Ganapati Bappa Morya (Pro Master Version) | ಗಣಪತಿ ಬಪ್ಪ ಮೌರ್ಯ | Ganesha Kannada Devotional Song
Sahitya Nada Music и ClipTrip India
0:00 / 0:00
Ganapati Bappa Morya (Pro Master Version) | ಗಣಪತಿ ಬಪ್ಪ ಮೌರ್ಯ | Ganesha Kannada Devotional Song
845 просмотров · 2 недели назад
Sahitya Nada Music и ClipTrip India
845 просмотров · 2 недели назад
🌺 ಗಣಪತಿ ಬಪ್ಪ ಮೌರ್ಯ - ಪ್ರೋ ಮಾಸ್ಟರ್ ವರ್ಷನ್ 🌺
ಸಾಹಿತ್ಯ ನಾದ ಮ್ಯೂಸಿಕ್ ಚಾನೆಲ್ ಅರ್ಪಿಸುವ ಶ್ರೀ ವಿಘ್ನನಿವಾರಕ ಗಣೇಶನ ಅತ್ಯದ್ಭುತ ಭಕ್ತಿಗೀತೆ!
🎵 Track Details:
Song: Ganapati Bappa Morya (Pro Master Version)
Lyrics: ಪ್ರಹ್ಲಾದ್ (Prahlad)
Channel: Sahitya Nada Music
Genre: Kannada Devotional / Ganesha Bhakthi Geethe
-------------------------------------------------
📜 Song Lyrics / ಹಾಡಿನ ಸಾಹಿತ್ಯ:
--------------------------------------------------
ಓಂ ಶ್ರೀ ವಿಘ್ನವಿನಾಯಕಾಯ ನಮಃ
ಓಂ ಸರ್ವಕಾರ್ಯ ಪ್ರಾಪ್ತಿರಸ್ತು
ಗಣಪತಿ ಬಪ್ಪ ಮೋರಯಾ!
ವಿಘ್ನವಿನಾಯಕ ಮೋರಯಾ!
ಗಣಪತಿ ಬಪ್ಪ ಮೋರಯಾ!
ವಿಘ್ನವಿನಾಯಕ ಮೋರಯಾ!
ಮಾತಿನಲ್ಲಿ ಮೌನವತಾಳಿ ಸೊಂಡಿಲನು ಹಲ್ಲಾಡಿಸಿ
ನಗುವ ನಿನ್ನಯ ನಗುವಿಗೆ ಮನಸೋತು
ನಿನ್ನಯ ಪಾದಕ್ಕೆ ಶರಣಾದೇನು ಸ್ವಾಮಿ ಗಜವದನ...
ಮಾತಿನಲ್ಲಿ ಮೌನವತಾಳಿ ಸೊಂಡಿಲನು ಹಲ್ಲಾಡಿಸಿ
ನಗುವ ನಿನ್ನಯ ನಗುವಿಗೆ ಮನಸೋತು
ನಿನ್ನಯ ಪಾದಕ್ಕೆ ಶರಣಾದೇನು ಸ್ವಾಮಿ ಗಜವದನ!
ಓಂ ಶಿವ ಶಿವ ಶಿವಸುತ ಸುಂದರ ಮೊಗದವನೆ ಮೋದಕಪ್ರಿಯ ಹರನೆ
ಮೂಷಿಕವಾಹನ ಪ್ರಿಯದರ್ಶಕನೆ ದರ್ಶನ ತೋರಿ ಹರುಷವ ಕೋರಿ
ಮನೆ ಮನಗಳಲ್ಲಿ ಸಂತಸ ಹೊಮ್ಮಿಸಿ ಸರ್ವಕಾರ್ಯಗಳ ವಿಘ್ನವ ಹರಿಸಿ
ಬಾಳಲ್ಲಿ ಬೆಳಕನ್ನು ತುಂಬಿ ತುಂಬಿ ದುಂಬಿಯ ಹಾಗೆ ಗಾನವ ಸುರಿಸುವವನೆ
ಸಂಗೀತ ನಾಟ್ಯ ಸ್ವರ ಸುರಗಳ ಸುಂದರ ಸೃಷ್ಟಿ ಪಾಲಕನೆ!
