DHARMADA JOTEGOODIRI - DEVOTIONAL SONG | RAMAKRISHNA KATUKUKKE | MADHUR TEMPLE | #devotional
Ramakrishna Katukukke
0:00 / 0:00
DHARMADA JOTEGOODIRI - DEVOTIONAL SONG | RAMAKRISHNA KATUKUKKE | MADHUR TEMPLE | #devotional
11 741 просмотр · 1 год назад
Ramakrishna Katukukke
3,08 тыс. подписчиков
11 741 просмотр · 1 год назад
MADHUR SRI MADANANTHESHWARA SIDDIVINAYAKA TEMPLE | DEVOTIONAL SONG by SRI RAMAKRISHNA KATUKUKKE | #Ramakrishnakatukukke #Devotionalsong
ಹಿನ್ನೆಲೆ :
ಮಧೂರು ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಪೂರ್ಣ ಚಿತ್ರಣವನ್ನು ಮನದಲ್ಲಿರಿಸಿಕೊಂಡು ಪೂರ್ವಜರ ಮನೋಭೀಷ್ಟಗಳ ಮೂಲಕ ಇಂದಿನ ಕಾಲಾನುಸಾರ ನಮ್ಮ ಪರಂಪರೆಯನ್ನು, ದೇಗುಲಗಳ ಮಹತ್ವವನ್ನು ಸಾರುತ್ತಾ ತನ್ಮೂಲಕ ಜನ ಜಾಗೃತಿಯನ್ನು ಸರ್ವರಲ್ಲೂ ಮೂಡಿಸುವ ಸಲುವಾಗಿ ಮೂಡಿಬಂದ ದೃಶ್ಯಕಾವ್ಯವೇ ಧರ್ಮದ ಜತೆಗೂಡಿರಿ ಎಂಬ ಈ ವಿಶಿಷ್ಟ ಪ್ರಯೋಗ.
ಜೀವನದಲ್ಲಿ ಅನೇಕ ಧ್ಯೇಯೋದ್ದೇಶಗಳನ್ನು ಹೊಂದಿದ ನಾವುಗಳು ಧರ್ಮಸಂರಕ್ಷಣೆಯತ್ತಲೂ ಗಮನ ಹರಿಸಬೇಕು, ಆ ಮೂಲಕ ಭಾರತದ ಸನಾತನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸಬೇಕು ಎಂಬ ಆಶಯದೊಂದಿಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಇರುವವನೊಬ್ಬನೇ ಆದರೆ ಆತನನ್ನು ಕರೆಯಲು ಹಲವು ನಾಮಗಳು, ನಾವೆಲ್ಲರೂ ಒಂದೇ ನಮ್ಮೊಳಗಿರುವವನೂ ಒಬ್ಬನೇ ಎಂಬ ತತ್ವವನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಒತ್ತಿ ಹೇಳುವ ಗೀತೆಯಿದು.
ಜಗತ್ತಿನ ಅನೇಕ ಅಧ್ಯಾತ್ಮ ಸಾಧಕರ ಶ್ರಮ ವ್ಯರ್ಥವಾಗದಿರಲಿ ನಮಗೆಲ್ಲಾ ದೇವನ ಅನುಗ್ರಹ ಸಿಗಲಿ ಮತ್ತೆ ಮತ್ತೆ ನಾವೆಲ್ಲಾ ವಿಶ್ವ ಮಾನವರಾಗುವ ಎಂಬ ಸಂದೇಶವನ್ನು ಹೊಂದಿದ ಈ ಕಾವ್ಯ ಸಂಯೋಜನೆಗೆ ಕುಂಭಮೇಳದ ಒಂದು ಧ್ವನಿಸುರುಳಿ ಪ್ರೇರಕವಾಗಿ ನಿಂತಿದೆ. ತಾವೆಲ್ಲರೂ ಆಲಿಸಿ.. ಆನಂದಿಸಿ.. ನಮ್ಮೆಲ್ಲರೊಳಗಿನ ಸ್ವಾರ್ಥವನ್ನು ತರಿದು ಆ ದೇವನು ನಮಗೆಲ್ಲಾ ಒಳಿತನ್ನೇ ಹರಿಸಿ ನಮ್ಮೆಲ್ಲರನ್ನೂ ಸದಾ ಹರಸಲಿ ಎಂಬ ಹಾರೈಕೆ, ಅಭಿಲಾಷೆಯೊಂದಿಗೆ...
ಧನ್ಯವಾದಗಳು.