Kallur Mahlakshmi Temple Miracle Raichur District || Specialty of Hindu Sanatan #mahalakshmi
Sjkannadiga
0:00 / 0:00
Kallur Mahlakshmi Temple Miracle Raichur District || Specialty of Hindu Sanatan #mahalakshmi
4 182 просмотра · 2 г. назад
Sjkannadiga
2,13 тыс. подписчиков
4 182 просмотра · 2 г. назад
Kallur Mahlakshmi Temple Miracle Raichur District || Specialty of Hindu Sanatan
Location : Shri Kalluru Mahalakshmi Devi Temple
080 2235 2828 https://www.google.com/search?q=kallu...
https://g.co/kgs/RHrvZr7
#mahalakshmiರಾಯಚೂರಿನಲ್ಲಿ ಸಾಣೆಕಲ್ಲಿನಲ್ಲಿ ಮೂಡಿಬಂದ ಮಹಾಲಕ್ಷ್ಮೀಯ ದರ್ಶನ ಪಡೆದಿದ್ದೀರಾ?
ಬೇಡಿದ್ದೆಲ್ಲವನ್ನು ಕರುಣಿಸುವವನಾದರೆ ಆತನ ಪತ್ನಿಯಾದ ಲಕ್ಷ್ಮಿ ದೇವಿಯು ಐಶ್ವರ್ಯ ಭಾಗ್ಯವನ್ನು ನೀಡುವಾಕೆ. ತಿರುಪತಿಯಲ್ಲಿ ವೆಂಕಟೇಶ್ವರ ನೆಲೆಸಿದ್ದರೆ, ಕೋಲಾಪುರದಲ್ಲಿ ಮಹಾಲಕ್ಷ್ಮೀ ದೇವಾಲಯವಿದೆ. ಆದರೆ ಇವೆರಡಕ್ಕೂ ನಿಮಗೆ ಹೋಗಲು ಆಗುತ್ತಿಲ್ಲವೆಂದಾದಲ್ಲಿ ನೀವು ರಾಯಚೂರಿಗೆ ಹೋಗಬಹುದು. ರಾಯಚೂರಿನಲ್ಲಿ ನಿಮಗೆ ವೆಂಕಟೇಶ್ವರ ಹಾಗೂ ಮಹಾಲಕ್ಷ್ಮೀ ಇಬ್ಬರೂ ಒಂದೇ ದೇವಸ್ಥಾನದಲ್ಲಿ ಕಾಣಸಿಗುತ್ತಾರೆ.
ರಾಯಚೂರಿನ ಕಲ್ಲೂರು
ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳ ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ. ರಾಯಚೂರು ಜಿಲ್ಲೆಯಲ್ಲಿ ತುಂಡಾದ ಕಲ್ಲುಗಳ ಬೆಟ್ಟಗಳಿಂದ ಕೂಡಿರುವ ಗ್ರಾಮವಿದೆ ಇದನ್ನು ಕಲ್ಲೂರು ಎನ್ನಲಾಗುತ್ತದೆ. ಬೇಡಿದ ವರವನ್ನು ಕರುಣಿಸುವ ಮಹಿಮಾನ್ವಿತೆ ಇಲ್ಲಿದ್ದಾಳೆ. ಇಲ್ಲಿಗೆ ಬಂದ ಭಕ್ತರಿಗೆ ಯಾವತ್ತೂ ನಿರಾಸೆಯಾಗೋದಿಲ್ಲ ಎನ್ನುವುದು ಜನರ ನಂಬಿಕೆ.
