Перейти к содержимому

Krishnana Haadu | ಕೃಷ್ಣನ ಹಾಡು. #krishnabhajan #lordkrishna #littlekrishna #krishnajanmashtami

PraKirana

0:00 / 0:00

Krishnana Haadu | ಕೃಷ್ಣನ ಹಾಡು. #krishnabhajan #lordkrishna #littlekrishna #krishnajanmashtami

639 просмотров · 3 недели назад
PraKirana
186 подписчиков
639 просмотров · 3 недели назад
FOR FULL LYRICS SEE THE DESCRIPTION-- ಕೃಷ್ಣಾಷ್ಟಮಿಯ ಪ್ರಯುಕ್ತ: 🪔ಕೃಷ್ಣನ ಹಾಡು🪔 ಅವತರಿಸಿದ ಹರಿಯು | ಲೋಕೋಧ್ದಾರಕವತರಿಸಿದ ಹರಿಯು || ಅವನಿ ಭಾರಕರಾಗಿ ಜನಿಸಿರ್ದ ಶಿಶುಪಾಲ | ಕಂಸಾದಿ ಅಸುರರ ಹತಗೊಳಿಪುದಕಾಗಿ || ಪ|| ವಸುಧೆ ಪಾಲಕ ಕಂಸನು | ವೈಭವದಲಿ ತಂಗಿ ದೇವಕಿ ದೇವಿಯ || ವಸುದೇವ ರಾಜಗೆ ಧಾರೆಯನೆರೆದಿತ್ತ | ಸಂತೋಷ ಸಮಯದಿ ನುಡಿಯೊಂದ ಕೇಳಿದ || ೧ || ತಂಗಿಯ ಉದರದಲಿ | ಜನಿಸುವ ಕಂದ ನಿನ್ನನ್ನು ಕೊಲ್ಲುವನು || ಎಂದ ಆ ನುಡಿ ಕೇಳಿ ಕೆರಳಿ ತಾ ಕಂಸನು | ತಂಗಿ ಭಾವಂದಿರ ಸೆರೆಯೊಳಗಿಟ್ಟನು || ೨ || ಕಳೆದವು ವರುಷಗಳು | ಕಂಸನು ತನ್ನ ತಂಗಿ ದೇವಕಿ ಗರ್ಭದಿ || ಜನಿಸಿರ್ದ ಹಸುಳೆಗಳೆಲ್ಲರ ಮರ್ಧಿಸಿ | ತನಗಿನ್ನು ಭಯವಿಲ್ಲ ಎಂದೆ ಅರಿತ ತಾನು || ೩ || ಶ್ರಾವಣ ಬಹುಳಷ್ಠಮಿ | ಆ ದಿನದಲಿ ಮಧ್ಯ ರಾತ್ರಿಯ ಸಮಯದಿ || ಅವನಿ ಪಾಲಕ ಗುರು ಶ್ರೀಹರಿ ಮುದದೊಳು | ದೇವಕಿ ದೇವಿಯ ಉದರದಿ ಜನಿಸಿದ || ೪ || ಪ್ರೇಮದಿಂದಲಿ ತಾ ಮಗು | ನಾಡಿದ ಮಾತ ಲಾಲಿಸಿ ಬೇಗದಲಿ || ಆ ಮಹಾ ಭೂಪತಿ ಸಡಗರದಿಂದಲಿ | ಕಂದನ ಎತ್ತಿ ತಾ ನಡೆದ ಸೆರೆಮನೆಯಿಂದ || ೫ || ದೈವ ಸಹಾಯವನು | ಪಡೆದನು ತಾನು ವಸುದೇವ ಭೂಮಿಪಾಲ || ರಭಸದಿ ಹರಿಯುವ ಯಮುನೆಯ ತಾ ದಾಟಿ | ಕಂದನ ನಂದನ ಗೋಕುಲದೊಳಗಿಟ್ಟು || ೬|| ನಂದ ಗೋಕುಲದೊಳಗೆ | ಗೋಪಾಲಕರೊಡಗೂಡಿ ಶ್ರೀಹರಿಯು || ನಂದ ಗೋಪಿಯರೊಡನಾಡುತ್ತ ಮುದದಲಿ | ಶ್ರೀಕ್ರಷ್ಣ ನೆನ್ನುವ ಪೆಸರ ತಾ ಪಡೆದನು || ೭|| ಕೆಲ ವರ್ಷ ಕಳೆದಿರಲು | ಶ್ರೀಕ್ರಷ್ಣನು ಮಾವನ ನಿಜ ಗ್ರಹಕೆ || ಧಾವಿಸಿ ತಾ ಬಂದು ಮಾವ ಕಂಸನ ಕೊಂದು | ತಂದೆ ತಾಯಿಯರನ್ನು ಸೆರೆಯಿಂದ ಬಿಡಿಸಿದ || ೮||