Siddayya Swamy Banni Lyrical Video | Chintan Vikas, Rajguru, Rajesh, Abhimanyu, B.V.Srinivas | Folk
Lahari Bhavageethegalu & Folk
0:00 / 0:00
Siddayya Swamy Banni Lyrical Video | Chintan Vikas, Rajguru, Rajesh, Abhimanyu, B.V.Srinivas | Folk
14 465 048 просмотров · 7 лет назад
Lahari Bhavageethegalu & Folk
2 млн подписчиков
14 465 048 просмотров · 7 лет назад
Lahari Bhavageethegalu & Folk Kannada Presents " Siddayya Swamy Banni " Song with Lyrics, Sung by Chintan Vikas, Rajguru, Rajesh, Abhimanyu, Music Composed by B.V.Srinivas. Kannada Bhavageethe, Lyrical video, Kannada Songs.
#SiddayyaSwamyBanni #SiddayyaSwamyBanniLyricalVideo #ChintanVikas #Rajguru #Abhimanyu #Rajesh #BVSrinivas #KannadaBhavageethegalu #Bhavageethegalu #KannadaSongs #KannadaGeethegalu #KannadaHitSongs #KannadaHits #JanapadaSongs #JanapadaGeethegalu #FolkSongs #KannadaNewSongs #KannadaOldSongs #KannadaAllTimeHits #MelodySongs #SadSongs #HappySongs #KannadaFolkSongs #LahariBhavageethegalu
Subscribe to our YouTube Channel : / @laharibhavageethegalu
----------------------------------------------
Song: Siddayya Swamy Banni
Program: So Ennire Sobana Ennire - Geetha Namana
Singer: Chintan Vikas, Rajguru, Rajesh, Abhimanyu
Music Director: B.V.Srinivas
Lyricist: Folk
Music Label : Lahari Music
------------------------------------------------
Listen Now On:
JioSaavn: https://www.jiosaavn.com/song/siddayy...
Spotify: https://open.spotify.com/track/6fIVSr...
Hungama: https://www.hungama.com/song/siddayya...
Gaana: https://gaana.com/song/siddayya-swamy...
Apple Music: / siddayya-swamy-banni-from-so-ennire-sobana...
Amazon Prime Music: https://music.amazon.in/albums/B079VN...
Wynk: https://wynk.in/u/PpCK5S8X7
Resso:
------------------------------------
Kannada Lyrics (ಕನ್ನಡ ಸಾಹಿತ್ಯ)
(ಪೀಠಿಕೆ)
ಗಜಮುಖನೆ ಗರ್ಭಶ್ರೀ ಗಣನಾಥಾ...
ಗಜಮುಖನೆ ಗರ್ಭಶ್ರೀ ಗಣನಾಥಾ...
ಇಲಿಯ ವಾಹನವೇರಿಪ ಶ್ರೀ ಗೌರಿ ವರಪುತ್ರ ಶಿವನ ಕುಮಾರ
ವಿದ್ಯಾದಾಯಕ ಕೊಡು ಎನಗೆ ನಿನ್ನ ಮತಿಯ ನಿನ್ನ ಪಾದಕಮಲಗಳಿಗೆ ಮೊದಲು ಶರಣಯ್ಯ
ಶರಣು ಶರಣಯ್ಯ... ಆ...
