Перейти к содержимому

ಶಾರ್ಜಾದಲ್ಲಿ ಹತ್ಯೆಗೀಡಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ತವರಿಗೆ #udupinews #ellkaani #karnatakanews

ell kaani news

0:00 / 0:00

ಶಾರ್ಜಾದಲ್ಲಿ ಹತ್ಯೆಗೀಡಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ತವರಿಗೆ #udupinews #ellkaani #karnatakanews

9 056 просмотров · 1 день назад
ell kaani news
512 подписчиков
9 056 просмотров · 1 день назад
ಶಾರ್ಜಾದಲ್ಲಿ ಅಮಾನುಷ ರೀತಿಯಲ್ಲಿ ಹತ್ಯೆಗೀಡಾದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕುಂದಾಪುರದ ಹೊನ್ನನಕೇರಿಯಲ್ಲಿರುವ ಸ್ವಗೃಹಕ್ಕೆ ತಲುಪಿತು. ಪ್ರಕಾಶ್ ಅವರ ಮೃತದೇಹವು ಅವರದ್ದೇ ಕಾರಿನ ಡಿಕ್ಕಿಯಲ್ಲಿ ಒಂಬತ್ತು ತುಂಡುಗಳಾಗಿ ಪತ್ತೆಯಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ. ಇಬ್ಬರೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆಯೂ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆ ನಡೆಸಿ ಕೊಲೆ ಮಾಡಿದವರನ್ನು ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ. ತವರಿಗೆ ತಲುಪಿದ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ಥಳೀಯರು ಅಂತಿಮ ಗೌರವ ಸಲ್ಲಿಸಿದರು. ಬಳಿಕ ಕುಂದಾಪುರದ ಶಾಸ್ತ್ರಿ ಸರ್ಕಲ್ ಸಮೀಪದ ಚರ್ಚ್‌ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಚರ್ಚ್ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಕುಟುಂಬಸ್ಥರು ಹಾಗೂ ಬಂಧುಗಳ ಸಮ್ಮುಖದಲ್ಲಿ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು... #AlwinPrakashKunder #AlwinPrakash #PrakashKunder #Kundapura #KundapuraNews #Udupi #UdupiNews #Sharjah #SharjahMurderCase #MurderCase #CrimeNews #MurderInvestigation #PoliceInvestigation #MissingPersons #FamilyAppeal #JusticeForAlwin #JusticeForPrakash #DeadBodyRepatriation #MangaloreAirport #Honnanakere #Funeral #FinalRites #KundapuraChurch #KarnatakaNews #CoastalKarnataka #BreakingNews #LocalNews #KannadaNews #NewsUpdate #EllKaani