Перейти к содержимому

Terror Links Arrest in Kalaburagi | ಕಲಬುರ್ಗಿಯಲ್ಲಿ ಶಂಕಿತ ಉಗ್ರ ಅರೆಸ್ಟ್ ಪ್ರಿಯಾಂಕ್ ಖರ್ಗೆ ರಿಯಾಕ್ಷನ್

TV5 Kannada

0:00 / 0:00

Terror Links Arrest in Kalaburagi | ಕಲಬುರ್ಗಿಯಲ್ಲಿ ಶಂಕಿತ ಉಗ್ರ ಅರೆಸ್ಟ್ ಪ್ರಿಯಾಂಕ್ ಖರ್ಗೆ ರಿಯಾಕ್ಷನ್

666 просмотров · 2 ч назад
TV5 Kannada
2,73 млн подписчиков
666 просмотров · 2 ч назад
Terror Links Arrest in Kalaburagi | ಕಲಬುರ್ಗಿಯಲ್ಲಿ ಶಂಕಿತ ಉಗ್ರ ಅರೆಸ್ಟ್ ಪ್ರಿಯಾಂಕ್ ಖರ್ಗೆ ರಿಯಾಕ್ಷನ್ ಕಲಬುರಗಿ ನಗರದಲ್ಲಿ ಉಗ್ರಗಾಮಿ ಸಂಘಟನೆಗಳ ಜೊತೆ ನಂಟು ಹೊಂದಿರುವ ಗಂಭೀರ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ (Central Intelligence) ಹಾಗೂ ನಮ್ಮ ರಾಜ್ಯದ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ.ಉಗ್ರಗಾಮಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನುವ ಖಚಿತ ಮಾಹಿತಿಯ ಆಧಾರದ ಮೇಲೆ ಆರಂಭದಲ್ಲಿ ಇಬ್ಬರು ಸಂಶಯಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆದರೆ ತೀವ್ರ ವಿಚಾರಣೆಯ ನಂತರ ಒಬ್ಬ ವ್ಯಕ್ತಿ ಮಾತ್ರ ಉಗ್ರರೊಂದಿಗೆ ಸಂಪೂರ್ಣ ಸಂಪರ್ಕದಲ್ಲಿದ್ದ ಎಂಬುದು ದೃಢಪಟ್ಟಿದ್ದು, ಆತನನ್ನು ಬಂಧಿಸಲಾಗಿದೆ.ಬಂಧಿತ ಆರೋಪಿ ಪಶ್ಚಿಮ ಬಂಗಾಳ ಮೂಲದವನು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಭಾರತ ಸರ್ಕಾರದ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮುಂದುವರಿದ ತನಿಖೆ ನಡೆಸಲಾಗುತ್ತಿದೆ.ಹೊರರಾಜ್ಯಗಳಿಂದ ಬಹಳಷ್ಟು ಜನರು ಉದ್ಯೋಗ ಅರಸಿ ಇಲ್ಲಿಗೆ ಆಗಮಿಸುತ್ತಿದ್ದು, ವಲಸೆ ಬರುವುದು ಅವರ ಹಕ್ಕಾಗಿದ್ದರೂ ಭದ್ರತಾ ದೃಷ್ಟಿಯಿಂದ ಮಾಹಿತಿ ಕಡ್ಡಾಯಗೊಳಿಸಲಾಗಿದೆ. ಆದರೆ ಇಲ್ಲಿ ಕೆಲಸಕ್ಕೆಯ ನೇಮಿಸಿಕೊಳ್ಳುವ ಬೇರೆ ರಾಜ್ಯಗಳ ಕಾರ್ಮಿಕರ ಬಗ್ಗೆಯಾಗಲಿ ಅಥವಾ ವ್ಯಕ್ತಿಗಳ ಬಗ್ಗೆಯಾಗಲಿ ಉದ್ಯಮಿಗಳು ಸರಿಯಾದ ಮಾಹಿತಿ ನೀಡಿಲ್ಲ ಎಂದು ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಬ್ಬದ ನಂತರ ಎಲ್ಲಾ ಉದ್ಯಮಿಗಳು, ಇ-ಕಾಮರ್ಸ್ ಸಂಸ್ಥೆಗಳು, ಕಾಫಿ ಅಸೋಸಿಯೇಷನ್ ಹಾಗೂ ಹೋಮ್‌ಸ್ಟೆ ಮಾಲೀಕರ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಎಲ್ಲರಿಗೂ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೆಸ್ (SOP) ಕುರಿತು ಕಟ್ಟುನಿಟ್ಟಿನ ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಎಚ್ಚರಿಕೆ ನೀಡಿದ್ದಾರೆ. Karnataka Home Minister Priyank Kharge has officially confirmed the arrest of an individual in Kalaburagi over suspected links with terror groups. The high-profile operation was executed jointly by the Central Intelligence agencies and the state police department.Based on intelligence inputs regarding association with terror elements, two suspects were initially detained for questioning. Following rigorous interrogation, it was confirmed that one of them was in constant touch with terror operatives, leading to his formal arrest.Authorities have identified the arrested accused as a native of West Bengal. The state government has taken this security threat with utmost seriousness and is coordinating closely with central agencies for further probe. While acknowledging that people from other states migrate for employment as part of their rights, the Home Minister noted a lack of proper background verification by local employers. He pointed out that several industries and businesses employing outsiders have failed to provide mandatory worker details to the authorities. Announcing future administrative steps, he stated that post-festivities, a meeting of industrialists, e-commerce representatives, coffee associations, and homestay owners will be convened.Strict Standard Operating Procedures (SOPs) and background verification protocols will be enforced across all establishments to tighten regional security. #KalaburagiArrest #PriyankKharge #TerrorLinks #KarnatakaPolice #CentralIntelligence #WestBengalNative #KalaburagiNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