Inspiring story of Aranha coconut oil mill | Nakre | Karkala | Noel Dolphi Aranha | Avinash Kamath
Wide Angle
0:00 / 0:00
Inspiring story of Aranha coconut oil mill | Nakre | Karkala | Noel Dolphi Aranha | Avinash Kamath
26 778 просмотров · 1 г. назад
Wide Angle
8,72 тыс. подписчиков
26 778 просмотров · 1 г. назад
ತಿಂಗಳ ಹಿಂದೆ ಆಶ್ರಮವೊಂದರಲ್ಲಿ ಕಾರ್ಯಕ್ರಮಕ್ಕೆ ಅಂತ ಹೋಗಿದ್ದೆ. ಬೇರೆ ಯಾವುದೇ ನಿರೀಕ್ಷೆಯಿಲ್ಲದೆ ಅಲ್ಲಿಗೆ ಹೋದ ನನಗೆ ಒಟ್ಟು 3 ವಿಶೇಷ ಎನಿಸುವ ವ್ಯಕ್ತಿಗಳ ಪರಿಚಯವಾಯ್ತು. ಅದರಲ್ಲೊಬ್ಬರು Joel D'souza. ಅವರ ಜೊತೆಗಿದ್ದ ವ್ಯಕ್ತಿಯ ಸಾಧನೆ ಮತ್ತು ನಡೆದು ಬಂದ ದಾರಿಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಂಡದ್ದು ಮಾತ್ರ ಅಲ್ಲ ' ಅವಿನಾಶ್ ಅವ್ರೆ.. ಎಷ್ಟೋ ಜನರ ಕತೆಗಳನ್ನು ಹೇಳಿದ್ದೀರಿ ಅಲ್ವಾ . ಇವರದ್ದನ್ನು ಹೇಳಲೇಬೇಕು' ಎಂದರು.
ಕಳೆದೈದು 5 ವರ್ಷಗಳಲ್ಲಿ ನೀವು ನೋಡಿರುವ ನನ್ನ ಕತೆಗಳು ಸರಿಯಾದ research ನಂತರವೇ ವಿಡಿಯೋ ರೂಪಕ್ಕಿಳಿದಿದೆ. ಹೀಗೆ ಇವರ ಕುರಿತು ತಿಳಿಯಲು ಹೊರಟಾಗ ಅಚ್ಚರಿ ಎನಿಸಿತು.
ಕಾರ್ಕಳ ತಾಲೂಕಿನ ನಕ್ರೆ ಒಂದು ಪುಟ್ಟ ಊರು. ಒಬ್ಬ ಮಾಮೂಲಿ lorry ಚಾಲಕನಾಗಿದ್ದ ಹುಡುಗ ತನ್ನೂರಲ್ಲೇ ಯಶಸ್ವೀ ಉದ್ಯಮವನ್ನು ಕಟ್ಟಿ ಬೆಳೆಸಿ ಇಂದು ಬಹುಕೋಟಿ ಉದ್ಯಮಿಯಾಗಿ ಹೊರಹೊಮ್ಮಿರುವ ಕತೆ ಇದು.
ಕೋಟಿ ಕೋಟಿ ಜನಸಂಖ್ಯೆಯಿರುವ ಈ ಭೂಮಿಯ ಮೇಲಿನ ಸ್ಪೂರ್ತಿಯ ಕತೆಗಳಲ್ಲಿ ಇದೂ ಒಂದಾಗಬಹುದು!
ಕೊನೆಯಲ್ಲಿ ' ಆ ದಿನಗಳಲ್ಲಿ ನನಗೆ ಈ ಉದ್ಯಮದ ಬಗ್ಗೆ ಕಲಿಯಬೇಕಾದರೆ ಹೇಳಿಕೊಡಲು ಯಾರೂ ಇರಲಿಲ್ಲ. ಈಗ ಯುವಕರಿಗೆ ನಾನು ಕಲಿಸುತ್ತೇನೆ ಎಂದರೆ ಕಲಿಯುವ ಆಸಕ್ತಿ ಯಾರಿಗೂ ಇಲ್ಲ' ಎಂದರು. ತಾನು ನಡೆದು ಬಂದ ದಾರಿಯನ್ನು ಯಾವುದೇ ಅಳುಕಿಲ್ಲದೆ ಎಳೆಎಳೆಯಾಗಿ ಅತ್ಯಂತ ವಿನೀತ ಭಾವದಿಂದ ಹೇಳಿಕೊಂಡ Arahna Coconut Oil Mill ಮಾಲೀಕ Noel Dolphi Arahna ಅವರ ಕತೆ ಇಲ್ಲಿದೆ.
ಈ ಕತೆಯನ್ನು ನಿಮ್ಮಲ್ಲಿ ತಲುಪಿಸಲು ಸಾಧ್ಯವಾಗಿಸಿದ್ದು ಅವರದೇ ಊರಿನ ಅವರ ಸ್ನೇಹಿತ Joel D'souza. ಅವರಿಗೆ ಧನ್ಯವಾದ. ತನ್ನ ಇನ್ನೊಬ್ಬ ಸ್ನೇಹಿತನ ಕತೆಯನ್ನೂ ಹೇಳಬೇಕು ಎಂದಿದ್ದಾರೆ. ಆ ಸಮಯಕ್ಕಾಗಿ ಕಾಯುತ್ತಿದ್ದೇನೆ. ಕತೆಗಳನ್ನು ಕೇಳುವುದರಲ್ಲಿ ಮಜಾ ಇದೆ. ಹೀಗೆ ಹೇಳಲು ಹೊರಟರೆ ಸಾವಿರ ಮಾತಿದೆ.
Arahna Coconut Oil Mill Contact : 9980247738
#udupi #karkala #nakre #cocunutoil #oilmill #businesssuccess #lifestyle Joel Attur