ಮೈಲಾರಲಿಂಗೇಶ್ವರ ಸ್ವಾಮಿಯ ಮೈನವಿರೇಳಿಸುವ ಸರಪಳಿ ಪವಾಡ #mailaralingeswara #devotional #mylara_temple #videos
USG16
0:00 / 0:00
ಮೈಲಾರಲಿಂಗೇಶ್ವರ ಸ್ವಾಮಿಯ ಮೈನವಿರೇಳಿಸುವ ಸರಪಳಿ ಪವಾಡ #mailaralingeswara #devotional #mylara_temple #videos
45 112 просмотров · 4 месяца назад
USG16
352 подписчика
45 112 просмотров · 4 месяца назад
ಮೈಲಾರಲಿಂಗೇಶ್ವರ ಸ್ವಾಮಿ ಎಂದರೆ ಸಾಕು, ಭಾರತದ ಅತ್ಯಂತ ಭಕ್ತರ ಸಮೂಹ ಸ್ವಾಮಿಯ ದರ್ಶನಕ್ಕಾಗಿ ಮುಗಿಬೀಳುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಈ ಸ್ವಾಮಿಗೆ ಜಾತಿ ಕುಲ ಮತ ಪಂಥಗಳನ್ನು ಮೀರಿ ನಿಂತ ಭಕ್ತ ಸಮೂಹವಿದೆ. ಮೈಲಾರಲಿಂಗೇಶ್ವರ ಸ್ವಾಮಿಯನ್ನು ಸಾಮಾನ್ಯ ಜನರ ಬಡ ಜನರ ಆರಾಧ್ಯ ದೈವ ಎನ್ನುತ್ತಾರೆ ಎಲ್ಲರೂ ಒಂದೇ ಕಡೆ ಸೇರುವ ದೇವರೆಂದರೆ ಈ ಮೈಲಾರಲಿಂಗೇಶ್ವರ ಎಂದು ಹೇಳಿದರೆ ತಪ್ಪಾಗಲಾರದು ಪ್ರತಿ ವರ್ಷ ಭರತ ಹುಣ್ಣಿಮೆ ಎಂದು ಮೈಲಾರಲಿಂಗ ಸ್ವಾಮಿಯ ಜಾತ್ರೆ ನಡೆಯುತ್ತದೆ ಆ ಪವಿತ್ರ ಕ್ಷೇತ್ರವೆಂದರೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆಯುತ್ತದೆ
ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿ ದೇವರ ಸರಪಳಿ ಪವಾಡ ಗಂಗಿಮಾಳಮ್ಮ ದೇವಾಲಯದ ಮುಂಭಾಗದಲ್ಲಿ ಸಹಸ್ರಾರು ಭಕ್ತ ಜನ ಸಾಗರದ ಮಧ್ಯೆ ಶ್ರದ್ಧಾ ಭಕ್ತಿಯಿಂದ ಗೊರವಪ್ಪಗಳ ಏಳು ಕೋಟಿ ಒಡೆಯ ಮೈಲಾರಲಿಂಗ ಎಂಬ ಕೂಗು ಸರಪಳಿ ಹಿಡಿದವರನ್ನು ಹುರಿದುಂಬಿಸುವಂತೆ ಮಾಡುತ್ತದೆ.
ದೇವಸ್ಥಾನದ ಮುಂಭಾಗದ ತ್ರಿಶೂಲ ಮುದ್ರೆ ಹೊಂದಿರುವ ಕಲ್ಲಿನ ಕಂಬಕ್ಕೆ ಸರಪಳಿ ಬಿಗಿಯಲಾಗುತ್ತದೆ ಆ ಕಲ್ಲಿಗೆ ಕಟ್ಟಿರುವ ಕಬ್ಬಿಣದ ಸರಪಳಿಯನ್ನು ಏಳುಕೋಟಿ ಒಡೆಯ ಸಿ ಮೈಲಾರಲಿಂಗ ಎಂದು ಜಪ ಮಾಡುತ್ತಾ ಸರಪಳಿ ತುಂಡಾಗುವಂತೆ ಎಳೆಯಲು ಶುರು ಮಾಡುತ್ತಾರೆ ನಂತರ ಅಲ್ಲಿ ನೆರೆದ ಸಾವಿರಾರು ಸಂಖ್ಯೆ ಭಕ್ತರ ಎದುರಿನಲ್ಲಿ ಸುಮಾರು 15 ಅಡಿ ಉದ್ದದ ಸರಪಳಿ ಯನ್ನು ತನ್ನೆಲ್ಲ ಬಲವನ್ನು ಬಿಟ್ಟು ಎಳೆಯುತ್ತಾರೆ ಆನೆ ಜಗ್ಗಿದರು ತುಂಡಾಗದ ಸರಪಳಿಯನ್ನು ಒಂದೇ ಬಾರಿಗೆ ಜಗ್ಗಿ ತುಂಡು ಮಾಡುತ್ತಾರೆ ಸರಪಳಿ ಅರ್ಧಕ್ಕೆ ಕಟ್ ಆದರೆ ಬರಲಿರುವ ದಿನಗಳಲ್ಲಿ ದೇಶಕ್ಕೆ ಉತ್ತಮ ಮಳೆಯಾಗಿ ಬೆಳೆಯಾಗಿ ಸಮೃದ್ಧಿಯಾಗುತ್ತದೆ ಎನ್ನಲಾಗುತ್ತದೆ ಕಲ್ಲು ಗೂಟಕ್ಕೆ ಸಮೀಪ ಸರಪಳಿ ತುಂಡಾದರೆ ಮಳೆ ಬೆಳೆ ಕಷ್ಟ ಎಂಬುದು ನಂಬಿಕೆಯಾಗಿದೆ ಮುಷ್ಟಿಯ ತುದಿಯಲ್ಲಿ ಸರಪಳಿ ಹರಿದರೆ ನಾಡಿಗೆ ಉತ್ತಮ ಫಲ ಎನ್ನಲಾಗುತ್ತದೆ ಮಧ್ಯದಲ್ಲಿ ಹರಿದರೆ ಸಾಧಾರಣ ಫಲ ಕೊನೆಯ ತುದಿ ಹರಿದರೆ ಸಂಕಷ್ಟಗಳು ಎದುರಾಗಲಿವೆ ಎಂಬ ನಂಬಿಕೆ ಇದೆ
Producer : P Umesha
Editor : Lakshmiraj Shetty
Editing Studio : Sri Krishna Entertainment
#mailaralingeswara #devotional #videoviral #indiangods #video #bhakti #bhakthivideos #mailardevpally #mailagamingchannel #devotionalhits #usg16 #mylara_temple #mylarlingeshwar #travelvlogs #mylara_temple #mylarlingeshwar #travelvlogs #temple #shiva_temple #ranebennur #ravichetan_vlogs #mylara_fair #karnika #hoovina_hadagalli #bellary #yelkoti_lingeshwara #devaragudda #history
USG16 Youtube cgannel is a unique YouTube channel dedicated to bringing viewers infotainment with a blend of devotional, mythological, Historical and entertainment content. We dive deep into timeless stories, explore ancient wisdom, and present insightful explanations of myths and traditions, making them relevant for today’s audience. Whether you’re interested in spiritual insights, intriguing folklore, or understanding cultural heritage, USG 16 youtube Channel provides well-researched, captivating content that enlightens and entertains. Join us on a journey of knowledge and discovery, where we decode the mysteries of mythology and devotion with a fresh perspective.