ಪರಿಸರ ಸಂರಕ್ಷಣೆಗೆ ಒತ್ತು
DD Chandana News
0:00 / 0:00
ಪರಿಸರ ಸಂರಕ್ಷಣೆಗೆ ಒತ್ತು
197 просмотров · 15 часов назад
DD Chandana News
111 тыс. подписчиков
197 просмотров · 15 часов назад
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ದರೋಜಿ ನಿಸರ್ಗಧಾಮದಲ್ಲಿ 72ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ನಿನ್ನೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಅನುಪಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ - ಜಿಯೋಲೋಜಿಕಲ್ ಪಾರ್ಕ್ (Geological park) ನ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯಕ್, ಬಳ್ಳಾರಿ ಸಾಮಾಜಿಕ ಅರಣ್ಯದ ಉಪ ಸಂರಕ್ಷಣಾಧಿಕಾರಿ ಮಾರ್ಕಂಡೇಯ ಉಪಸ್ಥಿತರಿದ್ದರು.
ಇದೇ ವೇಳೆ ವನ್ಯಜೀವಿ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಲಾಗಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆಗಳ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ಎಚ್. ಅನುಪಮಾ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಆವಾಸಸ್ಥಾನಗಳನ್ನು ಜೋಡಿಸುವುದು, ವನ್ಯಜೀವಿಗಳನ್ನು ರಕ್ಷಿಸುವುದು ಎಂಬ ಶೀರ್ಷಿಕೆಯಡಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೈಕ್ ರಾಲಿ, ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಎಸ್. ಜಾಹ್ನವಿ, ಸಮಾಜದಲ್ಲಿ ಮನುಷ್ಯ ಜೀವಿಸಲು ಎಷ್ಟು ಹಕ್ಕುಗಳಿವೆಯೋ, ಅಷ್ಟೇ ಹಕ್ಕುಗಳು ವನ್ಯಜೀವಿಗಳಿಗೂ ಇವೆ. ಮೂಕ ಜೀವಿಗಳು ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಪ್ರಶ್ನಿಸಿ ನ್ಯಾಯ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವನ್ಯಜೀವಿಗಳ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ರಾಜೇಶ್ ನಾಯಕ್, ವನ್ಯಜೀವಿಗಳು ನಾಡನ್ನು ಪ್ರವೇಶಿಸಿದಾಗ ಸಾರ್ವಜನಿಕರಿಗೆ ಹಾಗೂ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಅವುಗಳನ್ನು ಕಾಡಿಗೆ ಮರಳಿಸಬಹುದು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಮಾರ್ಕಂಡೇಯ, ಸಾರ್ವಜನಿಕರು ಅದರಲ್ಲೂ ಮಕ್ಕಳು ಪರಿಸರದೊಂದಿಗೆ ಸಂಪರ್ಕ ಬೆಳೆಸಿಕೊಂಡು ರಜೆಯ ದಿನಗಳಲ್ಲಿ ಎಲ್ಲಾ ಪ್ರಾಣಿ ಸಂಗ್ರಹಾಲಯ, ಪಾರ್ಕ್, ಅರಣ್ಯಗಳಿಗೆ ಭೇಟಿ ನೀಡಿದಾಗ ಅವರಿಗೆ ವನ್ಯಜೀವಿಗಳ ವಿವಿಧ ಪ್ರಭೇದಗಳ ಬಗ್ಗೆ ಪರಿಚಯವಾಗಲು ಸಾಧ್ಯ ಎಂದರು.
ದೂರದರ್ಶನದೊಂದಿಗೆ ಶಂಕರಾನಂದ್ ಸಿಂಗ್, ಕಾಲೇಜಿನ ಪ್ರಾಧ್ಯಾಪಕಿ ನಾಗವೇಣಿ ಸೋಸಲೆ, ಮಕ್ಕಳಲ್ಲಿ ವನ್ಯಜೀವಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವನ್ಯಜೀವಿ ಸಪ್ತಾಹ ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿ ಕವನ, ಎಲ್ಲರೂ ತಮ್ಮ ಹುಟ್ಟು ಹಬ್ಬದಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ಪಂಪಯ್ಯ- ಮಳೇ ಮಠ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಉರಗ ತಜ್ಞ ವೇಣು, ವನ್ಯಜೀವಿಗಳ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
****
#LiveDDChandanaNews #DDChandanaNews #DDChandana #DDKannada