ನವರಾತ್ರಿಗೆ ಹೇಳಿ ಮಾಡಿಸಿದ ಹಾಡು... ತಾಯಿಯನ್ನು ಕಾಪಾಡು ಎಂದು ಕೇಳುವ ಹಾಡು.. ನವರಾತ್ರಿ ಹಾಡು -4
MG Vlogs Mysuru
0:00 / 0:00
ನವರಾತ್ರಿಗೆ ಹೇಳಿ ಮಾಡಿಸಿದ ಹಾಡು... ತಾಯಿಯನ್ನು ಕಾಪಾಡು ಎಂದು ಕೇಳುವ ಹಾಡು.. ನವರಾತ್ರಿ ಹಾಡು -4
19 658 просмотров · 1 год назад
MG Vlogs Mysuru
13,1 тыс. подписчиков
19 658 просмотров · 1 год назад
ನವರಾತ್ರಿ ಹಾಡು -4
ದೇವಿ ಸ್ತುತಿ
ಬಾ ತಾಯಿ ಬಾ ಶಂಕರಿ ಜಗದೀಶ್ವರಿ
ಬಾ ತಾಯಿ ಬಾ ಶಂಕರಿ
ನೀ ಬಂದು ಕರ ಹಿಡಿದು
ಕಂದರನು ಕಾಪಾಡು
ಬಾಳೆಂಬ ಕದನದಲಿ
ಜಯವನ್ನು ನೀ ನೀಡು
ಭಕ್ತರಿಗೆ ಅಭಯವನು ನೀ ನೀಡು ಬಾ
ಬಂದೆಲ್ಲ ಸಂಕಟವ ನೀ ನೀಗು ಬಾ
ಕವಿದಿರುವ ಕತ್ತಲಿಗೆ ಬೆಳಕಾಗಿ ಬಾ
ಅರಿವಿರದ ದಾರಿಯಲಿ ಗುರಿತೋರು ಬಾ
ಬದುಕಿನಲಿ ಸೋತಾಗ ಬಂಧುಗಳ ನಾ ಕಾಣೆ
ದುರಿತಗಳ ಕಳೆವವರು ಬೇರಿಲ್ಲ ನನ್ನಾಣೆ
ದಣಿದಿರಲು ನಿನ್ನನ್ನೇ ಕರೆಯುವೆನು ನಾ ನಂಬಿ
ಧ್ಯಾನದಲಿ ಮೌನದಲಿ ಚೈತನ್ಯ ನೀ ತುಂಬಿ
ಸಂಸಾರ ಸಾಗರವ ನೀ ದಾಟಿಸು
ಮನವನ್ನು ನಿನ್ನಲ್ಲಿ ನೆಲೆ ನಿಲ್ಲಿಸು
ಬಂದಿರುವ ಬಾಧೆಗಳ ದೂರಾಗಿಸು
ಅಂಜದಿಹ ಆತ್ಮಬಲ ಜೊತೆಯಾಗಿಸು
✍ ರಾಜೇಶ್ವರಿ ಜಿ ಹೆಗಡೆ ಹಿಲ್ಲೂರು
ಗಾಯನ:ಮಧುರಾ ಭಟ್
ಮತ್ತಷ್ಟು ಹಾಡಿಗಾಗಿ ನನ್ನ channal ಸಬ್ಸ್ಕ್ರೈಬ್ ಮಾಡಿಕೊಳ್ಳಿ..
ನಿಮ್ಮ ಒಂದು like, comment, share, subscribe ಮಾಡುವುದರ ಮೂಲಕ ನನಗೆ ಪ್ರೋತ್ಸಾಹ ನೀಡಿ... ನಿಮ್ಮ ಒಂದು like comment ಸಬ್ಸ್ಕ್ರೈಬ್ ನನಗೆ ಇನ್ನಷ್ಟು ಹಾಡನ್ನು ಹಾಡಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ..
ಈ channel ಅಲ್ಲಿ ನಾನು ಎಲ್ಲಾ ತರಹದ ಹಾಡು,ಶ್ಲೋಕ,
ಭಜನೆ,ಹಾಗೂ ಉಪಯುಕ್ತ ಮಾಹಿತಿ ನೀಡುವ ಪ್ರಯತ್ನ
Thank you 🙏for watching ❤️
ಧನ್ಯವಾದಗಳು ❤️🙏