Перейти к содержимому

ಕನ್ನಡ ಪೆಂಪು | Kannada Pempu | ಕನ್ನಡ ನಾಡಿನ ಹೆಮ್ಮೆ | Karnataka Patriotic Song | Manjula Mohan

Sumadhura Records

0:00 / 0:00

ಕನ್ನಡ ಪೆಂಪು | Kannada Pempu | ಕನ್ನಡ ನಾಡಿನ ಹೆಮ್ಮೆ | Karnataka Patriotic Song | Manjula Mohan

386 просмотров · 1 мес. назад
Sumadhura Records
288 подписчиков
386 просмотров · 1 мес. назад
Full Song Lyrics - ಎನಿತು ಚಂದವೋ ಈ ಕನ್ನಡ ನಡೆನುಡಿ ಕನ್ನಡ ಜನತೆಯ ಅಭಿಮಾನದ ಹೊನ್ನುಡಿ ಕೆಚ್ಚೆದೆ ಕಲಿಗಳ ಹೃದಯದ ನಾಡಿ ಕವಿಗಳು ಬರೆದರು ಕನ್ನಡಮ್ಮನ ಹಾಡಿ ಕನ್ನಡ ನಾಡೇ ಶ್ರೀಗಂಧದ ಸವಿನೆಲೆ ಕನ್ನಡ ನಾಡಲಿ ಜನಿಸಿದೆ ಶಿಲ್ಪಕಲೆ ಮಲೆನಾಡಲಿ ಹಬ್ಬಿವೆ ಗಿರಿಗಳ ಸಾಲೆ ಮನವನ್ನು ಸೆಳೆದಿದೆ ಬೇಲೂರ ಬಾಲೆ ಪಡುವಣ ಗಾಳಿಯು ನೀಡಿದೆ ತಂಪು ಕನ್ನಡ ಇನಿದನಿ ಕರ್ಣಕೆ ಇಂಪು ಕೊಡಗಿನ ನಾಡಿನ ಕಿತ್ತಲೆ ಸೊಂಪು ಪಂಪನು ಸಾರಿದ ಕನ್ನಡ ಪೆಂಪು ರಾಯಣ್ಣ ಹೊಯ್ಸಳ ಎಚ್ಚಮ್ಮ ನಾಯಕ ಅಕ್ಕ ಬಸವ ಅಲ್ಲಮ್ಮರ ಧರ್ಮವೇ ಕಾಯಕ ಕುವೆಂಪು ಬೇಂದ್ರೆ ಕಾರಂತ ಗೋಕಾಕ್ ಮಾಸ್ತಿ ಮಲ್ಲಮ್ಮ ಚೆನ್ನಮ್ಮ ಓಬವ್ವರೆಲ್ಲಾ ಕನ್ನಡದ ಆಸ್ತಿ ------------------------------------------- ಕನ್ನಡ ಭಾಷೆಯ ಸೊಗಸು, ಕನ್ನಡ ನಾಡಿನ ವೈಭವ, ಶೌರ್ಯ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ನಮ್ಮ ಹೆಮ್ಮೆಯ ಕನ್ನಡಿಗರನ್ನು ಕೊಂಡಾಡುವ ಮನಮುಟ್ಟುವ ಗೀತೆ “ಕನ್ನಡ ಪೇಂಪು”. ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ್, ಮಾಸ್ತಿ ಮುಂತಾದ ಮಹಾನ್ ಸಾಹಿತಿಗಳಿಂದ ಹಿಡಿದು ರಾಯಣ್ಣ, ಹೊಯ್ಸಳ, ಎಚ್ಚಮ್ಮ ನಾಯಕ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಹಾಗೂ ಕನ್ನಡದ ಅನೇಕ ಹೆಮ್ಮೆಯ ವ್ಯಕ್ತಿತ್ವಗಳನ್ನು ನೆನಪಿಸುವ ಈ ಹಾಡು ಕರ್ನಾಟಕದ ನೆಲ, ನುಡಿ ಮತ್ತು ಸಂಸ್ಕೃತಿಗೆ ನಮ್ಮ ಗೌರವದ ನಮನ. ಮಲೆನಾಡಿನ ಹಸಿರು ಬೆಟ್ಟಗಳಿಂದ ಕೊಡಗಿನ ಸೊಂಪಿನವರೆಗೆ, ಬೇಲೂರಿನ ಶಿಲ್ಪಕಲೆಯಿಂದ ವಿಜಯನಗರದ ವೈಭವದವರೆಗೆ — ಇದು ಕನ್ನಡ ನಾಡಿನ ಆತ್ಮವನ್ನು ಸಂಭ್ರಮಿಸುವ ಹಾಡು. 🎵 ಹಾಡು: ಕನ್ನಡ ಪೇಂಪು ✍️ ಸಾಹಿತ್ಯ: ಮಂಜುಳಾ ಮೋಹನ್ ❤️💛 ಕನ್ನಡವೇ ನಮ್ಮ ಹೆಮ್ಮೆ | ಕನ್ನಡವೇ ನಮ್ಮ ಉಸಿರು ನಿಮಗೆ ಹಾಡು ಇಷ್ಟವಾದರೆ Like, Share & Subscribe ಮಾಡಿ. 🎵 Welcome to **Sumadhura Records**! Creating original music, animated songs, and meaningful short films that inspire, entertain, and celebrate storytelling. If you enjoy our work, don't forget to *Like, Share & Subscribe* for more. © Sumadhura Records. All Rights Reserved. #ಕನ್ನಡಪೇಂಪು #KannadaPempu #Kannada #KannadaSong #KannadaPride #Karnataka #KarnatakaPride #KannadaAbhimana #KannadaNadu #KannadaCulture #KannadaLiterature #KarnatakaCulture #KannadaPatrioticSong #ಕನ್ನಡ #ಕರ್ನಾಟಕ