Перейти к содержимому

JNANASAGARA KANNADA RAJYOTSAVA & CHILDRENS DAY 2024

JNANASAGARA INTERNATIONAL PUBLIC SCHOOL

0:00 / 0:00

JNANASAGARA KANNADA RAJYOTSAVA & CHILDRENS DAY 2024

1 388 просмотров · 1 г. назад
JNANASAGARA INTERNATIONAL PUBLIC SCHOOL
1,48 тыс. подписчиков
1 388 просмотров · 1 г. назад
ಚನ್ನರಾಯಪಟ್ಟಣದ ನಾಗೇಶ್ ಎಜುಕೇಷನ್ ಟ್ರಸ್ಟ್ ನ ಅಂಗ ಸಂಸ್ಥೆಗಳಾದ ಜ್ಞಾನಸಾಗರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಜ್ಞಾನಸಾಗರ ಪಿಯು ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಸಾಗರ ಕನ್ನಡ ಸಪ್ತಾಹ 2024 ದಿನಾಂಕ 11 ನವಂಬರ್ 2024 ರಿಂದ ದಿನಾಂಕ 16 ನವಂಬರ್ 2024ರ ವರೆಗೆ ನಡೆಯಿತು. ಕ್ರಾಫ್ಟ್ ವರ್ಕ್, ಕನ್ನಡ ಗೀತೆಗಳ ಗೀತಗಾಯನ, ರಸಪ್ರಶ್ನೆ, ಛದ್ಮವೇಷ, ಪ್ರಬಂಧ, ಕವಿಗಳ ಮಾಹಿತಿ ಸಂಚಿಕೆ ತಯಾರಿಕೆ, ತರಗತಿ ಕೊಠಡಿ ಅಲಂಕಾರ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾದರು. ದಿನಾಂಕ 16 ನವಂಬರ್ 2024ರ ಶನಿವಾರ ಜ್ಞಾನಸಾಗರ ಶಾಲಾವರಣದ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ನಾಗೇಶ್ ಎಜುಕೇಷನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ. ನಾಗೇಶ್ ರವರು, ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಾದ ಡಾ. ಭಾರತಿ ನಾಗೇಶ್ ರವರು, ನಿರ್ದೇಶಕರಾದ ಶ್ರೀಯುತ ನಾರಾಯಣ್ ರವರು, ಶ್ರೀಯುತ ಲಕ್ಷ್ಮೇಗೌಡರವರು, ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಡೀನ್ ರವರಾದ ಡಾ. ಸುಜಾ ಪಿ.ಎಸ್. ರವರು, ಆಡಳಿತಾಧಿಕಾರಿಗಳಾದ ಶ್ರೀಯುತ ಪಿಲಿಫ್ ಸಿ.ಪಿ. ರವರು ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಕೆ. ನಾಗೇಶ್ ರವರು ಕನ್ನಡ ನಾಡು ನುಡಿಯನ್ನು ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಕೆ ಮಾಡುತ್ತಿದ್ದರೂ ಸಹ ಇತ್ತೀಚಿನ ದಿಗಳಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಲು ಎಲ್ಲಾ ವಿದ್ಯಾರ್ಥಿಗಳು ಕನ್ನಡದ ಕಟ್ಟಾಳುಗಳಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಯನ್ನು ನುಡಿದ ಡಾ. ಭಾರತಿ ನಾಗೇಶ್ ರವರು ಮಕ್ಕಳ ದಿನದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಕಥೆಯ ಮೂಲಕ ಮಕ್ಕಳ ಮನ ಮುಟ್ಟುವಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆ ಕಾರ್ಯಕ್ರಮದ ನಂತರ ಬೋಧಕ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಗಳು ಸುಂದರವಾಗಿ ಮೂಡಿ ಬಂದವು. ಕಲಾಭಾರತಿ ಮಹಾರಾಷ್ಟ್ರ ಇವರ ವತಿಯಿಂದ ನಡೆಸಲಾದ ಚಿತ್ರಕಲೆ ಮತ್ತು ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜ್ಞಾನಸಾಗರ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈಕ್ಷಿತ್ ಆರ್ ಎಂಬ ವಿದ್ಯಾರ್ಥಿ ರಾಷ್ಟ್ರೀಯ ಮಟ್ಟದಲ್ಲಿ 9ನೇ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾನೆ. ಹಾಗೂ ಚಿತ್ರಕಲಾ ಶಿಕ್ಷಕರಾದ ಉಮೇಶ್ ಕೆ, ಜಾನಕಿ ಮತ್ತು ಪೂರ್ಣಿಮಾ ರವರಿಗೆ ಉತ್ತಮ ಸಂಘಟನಾ ಶಿಕ್ಷಕರು ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಅತ್ಯುತ್ತಮ ಶಾಲೆ ಎಂಬ ಕೀರ್ತಿಗೆ ಜ್ಞಾನಸಾಗರ ಶಾಲೆಯು ಪಾತ್ರವಾಗಿದೆ. ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂತು.