ಸಂತನೆಂದರೆ ಯಾರು ಮುದ್ದುರಾಮ 😍 ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸರಳ ಸಂತ'📖 ಸಿದ್ದೇಶ್ವರ ಸ್ವಾಮೀಜಿ ಯೋಗಿ ಕರುಣೆ ಸೇವೆ
ಮಂಗಳ(ನಾಗಶ್ರೀ)
0:00 / 0:00
ಸಂತನೆಂದರೆ ಯಾರು ಮುದ್ದುರಾಮ 😍 ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸರಳ ಸಂತ'📖 ಸಿದ್ದೇಶ್ವರ ಸ್ವಾಮೀಜಿ ಯೋಗಿ ಕರುಣೆ ಸೇವೆ
14 просмотров · 4 нед. назад
ಮಂಗಳ(ನಾಗಶ್ರೀ)
23 подписчика
14 просмотров · 4 нед. назад
ಸರಳ ಸಂತ' ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? 'ಜ್ಞಾನಯೋಗಿ'ಯ ಜೀವನಗಾಥೆಸಂತನೆಂದರೆ ಯಾರು
ದಿವ್ಯತೆಯ ಅರಿತವನು
|| ಸಂತನೆಂದರೆ ||
ಸರಳತೆಯ ಸೂತ್ರದಲ್ಲಿ
ಸುಖವ ಕಂಡವನು
|| ಸಂತನೆಂದರೆ ||
ಮಮತೆ ಬಂಧನ ಕಳಚಿ
ಬಲು ದೂರ ನಿಂತವನು ||ಮಮತೆ||
ಎಲ್ಲರಲಿ ಅವನೊಬ್ಬ ಮುದ್ದುರಾಮ||2||
ಸಿದ್ಧನೆಂದರೆ ಯಾರು
ಮನವ ನೋಯಿಸದಾತ
ನೂರು ನೋವನು ಸಹಿಸಿ ನಗುತಲಿರುವಾತ
||ಸಿದ್ಧನೆಂದರೆ||
ಒಂದಾದ ನಡೆ ನುಡಿಗೆ
ಧಿಕ್ಕು ದೆಸೆ ತೋರ್ವಾತ||ಒಂದಾದ||
ಪರಮಗುರು ಆ ಸಾಧು ಮುದ್ದುರಾಮ||2||
ಬೇಕು ಬೇಡಗಳಿಲ್ಲ ಕೋಪತಾಪಗಳಿಲ್ಲ
ಹುಸಿಮಾತು ಚಿರಿನುಡಿಗಳೊಂದಿಲ್ಲ ಮನದಿ
||ಬೇಕು||
ತನ್ನದೇನುವುದನೆಲ್ಲ ಮರೆತು ನಿಂತವ ಆತ||2||
ಸಂತನೆಂದರೆ ಯೋಗಿ ಮುದ್ದುರಾಮ||2||
ನಾ ಕಿರಿದು ನೀ ಹಿರಿದು
ಎಂದವನೇ ನಿಜಯೋಗಿ||ನಾ ಕಿರಿದು||
ಜಾತಿ ಮತ ಪಥದಿಂದ ದೂರ ಅವನಾತ್ಮ||2||
ಸೇವಕನ ಭಾವದಲಿ
ನಿಂತರದು ದಿಗ್ವಿಜಯ||ಸೇವಕನ||
ಶರಣ ಶಿವ ಕಿಂಕರಣೋ ಮುದ್ದುರಾಮ||2||
ಅನುಭವದ ನೆಲೆಯಿಂದ ನಿಜವರಿತ ಸಿದ್ಧನಿಗೇ
ಉಪ್ಪರಿಗೆ ಹಂಗೇನು, ಬರಿ ಗುಡಿಸಲೇನು
ಕಲ್ಲು ಮಾಣಿಕ್ಯವೆಲ್ಲ ನೋಟದಲಿ ಒಂದೇ ಬಗೆ
ಅವನಾತ್ಮ ನಿರ್ಮಲವೋ ಮುದ್ದುರಾಮ||2||
ಬಿತ್ತಿ ಭಕ್ತಿಯ ಬೀಜ, ಶ್ರದ್ಧೆ ನೇಗಿಲ ಬಳಸಿ
ಉಳುಮೆ ನೀ ಮಾಡುತ್ತಿರು ದುಡಿಮೆ ಎತ್ತಿಂದ
ತೋರು ಸರಿ ಆ ಶಕ್ತಿ, ಮುಕ್ತಿ ಪಥ ಬೆಳಸಿರಲಿ
ಯೋಗಿಪುಂಗವನಾಗು ಮುದ್ದು ರಾಮ||2||