ಬೆಳಗಾವಿ/ಅಥಣಿ :ಪಂಚಭೂತಗಳಲ್ಲಿ ಲೀನವಾದ ಯೋಧ ಕಿರಣರಾಜ
ಕರುನಾಡ ಕಂದ
0:00 / 0:00
ಬೆಳಗಾವಿ/ಅಥಣಿ :ಪಂಚಭೂತಗಳಲ್ಲಿ ಲೀನವಾದ ಯೋಧ ಕಿರಣರಾಜ
15 346 просмотров · 1 год назад
ಕರುನಾಡ ಕಂದ
2,04 тыс. подписчиков
15 346 просмотров · 1 год назад
ಪಂಚಭೂತಗಳಲ್ಲಿ ಲೀನವಾದ ಯೋಧ ಕಿರಣರಾಜ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಅಗ್ನಿ ವೀರ ಯೋಧರಾದ ಕಿರಣ್ ರಾಜ್ ಕೇದಾರಿ ತೆಲಸಂಗ ಇವರು ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಮೃತಪಟ್ಟ ಯೋಧ ಕಿರಣ್ ರಾಜ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮವಾದ ಐಗಳಿಯಲ್ಲಿ ನೆರವೇರಿತು.
ಮೃತ ಯೋಧನ ಸ್ವಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.
ಅಥಣಿ, ಯಕ್ಕಂಚಿ ,ಯಲಿಹಡಲಗಿ, ಅಡಹಳ್ಳಿ, ಕೊಹಳ್ಳಿ, ಐಗಳಿ ಮಾರ್ಗವಾಗಿ
ಅವರ ಪಾರ್ಥೀವ ಶರೀರವನ್ನು ಬೈಕ್, ಕಾರುಗಳು ಹಾಗೂ ಐಗಳಿ ಗ್ರಾಮಸ್ಥರ ವಿವಿಧ ವಾಹನಗಳ ಮೂಲಕ ಘನತೆಯುತವಾಗಿ ಬರಮಾಡಿಕೊಳ್ಳಲಾಗಿತ್ತು.
ಗ್ರಾಮದ ಎಲ್ಲಾ ಯುವಕರು, ಮಿತ್ರಮಂಡಳಿಗಳು, ಸಂಘಟನೆಗಳು, ಶಾಲಾ-ಕಾಲೇಜುಗಳು ತಮ್ಮ ವಾಹನಗಳೊಂದಿಗೆ ಈ ಶ್ರದ್ಧಾಂಜಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಅಗಲಿದ ಯೋಧನ ಪಾರ್ಥೀವ ಶರೀರಕ್ಕೆ ರಾಷ್ಟ್ರಧ್ವಜವನ್ನು ಹೊದಿಸಿ ಸೇನಾಧಿಕಾರಿಗಳಿಂದ ಪುಷ್ಪ ನಮನ ಸಲ್ಲಿಸಿ ಶಸ್ತ್ರಾಸ್ತ್ರಗಳಿಂದ ಐದು ಸುತ್ತು ಮದ್ದು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು.
ನಂತರ ರಾಷ್ಟ್ರಧ್ವಜವನ್ನು ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಥಣಿಯ ಮಾಜಿ ಶಾಸಕರಾದ ಮಹೇಶ್ ಕುಮಟ್ಟಳ್ಳಿ, ಅಥಣಿಯ ಮಾಜಿ ಶಾಸಕರಾದ ಶಹಜಾನ್ ಡೊಂಗರಗಾವ, ಕಾಂಗ್ರೆಸ್ಸಿನ ಮುಖಂಡರಾದ ಗಜಾನನ ಮಂಗಸೂಳಿ ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಕರುನಾಡ ಕಂದ ಅಥಣಿ.
#belagavi #athani #news #athaninews #belagavipeople #indianarmy #agniveer #agniveerreasoning #belagavidistirct