannadanews #politicalnews