(ಪಲ್ಲವಿ)
ಆಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
ಆಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
(ಚರಣ 1)
ಮಡಿಕೇರಿ ತಾಲೂಕು ಅರಳೇಹಂಪಾಪುರ
ನೆರಲೇಸಾಲಿ ಗ್ರಾಮ ಎಡತೊರೆಯ ಚಂದಗಾಲ
ಕಾವೇರಿ ಬಂದಂತಹ ನದಿಯ ಪಕ್ಕದ ಒಳಗೆ
ಕಪ್ಪಡಿಯೇ ಕೈಲಾಸ ನಡುಗಡೆ ರಾಜಪ್ಪಾಜಿ
ಹೀರೆ ಚಂದಜಮ್ಮ, ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು
ಮಪ್ಪೆಗೊಡನ ಪುರದ ಗದ್ದುಗೆಯವರೇ
ಅಯ್ಯ ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪಾ
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
(ಚರಣ 2)
ಕೇಳಪ್ಪಾ ನನ್ನ ಕಂದ... ನೀಲಿ ಸಿದ್ದಪ್ಪಾಜಿ
ಮುಂದೆ ಕಲಿಯುಗದಲ್ಲಿ ಏಳು ವರ್ಷದ ಬಾಲೇ
ಋತುಮತಿಯಾಗಬೇಕು, ಎಂಟು ವರ್ಷಕ್ಕೆ ಅವಳು ಜೋಡಿಮಕ್ಕಳ ಹೆರಬೇಕು
ಜೋಡಿತೊಟ್ಟಿಲು ಕಟ್ಟಿಕೊಂಡು, ಜೋಗುಳ ಹಾಡಬೇಕು
ಅಯ್ಯ ಅತ್ತೆ ಮಾತು ಹಿಂದಾಗಬೇಕು, ಸೊಸೆ ಮಾತು ಮುಂದಾಗಬೇಕು
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
(ಚರಣ 3)
ಅದು ಅಲ್ಲದೆ ನನ್ನ ಕಂದ... ನಾಳೆ ಕಲಿಯುಗದಲ್ಲಿ
ಅಟ್ಟ ಬೆಟ್ಟಗಳ ಬಿಟ್ಟು ಹೊಲಗದ್ದೆ ಮಾಡಬೇಕು
ಹುಲಗಂಜಿಯಲ್ಲಿನ ಕೆಂಪು ಇಳಿತಾನೆ ಬರಬೇಕು
ಆರಕ್ಕೇರಿದ ಹೆಂಗಸು, ಮೂರಕ್ಕಿಳಿಯಬೇಕು
ಮೂರಕ್ಕಿಳಿಯೋ ಮುಂಚೆ ಅರೆಗಣ್ಣು ಕಾಣಬೇಕು
ಮಕ್ಕಳಿಲ್ಲದ ಬಂಜೇ ಮಕ್ಕಳ ಹೆರಲೇಬೇಕು
ಬೀದೀಲಿ ಬಿದ್ದ ಮಕ್ಕಳು, ಗದ್ದುಗೆಯೇರಬೇಕು
ಅಯ್ಯ ಅರವತ್ತೈದರ ಮುದುಕನು ನಾಳೆ ಹರೆಯದ ಬಾಲೆಯ ಕೇಳಬೇಕು
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
(ಚರಣ 4)
ಕೇಳಪ್ಪಾ ನನ್ನ ಕಂದ... ನಾಳೆ ಕಲಿಯುಗದಲ್ಲಿ
ನೀಲಿ ಸಿದ್ದಪ್ಪಾಜಿ ಮನೆಯ ಬಿಟ್ಟು ನೀವು ಮಠವ ಸೇರಬೇಕು
ಮಠದಲ್ಲಿ ಸ್ವಾಮಿಗಳು ಕಾವಿಯ ಧರಿಸುತ್ತಾರೆ
ಕಾವಿಯ ಧರಿಸಿಕೊಂಡು ಖದೀಮರಾಗುತ್ತಾರೆ
ಮಹಾಸ್ವಾಮಿಗಳಂತ ಮಠದಲ್ಲಿ ಕೂರುತ್ತಾರೆ
ಅಯ್ಯ ಮಠದಲ್ಲಿರುವ ಸ್ವಾಮಿಗಳಿಗೆ ಇಬ್ಬರು ಹೆಂಡಿರು ಬೇಕೇ ಬೇಕು
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
(ಪಲ್ಲವಿ)
ಆಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
ಆಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯಾ...
ಲಿಂಗಯ್ಯ ದಯೆ ಮಾಡೋ...
-----------------------------------
Enjoy & stay connected with us!!
Subscribe to our YouTube Channel : / @laharibhavageethegalu
Follow us on Instagram: / laharimusic
Like us on Facebook: / laharimusic
Follow Us on Twitter: / laharimusic