ಉಪ್ಪರಪೇಟೆ ದರ್ಗಾಗೆ ಭೇಟಿ ಕೊಟ್ಟ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ವೇಣುಗೋಪಾಲ್(ಗೋಪಿ)...!
A1tvnews chintamani
0:00 / 0:00
ಉಪ್ಪರಪೇಟೆ ದರ್ಗಾಗೆ ಭೇಟಿ ಕೊಟ್ಟ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ವೇಣುಗೋಪಾಲ್(ಗೋಪಿ)...!
1 518 просмотров · 2 дн. назад
A1tvnews chintamani
11,7 тыс. подписчиков
1 518 просмотров · 2 дн. назад
ಉಪ್ಪಾರಪೇಟೆ ದರ್ಗಾ ಉರುಸ್ ಹಾಗೂ ಕವ್ವಾಲಿ ಕಾರ್ಯಕ್ರಮ:ಸೌಹಾರ್ದತೆ ಮತ್ತು ಶಾಂತಿಯ ಪ್ರತೀಕ:ಜೆ.ಕೆ. ಕೃಷ್ಣಾರೆಡ್ಡಿ
ಚಿಂತಾಮಣಿ:ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಮತ್ತು ಶಾಂತಿ-ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಉಪ್ಪಾರಪೇಟೆಯಲ್ಲಿ ಎರಡು ದಿನಗಳ ಕಾಲ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು,ಮುರುಗುಮಲ್ಲ ದರ್ಗಾ ಹಾಗೂ ಉಪ್ಪಾರಪೇಟೆಯ ದರ್ಗಾ ಉರುಸ್ ಕಾರ್ಯಕ್ರಮಗಳಲ್ಲಿ ಮೂರು ದಿನಗಳ ಕಾಲ ಗಂಧದ ಕಾರ್ಯಕ್ರಮ ಮತ್ತು ಕವ್ವಾಲಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ಜರುಗುತ್ತವೆ ಎಂದರು.ಎಲ್ಲಿಯೂ ಯಾವುದೇ ಸಣ್ಣ ಗೊಂದಲ ಅಥವಾ ಗದ್ದಲವಿಲ್ಲದೆ ಎಲ್ಲರೂ ಅತ್ಯಂತ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಎಂದು ಪ್ರಶಂಸಿಸಿದರು.
ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಲಿದ್ದು, ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಮತ್ತು ಜನರೆಲ್ಲರೂ ಸುಖ-ಶಾಂತಿಯಿಂದ ನೆಲೆಸಲಿ ಎಂದು ನಿರಂತರವಾಗಿ ಪ್ರಾರ್ಥಿಸಲಾಗುತ್ತದೆ ಎಂದು ಅವರು ಹೇಳಿದರು.
ನಂತರ ಬಿಜೆಪಿ ಮುಖಂಡ ವೇಣುಗೋಪಾಲ್ ಮಾತನಾಡಿ ಚಿಂತಾಮಣಿ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಮರು ಯಾವುದೇ ಭೇದಭಾವವಿಲ್ಲದೆ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ ಎಂದರು.ಚಿಂತಾಮಣಿಯ ದರ್ಗಾಗಳು ಅತ್ಯಂತ ಪ್ರಸಿದ್ಧಿ ಪಡೆದಿದ್ದು,ಇಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಭಾಗವಹಿಸುತ್ತಾರೆ ಎಂದರು. ದರ್ಗಾ ಕಮಿಟಿಯವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದು, ಈ ಹಿಂದೆ ರಸ್ತೆ ಸಮಸ್ಯೆಯಿದ್ದರೂ ಈಗ ಅಭಿವೃದ್ಧಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ದೇಶ ಜಾತ್ಯಾತೀತ ತತ್ವದ ಮೇಲೆ ನಿಂತಿದೆ.ಜಾತಿ-ಮತಗಳ ಗಡಿಯನ್ನು ಮೀರಿ ಎಲ್ಲರೂ ಇಂತಹ ಸೌಹಾರ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದರ್ಗಾ ಕಮಿಟಿಯ ಪದಾಧಿಕಾರಿಗಳು ಮುಖಂಡರಾದ ಜಮೀರ್ ಪಾಷ,ಶಫಿ,ಅಕ್ಬ್,ನವಾಜ್, ರಫೀಕ್,ಜಿಯಉಲ್ಲಾ,ನವೀನ್,ಜನಾರ್ಧನ್,ಶ್ರೀನಿವಾಸ್ ಗೌಡ,ಫೋಟೋ ನಾರಾಯಣಪ್ಪ,ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.