ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣ | ಮುಂದುವರೆದ ವೀರಗಲ್ಲು ಪಾರ್ಕ್ ನಿರ್ಮಾಣ ಕಾರ್ಯ
DD Chandana News
0:00 / 0:00
ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣ | ಮುಂದುವರೆದ ವೀರಗಲ್ಲು ಪಾರ್ಕ್ ನಿರ್ಮಾಣ ಕಾರ್ಯ
307 просмотров · 4 дня назад
DD Chandana News
110 тыс. подписчиков
307 просмотров · 4 дня назад
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣದಲ್ಲಿ ವೀರಗಲ್ಲು ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯ ಏಕೈಕ ವೀರಗಲ್ಲು ಪಾರ್ಕ್ ಇದಾಗಿದ್ದು, ಹರವು ಗ್ರಾಮದಲ್ಲಿನ ರಾಮದೇವರ ದೇವಾಲಯ ಬಳಿ ಕಳೆದ ಹಲವು ದಿನಗಳಿಂದ ವೀರಗಲ್ಲು ಉದ್ಯಾನವನ ಕೆಲಸ ಸಾಗುತ್ತಿದೆ.
ದೂರದರ್ಶನದೊಂದಿಗೆ ಪ್ರಾಚೀನ ಸ್ಮಾರಕ ಸಂರಕ್ಷಕ ಹರವು ದೇವೇಗೌಡ, ಗ್ರಾಮದ ಪ್ರಾಚೀನ ಸ್ಮಾರಕದ ಮುಂಭಾಗದ ಗದ್ದೆ, ಬದುವಿನಲ್ಲಿ ಸುಮಾರು 70ಕ್ಕೂ ಹೆಚ್ಚು ವೀರಗಲ್ಲು ಇದ್ದವು. ಎರಡು ವರ್ಷಗಳ ಹಿಂದೆ ರಾಮದೇವರ ದೇಗುಲವನ್ನು ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರದ ನಂತರ ವೀರಗಲ್ಲು ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಜೈವಿಕ ಸಂರಕ್ಷಣೆ ಉದ್ದೇಶಕ್ಕಾಗಿ ಪೂರ್ವಿಕರ ಮನೆಗಳಿದ್ದ ಸ್ಧಳದಲ್ಲಿ ದೇವರಕಾಡು ಪರಿಕಲ್ಪನೆಯಡಿ ಪರಿಸರವನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ 900 ಗಿಡಗಳಿದ್ದು, 62ಕ್ಕೂ ಅಧಿಕ ಸಸ್ಯ ಪ್ರಬೇಧಗಳಿವೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಪತ್ರಕರ್ತ ಕೃಷ್ಣೇಗೌಡ, ಪ್ರಾಚೀನ ಸ್ಮಾರಕ ಸಂರಕ್ಷಕ ಹರವು ದೇವೇಗೌಡ ನೇತೃತ್ವದಲ್ಲಿ ದೇಶೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ನಡೆಯುತ್ತಿದೆ. ಅವಸಾನದ ಹಂಚಿನಲ್ಲಿದ್ದ ರಾಮದೇವರ ದೇಗುಲ ಜೀರ್ಣೋದ್ಧಾರದ ಬಳಿಕ ವೀರಗಲ್ಲು ಪಾರ್ಕ್ ನಿರ್ಮಾಣವಾಗುತ್ತಿದೆ ಎಂದರು.
#LiveDDChandanaNews #DDChandanaNews #DDChandana #DDKannada