ಗಣ ಗಣ ಶಿವಗುಣ ಶಂಕರ ಪಾರ್ವತಿ ಪರಮಸುತನೆ
ಸುಂದರ ಸುರವರ ಹರಿಹರ ಮನವನು ಹೋಲಿಸಿ, ಒಲಿಸಿ ಮನಸೆಳೆದವನೆ...
ನಿನ್ನಯ ಪಾದಕ್ಕೆ ೧೦೧ ನಮನಗಳು ಗಜವದನಾ!
ಗಜಗಜ ಗಜಚರ್ಮಾಂಬರ ಕೋಪವ ಕೆಣಕಿ ಬಾಗಿಲಲಿ ತಡೆದು ಪ್ರಶ್ನೆಯ ಮಾಡಿ
ಪರಮಶಿವನ ಜೊತೆಯೇ ಯುದ್ಧವ ಮಾಡಿ
ನಿನ್ನಯ ಕೋಪದಿ ಧ್ವಂಸವ ಮಾಡಿದನು...
ಪಾರ್ವತಿ ಬಂದು ನೋಡಿ ಏನಿದು ಸ್ವಾಮಿ ಎಂದು
ನಿನ್ನಯ್ಯ ಮರುಜನ್ಮ ನೀಡಿದರು
ನಿನ್ನಯ ಲೀಲೆಗೆ ಲೋಕವೇ ಅಲ್ಲೋಲಕಲ್ಲೋಲ ಗಜವದನಾ!
ಮಾತಿನಲ್ಲಿ ಮೌನವತಾಳಿ ಸೊಂಡಿಲನು ಹಲ್ಲಾಡಿಸಿ
ನಿನ್ನಯ ಪಾದಕ್ಕೆ ಶರಣಾದೇನು ಸ್ವಾಮಿ ಗಜವದನ!
ಗಣಪತಿ ಬಪ್ಪ ಮೋರಯಾ!
ಮಂಗಲ ಮೂರ್ತಿ ಮೋರಯಾ!
ಗಣಪತಿ ಬಪ್ಪ ಮೋರಯಾ!
ವಿಘ್ನವಿನಾಯಕ ಮೋರಯಾ!
ಓಂ ಶ್ರೀ ವಿಘ್ನವಿನಾಯಕಾಯ ನಮಃ!
ಗಣಪತಿ ಬಪ್ಪ ಮೋರಯಾ!
ನಿಮ್ಮ ಮನೆಯಲ್ಲೂ, ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲೂ ಈ ಹಾಡನ್ನು ಕೇಳಿ, ಶ್ರೀ ಗಣಪತಿಯ ಅನುಗ್ರಹ ಪಡೆಯಿರಿ. ವೀಡಿಯೋ ಇಷ್ಟವಾದರೆ Like ಮಾಡಿ, ಕಾಮೆಂಟ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ Share ಮಾಡಿ!
ನಿರಂತರ ಭಕ್ತಿಗೀತೆಗಳು ಮತ್ತು ವಿಶೇಷ ಸಂಗೀತಕ್ಕಾಗಿ ನಮ್ಮ "Sahitya Nada Music" ಚಾನೆಲ್‌ಗೆ Subscribe ಆಗಿ support ಮಾಡಿ! 🙏
--------------------------------------------------
#GanapatiBappaMorya #GaneshaKannadaSongs #GaneshChaturthi #KannadaDevotionalSongs #SahityaNadaMusic #GaneshaBhaktiGeethe #GaneshFestivalSongs #LordGaneshaSongs
--------------------------------------------------