Перейти к содержимому

ಮರ ಕಡಿಯದೇ ಮಾವಿನ ತಳಿ ಬದಲಿಸಿ! | ಹಳೆಯ ತೋತಾಪುರಿಗೆ ಮಲ್ಲಿಕಾ ಕಸಿ! Top Shoot Grafting

Vivara - ವಿವರ

0:00 / 0:00

ಮರ ಕಡಿಯದೇ ಮಾವಿನ ತಳಿ ಬದಲಿಸಿ! | ಹಳೆಯ ತೋತಾಪುರಿಗೆ ಮಲ್ಲಿಕಾ ಕಸಿ! Top Shoot Grafting

1 428 просмотров · 4 нед. назад
Vivara - ವಿವರ
40,8 тыс. подписчиков
1 428 просмотров · 4 нед. назад
ಹಳೆಯ ಮಾವಿನ ಮರವನ್ನು ಕಡಿಯಬೇಕಿಲ್ಲ… ಅದೇ ಮರಕ್ಕೆ ಹೊಸ ತಳಿ ಕಸಿ ಮಾಡಿ ಮತ್ತೆ ಲಾಭದಾಯಕ ಫಸಲು ಪಡೆಯಬಹುದು! 🌱🥭 ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವ ಹಳೆಯ ತಳಿಯ ಮಾವಿನ ಮರಗಳನ್ನು ಬುಡಸಮೇತ ಕಡಿಯುವ ಬದಲು, ಅದೇ ಮರದ ಕಾಂಡ ಮತ್ತು ಬಲಿಷ್ಠ ಬೇರು ವ್ಯವಸ್ಥೆಯನ್ನು ಬಳಸಿಕೊಂಡು Top Shoot / V-Grafting ಮೂಲಕ ಉತ್ತಮ ಬೇಡಿಕೆಯಿರುವ ಮಾವಿನ ತಳಿಗಳನ್ನು ಬೆಳೆಸುವ ವಿಧಾನವನ್ನು ಈ ವಿಡಿಯೋದಲ್ಲಿ ನೋಡೋಣ. ಗೌರಿಬಿದನೂರಿನ ದೊಡ್ಡಕುರುಗೋಡು ಗ್ರಾಮದ ಪ್ರಗತಿಪರ ನೈಸರ್ಗಿಕ ಕೃಷಿಕ ಶ್ರೀ ರಘುನಾಥ್ ರೆಡ್ಡಿ ಅವರ ತೋಟದಲ್ಲಿ ಸುಮಾರು 20 ವರ್ಷಗಳ ಹಳೆಯ ತೋತಾಪುರಿ ಮಾವಿನ ಮರಗಳಿಗೆ ಮಲ್ಲಿಕಾ ಮತ್ತು ಸಕ್ಕರೆಗುತ್ತಿ ತಳಿಗಳ ಕಸಿ ಮಾಡಲಾಗಿದೆ. ಒಂದು ಹಳೆಯ ಮರವನ್ನು ಕಡಿಯುವ ಮೊದಲು… ಅದನ್ನು ಹೊಸ ತಳಿಯ ಮರವಾಗಿ ಪರಿವರ್ತಿಸಬಹುದೇ ಎಂದು ಯೋಚಿಸಿ ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವ ಪ್ರಮುಖ ವಿಷಯಗಳು: ⏱️ Timestamps / Chapters 00:00 – 🌱 ಹಳೆಯ ಮಾವಿನ ಮರಕ್ಕೆ ಹೊಸ ಜೀವ – Highlights 00:57 – ರಘುನಾಥ್ ರೆಡ್ಡಿ ಅವರ ತೋಟದ ಪರಿಚಯ 01:30 – ಹಳೆಯ ತೋತಾಪುರಿ ಮರಗಳಿಗೆ ಮಾರುಕಟ್ಟೆ ಸಮಸ್ಯೆ 02:48 – Top Shoot Grafting ಮಾಡುವ ಯೋಚನೆ ಬಂದಿದ್ದು ಹೇಗೆ? 04:26 – ರೆಂಬೆ ಕತ್ತರಿಸಲು ಸರಿಯಾದ ಸಮಯ – ಏಪ್ರಿಲ್ & ಮೇ 04:54 – ಕತ್ತರಿಸಿದ ಜಾಗಕ್ಕೆ ನಾಟಿ ಸಗಣಿ ಹಚ್ಚುವುದು ಏಕೆ? 05:32 – ಮಳೆಗಾಲದ ಚಿಗುರು & V-Grafting ವಿಧಾನ 06:05 – ಉತ್ತಮ Scion ಆಯ್ಕೆ ಮಾಡುವುದು ಹೇಗೆ? 06:45 – ಕಸಿ ಕಟ್ಟಿದ ನಂತರದ ಆರೈಕೆ & ಮೂಲ ಚಿಗುರುಗಳ ನಿರ್ವಹಣೆ 07:42 – ಎಲೆಗಳ ತೂಕ ನಿಯಂತ್ರಣ & ಕಸಿ ರಕ್ಷಣೆ 08:18 – ಸಾವಯವ ಗಂಜಲ ಸ್ಪ್ರೇ & ನಿರ್ವಹಣೆ 09:35 – ಕೇವಲ 2 ವರ್ಷಗಳಲ್ಲಿ ಮತ್ತೆ ಫಸಲು! 🥭 10:00 – ಈ ವಿಧಾನ ಯಾವ ರೈತರಿಗೆ & ಮರಗಳಿಗೆ ಉಪಯುಕ್ತ? 12:12 – ಮಲ್ಲಿಕಾ, ಸಕ್ಕರೆಗುತ್ತಿ & ದಸೇರಿ ತಳಿಗಳ ಪರಿಚಯ 12:43 – ಕಸಿ ವೆಚ್ಚ, ಲೇಬರ್ ಚಾರ್ಜ್ & ತಜ್ಞರ ಮಾಹಿತಿ 14:45 – ಕಸಿ ಯಶಸ್ಸಿನ ಪ್ರಮಾಣ ಎಷ್ಟು? 15:15 – ಹಲಸು, ಜಾಮೂನ್ ಸೇರಿದಂತೆ ಇತರ ಮರಗಳಿಗೂ ಈ ವಿಧಾನ 16:00 – 🌱 ಹಳೆಯ ಮರಗಳನ್ನು ಉಳಿಸಿ, ಹೊಸ ತಳಿಗಳನ್ನು ಬೆಳೆಸಿ – ಉಪಸಂಹಾರ 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್‌ಶಾಪ್‌ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. ------------------------------------------------------------------------------------------------------------------------ ⚠️ *Disclaimer:* The views, opinions, methods, costs, income figures, product claims, and farming