Перейти к содержимому

ಹೋಳೂರಿನಲ್ಲಿ ಭಕ್ತಿಯ ಸಂಭ್ರಮ | ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ದಾರ, ನೂತನ ವಿಗ್ರಹಗಳ ಪ್ರತಿಷ್ಠಾಪನಾ

ನಾಡ ಸುದ್ದಿ 1 ಕರ್ನಾಟಕ

0:00 / 0:00

ಹೋಳೂರಿನಲ್ಲಿ ಭಕ್ತಿಯ ಸಂಭ್ರಮ | ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ದಾರ, ನೂತನ ವಿಗ್ರಹಗಳ ಪ್ರತಿಷ್ಠಾಪನಾ

5 просмотров · 4 дн. назад
ನಾಡ ಸುದ್ದಿ 1 ಕರ್ನಾಟಕ
145 подписчиков
5 просмотров · 4 дн. назад
ಹೋಳೂರಿನಲ್ಲಿ ಭಕ್ತಿಯ ಸಂಭ್ರಮ | ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ದಾರ, ನೂತನ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿ ಆಚರಣೆ! #Nadasuddi1karnataka #Livenews #Politicalnews #kolarnews ಕೋಲಾರ ತಾಲ್ಲೂಕಿನ ಹೋಳೂರು ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ನೂತನ ಶಿಲಾ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಅಕ್ಟೋಬರ್ 29 ಮತ್ತು 30ರಂದು ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ಸುಬ್ರಮಣ್ಯ ಸ್ವಾಮಿಯ ನೂತನ ಶಿಲಾ ವಿಗ್ರಹಗಳ ಪ್ರತಿಷ್ಠಾಪನೆ, ವಿವಿಧ ಹೋಮ-ಹವನಗಳು, ಪೂಜಾ ವಿಧಿವಿಧಾನಗಳು ಹಾಗೂ ಕುಂಭಾಭಿಷೇಕ ನೆರವೇರಿದವು. ಎರಡನೇ ದಿನದ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಅಷ್ಟಬಂಧನ, ಪ್ರಾಣಪ್ರತಿಷ್ಠಾಪನೆ, ಕುಂಭಾಭಿಷೇಕ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನಡೆಯಿತು. ನಂತರ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಚೀಮಂಗಲದ ರಾಜ್ಯ ಪ್ರಶಸ್ತಿ ಪುರಸ್ಕೃತ ಆಗಮಿಕರು ಹಾಗೂ ಅರ್ಚಕರಾದ ಸಿದ್ದಬಸವರಾಜು ಅವರು ತಮ್ಮ ಮಕ್ಕಳು ಮತ್ತು ಸಂಗಡಿಗರೊಂದಿಗೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಟ್ಟರು. ಈ ಧಾರ್ಮಿಕ ಮಹೋತ್ಸವದಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. 🙏 ಸ್ವಾಮಿಯೇ ಶರಣಂ ಅಯ್ಯಪ್ಪ! 📺 ಇಂತಹ ಧಾರ್ಮಿಕ, ಸಾಮಾಜಿಕ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ನಾಡ ಸುದ್ದಿ 1 ಕರ್ನಾಟಕ ಯೂಟ್ಯೂಬ್ ಚಾನೆಲ್‌ ಅನ್ನು Subscribe ಮಾಡಿ. 👍 Like | 🔁 Share | 🔔 Subscribe #AyyappaSwamy #Holuru #KolarNews #AyyappaTemple #Pranapratishtapana #Kumbhabhisheka #SubramanyaSwamy #Ganapathi #ನಾಡಸುದ್ದಿ1ಕರ್ನಾಟಕ #KarnatakaNews #DevotionalNews