Перейти к содержимому

"ಮನೆಯೊಳಗೊಂದು ಕಾಡು" | ಇದು ಬನಜಾಲಯ | ಭಾಗ - 1

Sankethana

0:00 / 0:00

"ಮನೆಯೊಳಗೊಂದು ಕಾಡು" | ಇದು ಬನಜಾಲಯ | ಭಾಗ - 1

3 058 просмотров · 5 дней назад
Sankethana
640 подписчиков
3 058 просмотров · 5 дней назад
ಮನೆಯೊಳಗೊಂದು ಕಾಡು! 🌿 ಮನೆಯೊಳಗೆ ಕಾಲಿಟ್ಟರೆ… ಹಾವಿನಂತೆ ಕಾಣುವ ಬಳ್ಳಿಗಳು, ಸಾವಿರಾರು ಬೀಜಗಳು, ಬೇರುಗಳು, ಎಲೆಗಳು, ತೊಗಟೆಗಳು, ಹೂವುಗಳು… ಇದು ಸಾಮಾನ್ಯ ಮನೆ ಅಲ್ಲ. ಇದು ಕೆ.ಪಿ. ರಮೇಶ್ ಅವರ ‘ಬನಜಾಲಯ’ — ನಮ್ಮ ಸುತ್ತಮುತ್ತಲಿನ ಕಾಡು ಮತ್ತು ಸಸ್ಯಗಳ ಅಪೂರ್ವ ಜ್ಞಾನವನ್ನು ಉಳಿಸಿಕೊಂಡಿರುವ ಒಂದು ವಿಶಿಷ್ಟ ಸಂಗ್ರಹಾಲಯ. ಕಾಡಿನಲ್ಲಿ ಔಷಧೀಯ ಸಸ್ಯಗಳನ್ನು ಹುಡುಕುತ್ತಾ ಹೋದಾಗ, ಅನೇಕ ಸಸ್ಯಗಳು ಅತಿಯಾದ ಬಳಕೆ, ಕೊಂಬೆ-ತೊಗಟೆಗಳ ಅಸಮರ್ಪಕ ಸಂಗ್ರಹ ಮತ್ತು ನಿರ್ಲಕ್ಷ್ಯದಿಂದ ನಿಧಾನವಾಗಿ ಕಣ್ಮರೆಯಾಗುತ್ತಿರುವುದನ್ನು ರಮೇಶ್ ಅವರು ಗಮನಿಸಿದರು. ಕಾಡು ಕಳೆದುಕೊಳ್ಳುತ್ತಿದ್ದ ಅವುಗಳ ‘ಉಳಿದ ಭಾಗಗಳನ್ನು’ ಮನೆಗೆ ತಂದು ಸಂರಕ್ಷಿಸಲು ಆರಂಭಿಸಿದ ಪ್ರಯತ್ನವೇ ಇಂದು 1,200 ಕ್ಕೂ ಹೆಚ್ಚು ಸಸ್ಯಗಳ ಸಂಗ್ರಹವಾಗಿರುವ ವನಜಾಲಯವಾಗಿ ಬೆಳೆದಿದೆ. ಇಲ್ಲಿ ಸಂಗ್ರಹವಷ್ಟೇ ಅಲ್ಲ… ಮನೆಯ ಹಿಂದಿನ ‘ಸೊಪ್ಪಿನ ಬೆಟ್ಟ’ದಲ್ಲಿ ಅಪರೂಪವಾಗುತ್ತಿರುವ ಸಸ್ಯಗಳನ್ನು ಮತ್ತೆ ಬೆಳೆಸುವ ಪ್ರಯತ್ನವೂ ನಡೆಯುತ್ತಿದೆ. ವಿದ್ಯಾರ್ಥಿಗಳು, ಸಂಶೋಧಕರು, ರೈತರು ಮತ್ತು ಸಸ್ಯಾಸಕ್ತರಿಗೆ ಜ್ಞಾನ ಹಂಚಿಕೊಳ್ಳುತ್ತಾ, ಸ್ಥಳೀಯ ಸಸ್ಯ ವೈವಿಧ್ಯವನ್ನು ಉಳಿಸುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಿರುವ ರಮೇಶ್ ಅವರ ಬದುಕಿನ ಪಯಣವೇ ಈ ಸಂಚಿಕೆ. ಕಾಡನ್ನು ಕಾಪಾಡುವುದು ಎಂದರೆ ಕೇವಲ ಮರಗಳನ್ನು ಉಳಿಸುವುದಲ್ಲ… ಅದರ ಜೊತೆಗಿರುವ ಜ್ಞಾನವನ್ನೂ ಉಳಿಸುವುದು. 🎥 Sankethana | ಸಂಚಿಕೆ 13 #sankethana #kannadadocumentary #unsungheroes #environmentalist #kannada #inspirationalstory #villagevlog #malnad #forestconservation #herbal #farmerlife #karnatakafocus