Перейти к содержимому

ಅಭೂತಪೂರ್ವವಾಗಿ ಜರುಗಿದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ

VK Kannada News

0:00 / 0:00

ಅಭೂತಪೂರ್ವವಾಗಿ ಜರುಗಿದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ

96 просмотров · 2 нед. назад
VK Kannada News
1,1 тыс. подписчиков
96 просмотров · 2 нед. назад
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಕನ್ನಡ ಸಾಹಿತ್ಯ - ಸಂಸ್ಕೃತಿ- ಕನ್ನಡ ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡ ಅಕ್ಷರ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ದಿನಾಂಕ: ೨೬/೦೯/೨೦೨೬ ರಂದು ಹೆಚ್.ಬಿ.ಆರ್ ಬಡಾವಣೆಯ ದಕ್ಷಿಣ. ಅಯೋಧ್ಯೆ ಯ ಶ್ರೀ ಸಾಯಿ ಕಲಾ ಮಂದಿರದಲ್ಲಿ ನಡೆದ ಅದ್ದೂರಿಯಾಗಿ ನಡೆದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಶಿಕ್ಷಣ ಮತ್ತು ಇತಿಹಾಸ ತಜ್ಞರಾದ ಡಾ.ಎಂ.ಬಸವರಾಜಯ್ಯ ರವರು ವಹಿಸಿದ್ದರು. ಬೆಳಿಗ್ಗೆ ೮ ಗಂಟೆಗೆ ಶ್ರೀ ಸಾಯಿ ಕಲಾ ಮಂದಿರದ ಆವರಣದಲ್ಲಿ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ, ನಾಡಧ್ವಜವನ್ನು ಕ್ರಮವಾಗಿ ಮಾಜಿ ಬಿ.ಬಿ.ಎಂ.ಪಿ ಸದಸ್ಯರು, ಕನ್ನಡ ಪರ ಹೋರಾಟಗಾರರಾದ ಎಸ್.ಸಂಪತ್ ಕುಮಾರ್, ಬೆಂಗಳೂರು ನಗರಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಎಂ.ಪ್ರಕಾಶಮೂರ್ತಿ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಕ.ಸಾ.ಪ ಅಧ್ಯಕ್ಷರಾದ ಯೋಗಶ್ರೀ ವರ್ಧಮಾನ ಕಳಸೂರು ರವರುಗಳು ನೆರವೇರಿಸಿದರು.