ಇಷ್ಟಾರ್ಥ ಸಿದ್ಧಿ
ಮುಖ್ಯವಾಗಿ ಈ ದೇಗುಲಕ್ಕೆ ಸಾಕಷ್ಟು ಜನ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ವಿನಂತಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಏಕೆಂದರೆ ಕಲ್ಲೂರು ಮಹಾಲಕ್ಷ್ಮಿಯು ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ಅಚಲವಾದ ವಿಶ್ವಾಸ ಇಲ್ಲಿನ ಭಾಗದ ಜನರಲ್ಲಿದೆ. ಅದರಂತೆ ಸಾಕಷ್ಟು ಇಷ್ಟಾರ್ಥ ಸಿದ್ಧಿಯಾದ ಉದಾಹರಣೆಗಳು ಸಹ ಇಲ್ಲಿ ದೊರೆಯುತ್ತವೆ.
ಸಾಣೆ ಕಲ್ಲಿನಲ್ಲಿ ದುರ್ಗೇ
ಕನಸಿನಲ್ಲಿ ಬಂದ ಮಹಾಲಕ್ಷ್ಮೀ ಕ್ಷ್ಮೀ ಕಾಂತಾಚಾರ್‌ಗೆ ತಾನು ಇಲ್ಲೇ ನೆಲೆಸುವುದಾಗಿ ತಿಳಿಸುತ್ತಾಳೆ. ಅದರಂತೆ ಬೆಳಗ್ಗೆ ಪೂಜೆ ಮಾಡುವಾಗ ದೇವರಕೋಣೆಯಲ್ಲಿದ್ದ ಸಾಣೆ ಕಲ್ಲಿನಲ್ಲಿ ದುರ್ಗೇಯ ಅವತಾರದಲ್ಲಿ ಉದ್ಭವಳಾಗಿದ್ದಾಳೆ.
ತೆಂಗಿನಕಾಯಿ ಹರಕೆ
ಇಷ್ಟಾರ್ಥಗಳನ್ನು ಬೇಡಿ ಕೊಳ್ಳಲು ಅಥವಾ ಹರಕೆ ಹೊತ್ತಲು ಇಲ್ಲಿ ವಿಶೇಷವಾದ ವಿಧಾನವೊಂದನ್ನು ಅನುಸರಿಸಲಾಗುತ್ತದೆ. ಅದಕ್ಕೆ ತೆಂಗಿನಕಾಯಿ ಕಟ್ಟಿಸುವುದು ಎನ್ನಲಾಗುತ್ತದೆ. ಅಂದರೆ ನಿಮಗೆ ಬೇಕಾದ್ದನ್ನು ಬಯಸಿ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಕುಳಿತು ಕಾಯಿಗಳನ್ನು ಒಪ್ಪಿಸುವುದು. ನಿಮ್ಮ ಪರವಾಗಿ ಕಾಯಿಗಳನ್ನು ದೇಗುಲದ ಛಾವಣಿಯಲ್ಲಿ ಅಲ್ಲಲ್ಲಿ ಜೋಡಿಸಲಾದ ಮೊಳೆಗಳಿಗೆ ದಾರದಿಂದ ಕಟ್ಟಿ ಹಾಕಲಾಗುತ್ತದೆ. ಸಾಮಾನ್ಯವಾಗಿ ಎರಡು ಕಾಯಿಗಳನ್ನು ಮಾತ್ರವೆ ಬಳಸಲಾಗುತ್ತದೆ.
ತಲುಪುವುದು ಹೇಗೆ?
ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು. ರಾಯಚೂರಿನ ಮುಖ್ಯ ಬಸ್ಸು ನಿಲ್ದಾಣದಿಂದ ಕಲ್ಲೂರಿನ ಮೂಲಕವಾಗಿ ಸಾಗುವ ಅನೇಕ ಬಸ್ಸುಗಳು ಪ್ರತಿ 20 ನಿಮಿಷಕ್ಕೊಮ್ಮೆ ದೊರೆಯುತ್ತವೆ. ಅಲ್ಲದೆ ಬಾಡಿಗೆ ಕಾರು ಅಥವಾ ರಿಕ್ಷಾ ಮೂಲಕವೂ ಕಲ್ಲೂರಿಗೆ ತೆರಳಬಹುದಾಗಿದೆ.