ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ
Suddinimagagi, Hubli
0:00 / 0:00
ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ
126 просмотров · 3 нед. назад
Suddinimagagi, Hubli
18 подписчиков
126 просмотров · 3 нед. назад
ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ
ಹುಬ್ಬಳ್ಳಿ: ನಮ್ಮ ಕರ್ನಾಟಕ ಸೇನೆ ಸಂಸ್ಥಾಪಕರಾದ ಬಸವರಾಜ ದೇವರಮನಿ ಹಾಗೂ ದಿ. ಅಮೃತ ಇಜಾರಿ ಅವರ ಸ್ಮರಣಾರ್ಥ ಪ್ರತಿವರ್ಷದಂತೆ ಈ ವರ್ಷವೂ ಗಣೇಶೋತ್ಸವದ ಒಂಬತ್ತನೇ ದಿನದ ವಿಸರ್ಜನೆ ಅಂಗವಾಗಿ ಹುಬ್ಬಳ್ಳಿಯ ಬಮ್ಮಾಪುರ ಓಣಿಯ ಶ್ರೀ ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಈ ಸಂದರ್ಭದಲ್ಲಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಅಲ್ಲದೆ, ಶ್ರೀ ವೀರಭದ್ರೇಶ್ವರ ಭಜನಾ ಮಂಡಳಿಯ ಎಲ್ಲಾ ಮಹಿಳಾ ಸದಸ್ಯೆಯರಿಗೆ ಊಡಿ ತುಂಬಿ ಗೌರವಿಸಿ ಸನ್ಮಾನಿಸಲಾಯಿತು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪತ್ರಕರ್ತರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಬಿಜವಾಡ, ಶಶಿಕಾಂತ್ ಬಿಜವಾಡ, ಶಿವಕುಮಾರ್ ಮೆಣಸಿನಕಾಯಿ, ಸುರೇಶ್ ಗೋಕಾಕ್, ಬಸವರಾಜ ದೇವರಮನಿ, ಶೀತಲ್ ಮಲಗಾವಿ , ಬಸವರಾಜ್ ಸಾಲಿ , ಸಂಘಟನೆಯ ಪದಾಧಿಕಾರಿಗಳು, ಭಜನಾ ಮಂಡಳಿಯ ಸದಸ್ಯರು ಹಾಗೂ ಓಣಿಯ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಗಣೇಶೋತ್ಸವದ ಅಂಗವಾಗಿ ನಡೆದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ, ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಿತು.#suddinimagagi #hublidharwad #shorts #shortvideo
#viral #trending #explorepage #explore #instagram #fyp #instagood #love #reels #like #tiktok #follow #foryou #viralpost #viralvideos #photography #likeforlikes #fashion #followforfollowback #memes #instadaily #music #india #indonesia #reelsinstagram #trend #viralreels #likes #foryoupage #photooftheday