Перейти к содержимому

301 ಶ್ರೀ ಲಕ್ಷ್ಮೀ ನರಸಿಂಹ ದೇವರ ಸುಳಾದಿ /SriLakshmiNarasimha Devara Sulaadi

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

0:00 / 0:00

301 ಶ್ರೀ ಲಕ್ಷ್ಮೀ ನರಸಿಂಹ ದೇವರ ಸುಳಾದಿ /SriLakshmiNarasimha Devara Sulaadi

4 568 просмотров · 5 л. назад
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
69,8 тыс. подписчиков
4 568 просмотров · 5 л. назад
ಹರೇ ಶ್ರೀನಿವಾಸ, ಶ್ರೀ ಲಕ್ಷ್ಮೀ ನರಸಿಂಹ ದೇವರ ಸುಳಾದಿಯನ್ನು ಪ್ರತಿದಿವಸ ಹೇಳಿಕೊಳ್ಳಬೇಕು ವಿಶೇಷವಾಗಿ ಮಂಗಳವಾರ ಶ್ರೀ ಲಕ್ಷ್ಮೀ ನರಸಿಂಹ ದೇವರ ಪೂಜೆಯನ್ನು ಮಾಡಿ ಅದರ ಜೊತೆಗೆ ಶ್ರೀ ಲಕ್ಷ್ಮೀ ನರಸಿಂಹ ದೇವರ ಸುಳಾದಿ ಯನ್ನು ಹೇಳಿಕೊಳ್ಳಬೇಕು ಹೇಳಿಕೊಂಡರೆ ದೇವರು ನಮಗೆ ಅತಿಶೀಘ್ರವಾಗಿ ಫಲವನ್ನು ಕೊಡುತ್ತಾನೆ ಎಂದು ನೀವು ವಿಡಿಯೋದಲ್ಲಿ ನೋಡಿದ್ದೀರಾ ಅಲ್ಲವೇ || ಶ್ರೀ ನರಸಿಂಹ ದೇವರ ಸುಳಾದಿ || ರಾಗ – ನಾಟಿ ಧ್ರುವತಾಳ ವೀರ ಸಿಂಹನೆ ನಾರಸಿಂಹನೆ ದಯ ಪಾರಾ- | ವಾರನೆ ಭಯನಿವಾರಣ ನಿರ್ಗುಣ | ಸಾರಿದವರ ಸಂಸಾರ ವೃಕ್ಷದ ಮೂಲ | ಬೇರೊರಸಿ ಕೀಳುವ ಬಿರುದ ಭಯಂಕರ | ಘೋರಾವತಾರ ಕರಾಳವದನ ಅ- | ಘೋರ ದುರಿತಸಂಹಾರ ಮಾಯಾಕಾರ | ಕ್ರೂರ ದೈತ್ಯರ ಶೋಕಕಾರಣ ಉದುಭವ | ಈರೇಳು ಭುವನ ಸಾಗರದೊಡೆಯಾ | ಅ ರೌದ್ರನಾಮಾ ವಿಜಯವಿಠ್ಠಲ ನರಸಿಂಗ| ವೀರರಸಾ ತುಂಗಾ ಕಾರುಣ್ಯಪಾಂಗ ಮಟ್ಟತಾಳ ಮಗುವಿನ ರಕ್ಕಸನು ಹಗಲಿರುಳು ಬಿಡನೆ | ಹಗೆಯಿಂದಲಿ ಹೊಯ್ದ ನಗ ಪನ್ನಗ ವನಧಿ | ಗಗನ ಮಿಗಿಲಾದ ಅಗಣಿತ ಬಾಧೆಯಲಿ | ನೆಗದು ಒಗದು ಸಾವು ಒಗದು ಕೊಲ್ಲುತಿರಲು | ಹೇ ಜಗದ ವಲ್ಲಭನೇ ಸುಗುಣಾಭರಿತನೇ ನಿಗಮವಂದಿತನೆೇ ಪೊಗಳಿದ ಭಕುತರ | ತಗಲಿ ತೊಲಗನೆಂದೂ ಮಿಗೆ ಕೂಗುತಿರಲು | ಯುಗ ಯುಗದೊಳು ದಯಾಳುಗಳ ದೇವರ ದೇವ | ಯುಗಾದಿ ಕೃತ್ - ನಾಮಾವಿಜಯವಿಠ್ಠಲ ಹೋ ಹೋ | ಯುಗಳ ಕರವ ಮುಗಿದು ಮಗುವು ಮೊರೆ ಇಡಲು ರೂಪಕತಾಳ ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ್ನ | ಮೌಳಿ ವೇಗದಲಿ ಪಾಲಿಸುವೆನೆಂದು | ತಾಳಿ ಸಂತೋಷವ ತೂಳಿ ತುಂಬಿದಂತೆ | ಮೂಲೋಕದ ಪದಿವಾಲಯದಿಂದೆ ಸು- | ಶೀಲ ದುರ್ಲಭ ನಾಮ ವಿಜಯವಿಠ್ಠಲ ಪಂಚ - | ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ ಝಂಪೆತಾಳ ಲಟ ಲಟಾ ಲಟ ಲಟಾ ಲಟಕಟಿಸಿ ವನಜಾಂಡ- | ಕಟಹ ಪಟ ಪಟೆ ಪುಟುತ್ಕಟದಿ ಬಿಚ್ಚುತಲಿರಲು | ಪುಟ ಪುಟಾ ಪುಟ ನೆಗೆದು ಚೀರಿ ಹಾರುತ್ತ ಪ- | ಲ್ಕಟ ಕಟಾ ಕಟ ಕಡಿದು ರೋಷದಿಂದ | ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ | ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು | ಕುಟಿಲ ರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ | ಧಿಟ ನಿಟಿಲನೇತ್ರ ಸುರಕಟಕ ಪರಿಪಾಲಾ ತ್ರಿವಿಡಿತಾಳ ಬೊಬ್ಬಿರಿಯೇ ವೀರಧ್ವನಿಯಿಂದ ತನಿಗಿಡಿ | ಹಬ್ಬಿ ಮುಂಜೋಣೀ ಉರಿ ಹೊಗರೆದ್ದು ಸುತ್ತೆ | ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ | ಅಬ್ಧಿಸಪುತ ಉಕ್ಕಿ ಹೊರಚಲ್ಲಿ ಬರುತಿರೆ | ಅಬುಜಭವಾದಿಗಳು ತಬ್ಬಿಬ್ಬಗೊಂಡರು | ಅಬ್ಬರವೇನೆನುತ ನಭದ ಗೂಳಿಯು ತಗಿಯೆ | ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ | ನಿಬ್ಬರಗಳ ತರುಗಿರಿ ಝರಿಝರಿಸಲು | ಒಬ್ಬರಿಗೊಶವಲ್ಲದ ನಮ್ಮಾ ವಿಜಯವಿಠ್ಠಲ | ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ ಘುಡಿ ಘುಡಿಸುತ ಕೋಟಿ ಸಿಡಿಲು ಗಿರಿಗೆ ಬಂದು | ಅಟ್ಟತಾಳ ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ | ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ | ತೊಡಿಯ ಮೇಲಿರಿಸಿ ಹೇರೋಡಲ ಕೂರುಗುರದಿಂದ | ಪಡುವಲಗಡಲ ತಡಿಯ ತರಣಿಯ ನೋಡಿ | ಕಡುಕೋಪದಲಿ ಸದೆಬಡಿದು ರಕ್ಕಸನ ಕೆಡಹಿ | ಕರುಳನ ಕೊರಳಡಿಯಲ್ಲಿ ಧರಿಸಿದ ಸಡಗರದ ದೈವ | ಕಡುಗಲಿ ಭೂರ್ಭುವ ವಿಜಯವಿಠ್ಠಲ ಪಾ- | ಲ್ಗಡಲೊಡೆಯಾ ಶರಣರ ಬಿಡದೆ ಕಾಯುವ | ಏಕತಾಳ ಉರಿ ಮುಚ್ಚಿ ಚತುರ್ದಶ ಧರಣಿ ತಲ್ಲಣಿಸಲು | ಪರಮೇಷ್ಠಿ ಹರಸುರರು ಸಿರಿದೇವಿಗೆ | ತಾ ಮೊರೆಯಿಡಲಾಕ್ಷಣ ಕರುಣದಿಂದಲಿ ತನ್ನ | ಶರಣನ್ನ ಸಹಿತ ನಿನ್ನ | ಚರಣಕ್ಕೆ ಎರಗಲು ಪರಮ ಶಾಂತನಾಗಿ | ಹೆರಹಿದೆ ದಯವನ್ನು ಸುರರು ಕುಸುಮ ಮಳೆಗರಿಯಲು | ಭೇರಿ ವಾದ್ಯ ಮೊರವುತ್ತಲಿರುತಿರೆ ಎನುತ | ಪರಿ ಪರಿ ವಾಲಗ ವಿಸ್ತಾರದಿಂದದ ಕೈಕೊಳ್ಳುತ್ತ | ಮೆರೆದು ಸುರರುಪದ್ರ ಹರಸಿ ಬಾಲಕನ ಕಾಯ್ದ ಪರದೈವ ಪರಮಾತ್ಮ ವಿಜಯವಿಠಲ ನಿಮ್ಮ ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ ಪ್ರಹ್ಲಾದವರದ ಪ್ರಪನ್ನಕ್ಲೇಶಭಂಜನ್ನ | ಮಹಾಹವಿಷ ವಿಜಯವಿಠ್ಠಲ ನರಮೃಗವೇಷಾ