practices shared in this video are solely those of the featured individual(s). Vivara has documented and presented the information for educational and informational purposes only. We do not independently verify all claims and do not guarantee any specific results, income, yields, or outcomes. Vivara is not responsible for any losses, damages, disputes, transactions, purchases, investments, services, products, or agreements arising from contact with individuals, businesses, or organizations featured in our videos. Viewers are advised to conduct their own research and due diligence before making any decisions. --- ಕನ್ನಡ ಡಿಸ್ಕ್ಲೈಮರ್ ⚠️ *ಸೂಚನೆ:* ಈ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಅಭಿಪ್ರಾಯಗಳು, ಕೃಷಿ ವಿಧಾನಗಳು, ವೆಚ್ಚ, ಆದಾಯದ ಅಂಕಿಅಂಶಗಳು, ಉತ್ಪನ್ನಗಳ ಕುರಿತು ಮಾಡಲಾದ ಹೇಳಿಕೆಗಳು ಹಾಗೂ ಇತರೆ ಮಾಹಿತಿಗಳು ಸಂಪೂರ್ಣವಾಗಿ ವಿಡಿಯೋದಲ್ಲಿರುವ ವ್ಯಕ್ತಿಗಳ ವೈಯಕ್ತಿಕ ಅನುಭವ ಮತ್ತು ಅಭಿಪ್ರಾಯಗಳಾಗಿವೆ. Vivara ಈ ಮಾಹಿತಿಯನ್ನು ಕೇವಲ ದಾಖಲಿಸಿ ಶೈಕ್ಷಣಿಕ ಹಾಗೂ ಮಾಹಿತಿ ಉದ್ದೇಶಕ್ಕಾಗಿ ಪ್ರಸ್ತುತಪಡಿಸಿದೆ. ಯಾವುದೇ ಫಲಿತಾಂಶ, ಆದಾಯ, ಉತ್ಪಾದನೆ ಅಥವಾ ಲಾಭವನ್ನು ನಾವು ಖಾತರಿಪಡಿಸುವುದಿಲ್ಲ. ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ವ್ಯವಹಾರಗಳೊಂದಿಗೆ ವೀಕ್ಷಕರು ನಡೆಸುವ ಖರೀದಿ, ಮಾರಾಟ, ಹೂಡಿಕೆ, ಸೇವೆ, ಒಪ್ಪಂದ ಅಥವಾ ಇತರೆ ಯಾವುದೇ ವ್ಯವಹಾರಗಳಿಗೆ Vivara ಯಾವುದೇ ರೀತಿಯ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ವೀಕ್ಷಕರು ತಮ್ಮದೇ ಆದ ಪರಿಶೀಲನೆ ಮತ್ತು ವಿವೇಚನೆ ನಡೆಸುವಂತೆ ವಿನಂತಿಸಿಕೊಳ್ಳುತ್ತೇವೆ. ---------------------------------------------------------------------------------------------------------------------------- #Vivara #VivaraInfo #VivaraOrganics #KannadaYouTube #KannadaAgriculture #Agriculture #Farming #OrganicFarming #NaturalFarming #SustainableFarming #IntegratedFarming #MultiLayerFarming #WaterConservation #RainwaterHarvesting #SoilHealth #FarmInnovation #AgriTechnology #SolarForFarmers #KnowYourFarmer #FarmToFork #RuralIndia #FarmerSuccessStory #VillageLife #FoodSource #WildlifeConservation #Nature #KarnatakaFarmers #IndianFarmers #Farmer #Agripreneur #VivaraCommunity #Vivara #ವಿವರ #MangoFarming #MangoGrafting #TopGrafting #VGrafting #Horticulture #NaturalFarming #OrganicFarming #MangoCultivation #KannadaFarming #ಕೃಷಿ #ಮಾವಿನಕೃಷಿ #ಕಸಿಕೃಷಿ #Vivara #Agriculture #MangoFarming #TopGrafting #Horticulture #KannadaFarming #topshooter