Ninna Angaladolage- Official video song | ನಿನ್ನ ಅಂಗಳದೊಳಗೆ | #mantralayam | ft. Shruthi R Shastry
Natyasurabhi Centre for performing Arts
0:00 / 0:00
Ninna Angaladolage- Official video song | ನಿನ್ನ ಅಂಗಳದೊಳಗೆ | #mantralayam | ft. Shruthi R Shastry
112 066 просмотров · 3 года назад
Natyasurabhi Centre for performing Arts
1,73 тыс. подписчиков
112 066 просмотров · 3 года назад
#ninnaangaladolage #videosong #gururayaru #mantralayam #mantralaya #raghavendra #raghavendrasongs #devotionalsongs #srsmutt #raghavendraswamy #raghavendraswamytemple #raghavendraswamydevotionalsongs #sriraghavendraswamy #moolarama
ನಿನ್ನ ಅಂಗಳದೊಳಗೆ- ಗೀತ ಚಿತ್ರಣ
'ನಿನ್ನ ಅಂಗಳದೊಳಗೆ', ಈ ಗೀತೆಯು ಗುರು ರಾಯರ ( ಶ್ರೀ ರಾಘವೇಂದ್ರ ) ಒಂದು ಜನಪ್ರಿಯ ಭಕ್ತಿಗೀತೆಯಾಗಿದ್ದು, ನಮ್ಮ ಸಂಸ್ಥೆಯಾದ ನಾಟ್ಯ ಸುರಭಿಯು ಈ ಭಕ್ತಿಗೀತೆಯನ್ನು ನಿರ್ಮಿಸುವುದರ ಜೊತೆಗೆ, ಗುರುರಾಯರ ಸನ್ನಿಧಿಯಲ್ಲೇ ತನ್ನ ವೃಂದದೊಟ್ಟಿಗೆ ಹಾಡಿ ಗುರುರಾಯರಾಯರಿಗೆ ಭಕ್ತಿಯಿಂದ ನಮ್ಮ ಕಿರು ಸೇವೆಯನ್ನ ಅರ್ಪಿಸುವ ಪ್ರಯತ್ನ ಮಾಡಿದ್ದೇವೆ. ಈ ಗೀತೆಯನ್ನು ಹೊರತರಲು ಶ್ರಮಿಸಿದ ಎಲ್ಲ ತಾಂತ್ರಿಕ ವರ್ಗಕ್ಕೆ, ಗುರು-ಹಿರಿಯರಿಗೆ, ಪ್ರಿಯ ವಿದ್ಯಾರ್ಥಿ ವೃಂದಕ್ಕೆ ಹಾಗು ಅವರ ಪೋಷಕರಿಗೆ, ಮಠದ ಆಡಳಿತ ಮಂಡಳಿಗೆ ಹಾಗು ಇನ್ನಿತರರಿಗೂ ನಮ್ಮ ವಂದನೆಗಳು. ಈ ಗೀತೆಯನ್ನು ಕೇಳಿ ಹಾಗು ಹಂಚುವುದರೊಂದಿಗೆ ಗುರುರಾಯರ ಕೃಪೆಗೆ ಪಾತ್ರರಾಗೋಣ.
With Divine blessings of:
Sri Sri Subhudendra theertharu -
Peetadhipathigalu
Sri Raghavendra Swamy Mutt - Mantralayam
Credits:
Produced by : Natyasurabhi Centre for Performing Arts ( Kishore )
Singer: Shruthi R Shastry
Direction : Manojavvam Aatreya
Production assistance: Aatreya Studios
Bengaluru
Main composition: Puttur Narasimha Naik
Lyrics: Sri. Vittalesha Daasaru
Recording, Mixing & Mastering: Ashwin J Prabhath
Visuals and Drone : Manoj Vasishta
Editing, Colouring and posters: Manoj Hosmani ( MP Creations )
Tabla: Roopak Kallurkar
Bansuri: Bharath Aatreyas
Harmonium & Programming : Manojavvam Aatreya
Special Thanks:
Mutt's Youtube Channel - Mantralaya Vahini
Management: Sri Raghavendra Swamy Mutt – Mantralayam
Shrinidhi.M.Karanam: Media Incharge – SRS Mutt
K Bheemsen Rao & all Media team
Special Thanks:
D M Aanand Rao
Kindly watch, Share and Subscribe
Follow us on:
YOUTUBE: / @natyasurabhicentreforperfo6207
FACEBOOK: / shrudance31
INSTAGRAM: / natyasurabhi
NATYASURABHI CENTRE FOR PERFORMING ARTS
For queries and info
Mail: kakarla.ramamurthy@gmail.com
Call/ WhatsApp : +91 9008044835
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ
ಘನ್ನ ಶ್ರೀಗುರುರಾಘವೇಂದ್ರ ಸಂಪನ್ನ ।।ಪ ।।
ವರುಷ ವರುಷಕೆ ನಿನ್ನ ದರುಶನವ ದಯಾ ಮಾಡೋ
ದುರಿತ ನಾಶನ ಗೈದು ಪರಿಶುದ್ಧಗೊಳಿಸೋ
ಅರಿತು ಅರಿಯದೆ ಗೈವ ಪಾಪ ಕರ್ಮವ ಕಳೆದು
ನಿರುತ ಶ್ರೀಹರಿ ಕೃಪೆಗೆ ಪಾತ್ರನಾಗಿರಿಸೋ ।।೧।।
ನಿನ್ನ ಭಕುತರ ಪಾದ ರಜದೊಳಿದಾಡಿಸೋ
ನಿನ್ನ ಗುಣ ಕೀರ್ತನೆಯ ಕಿವಿಗಳಲಿ ನಿಲಿಸೋ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ರಘುಪತಿ ದಿವ್ಯ ದರುಶನವ ಕೊಡಿಸೋ ।।೨।।
ಪ್ರಲ್ಹಾದ ರಾಯನೀ ಬಲ್ಲಿದನು ಜಗದೊಳಗೆ
ಕಾಯ್ವ ನರಹರಿ ದೂತಾನಹುದೋ
ಎಲ್ಲ ರಾಜರ ರಾಜ ವ್ಯಾಸರಾಯನೇ ಸತ್ಯ
ಇಲ್ಲಿ ಶ್ರೀ ಪರಿಮಳರಾಯರ ಮಹಿಮೆಯೇ ಸ್ತುತ್ಯ ।।೪।।
ಏನು ಬೇಡಲಿ ನಾನು ದಾನ ಕರ್ಣನು ನೀನು
ಜ್ಞಾನಿ ಸದ್ಗುರು ಕಲ್ಪವೃಕ್ಷ ಸುರಧೇನು
ದೀನ ರಕ್ಷಕ ವಿಠಲೇಶ ಕರುಣಾಭರಣ
ಸಾನುರಾಗದಿ ನಿನ್ನ ಸೇವಕರೊಳಿರಿಸೋ।।೫।।