ಸಭೆಯಲ್ಲಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭದ್ರತೆ ಕುರಿತು ಚರ್ಚೆ
DD Chandana News
0:00 / 0:00
ಸಭೆಯಲ್ಲಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭದ್ರತೆ ಕುರಿತು ಚರ್ಚೆ
33 просмотра · 8 часов назад
DD Chandana News
111 тыс. подписчиков
33 просмотра · 8 часов назад
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಬಿಮ್ಸ್ಟೆಕ್ ಗೃಹ ಸಚಿವರ ಮೊದಲ ಸಭೆ ನಡೆಯಿತು.
ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭದ್ರತೆ, ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭದ್ರತೆ ಬಲಪಡಿಸಲು, ಭಯೋತ್ಪಾದನೆ, ಮಾದಕವಸ್ತು ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗೆ ಬಿಮ್ಸ್ಟೆಕ್ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ. ಭಯೋತ್ಪಾದಕರಿಗೆ ಯಾವುದೇ ದೇಶದಲ್ಲಿ ಆಶ್ರಯ, ತರಬೇತಿ ಅಥವಾ ಹಣಕಾಸಿನ ನೆರವು ದೊರೆಯದಂತೆ ನೋಡಿಕೊಳ್ಳುವುದು ಎಲ್ಲ ರಾಷ್ಟ್ರಗಳ ಜವಾಬ್ದಾರಿಯಾಗಿದೆ ಎಂದರು
ಮಾದಕವಸ್ತು ಕಳ್ಳಸಾಗಣೆಯು ಯುವ ಜನರ ಜೀವನ, ಸಮಾಜ ಮತ್ತು ಭವಿಷ್ಯಕ್ಕೆ ದೊಡ್ಡ ಅಪಾಯವಾಗಿದೆ.
ಇದನ್ನು ತಡೆಯಲು ಎಲ್ಲ ರಾಷ್ಟ್ರಗಳು ಸಮಗ್ರ ಕಾರ್ಯತಂತ್ರ ರೂಪಿಸಬೇಕು. ಗುಪ್ತಚರ ಮಾಹಿತಿ ಹಂಚಿಕೆ, ಸೈಬರ್ ಅಪರಾಧಗಳ ನಿಯಂತ್ರಣ, ಪರಾರಿಯಾದ ಅಪರಾಧಿಗಳ ಹಸ್ತಾಂತರ ಮತ್ತು ಕಾನೂನು ಸಹಕಾರಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
#LiveDDChandanaNews #DDChandanaNews #DDChandana #DDKannada