Перейти к содержимому

ಯಾಕೆ ಬಿಟ್ಟೋದೆ ಅಪ್ಪು… 😭 | Emotional Tribute to Puneeth Rajkumar 2026| Kannada Tribute Song

ಖಾಲಿ ಕಾಗದ

0:00 / 0:00

ಯಾಕೆ ಬಿಟ್ಟೋದೆ ಅಪ್ಪು… 😭 | Emotional Tribute to Puneeth Rajkumar 2026| Kannada Tribute Song

1 344 просмотра · 1 дн. назад
ಖಾಲಿ ಕಾಗದ
400 подписчиков
1 344 просмотра · 1 дн. назад
💔 ಯಾಕೆ ಬಿಟ್ಟೋದೆ ಅಪ್ಪು… | Emotional Tribute to Puneeth Rajkumar ❤️‍🩹 ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಈ ಭಾವನಾತ್ಮಕ ಗೀತೆಯ ಮೂಲಕ ನಮ್ಮ ಹೃದಯಪೂರ್ವಕ ನಮನ. 🙏 ನಿಮ್ಮ ನಗು, ನಿಮ್ಮ ಸರಳತೆ, ನಿಮ್ಮ ಮುಗ್ಧತೆ, ನಿಮ್ಮ ಮಾನವೀಯತೆ ಮತ್ತು ಕನ್ನಡ ನಾಡಿನ ಮೇಲಿನ ನಿಮ್ಮ ಪ್ರೀತಿ ಎಂದೆಂದಿಗೂ ನಮ್ಮ ಮನದಲ್ಲಿ ಜೀವಂತವಾಗಿರುತ್ತದೆ. ನೀವು ನಮ್ಮೊಂದಿಗಿಲ್ಲ ಎಂಬ ನೋವು ಎಂದಿಗೂ ಮಾಸುವುದಿಲ್ಲ. ನಿಮ್ಮ ನೆನಪುಗಳು ಎಂದಿಗೂ ಬತ್ತುವುದಿಲ್ಲ; ನಿಮ್ಮ ನಗುವಿನ ಛಾಯೆ ಎಂದಿಗೂ ಅಳಿಯುವುದಿಲ್ಲ. ❤️ 🎵 ಹಾಡಿನ ವಿವರಗಳು (Song Credits) ✍️ Lyrics (ಸಾಹಿತ್ಯ): Pramod Kumar 🎼 Song / Music Composition: AI Assist 🎬 Video Clips: AI Assist 🎞️ Editing & Making: Pramod Kumar 🎶 ಹಾಡಿನ ಸಾಹಿತ್ಯ (Lyrics) ಪಲ್ಲವಿ ಅಪ್ಪು ಅಪ್ಪು ಅಪ್ಪು ಅಪ್ಪು... ನಮ್ಮನ್ಯಾಕೆ ಬಿಟ್ಟೋದೆ ನೀ ಅಪ್ಪು.... ಅಪ್ಪು ಅಪ್ಪು ಅಪ್ಪು ಅಪ್ಪು... ಬಾರದೂರಿಗೆ ಯಾಕೆ ಹೋದೆ ಅಪ್ಪು.... ಎಲ್ಲರ ಹೃದಯದಿ ಪ್ರೀತಿಯ ಹಂಚಿ ಎಲ್ಲೋದೆ ಅಪ್ಪು... ನೊಂದ ಮನದಲ್ಲಿ ನಗುವನು ಚೆಲ್ಲಿ ಮರೆಯಾದೆಯೋ ಅಪ್ಪು... ಅಪ್ಪು ಅಪ್ಪು ಅಪ್ಪು ಅಪ್ಪು... ನಮ್ಮನ್ಯಾಕೆ ಬಿಟ್ಟೋದೆ ನೀ ಅಪ್ಪು.... ಚರಣ 1 ರಾಜಕುಮಾರನ ಮುದ್ದಿನ ಮಗನೇ, ಕನ್ನಡಿಗರ ಎದೆಯರಸನೇ ಸರಳತೆಯ ಸಾಕಾರ ಮೂರ್ತಿ, ಕರುನಾಡಿನ ಹೆಮ್ಮೆಯ ಕೀರ್ತಿ ಬೆಳ್ಳಿತೆರೆಯ ನಗುವಿನ ಒಡೆಯ ಎಲ್ಲರ ಪಾಲಿಗೂ ನೀನೇ ಗೆಳೆಯ ಚಿತ್ರರಂಗದ ಗೆಲುವಿನ ಶಕ್ತಿ ಅಭಿಮಾನಿಯ ನಲ್ಮೆಯ ಭಕ್ತಿ ಚರಣ 2 ಎಲ್ಲಿ ಹೋದಿರಿ ನೀವು ಅನಾಥರಾದೆವು ನಾವು ಮತ್ತೆ ಹುಟ್ಟಿ ಬನ್ನಿರಿ ಅಪ್ಪು ಕನ್ನಡ ಮಣ್ಣಲಿ... ಅಗಲಿಕೆಯ ನೋವು ನಾಡಲಿ ದಿನವೂ ಕಾಡಿದೆ... ಓ.ಓ..ಓ ಮತ್ತೆ ಹುಟ್ಟಿ ಬನ್ನಿರಿ ಎಂದು ಮನವು ಬೇಡಿದೆ... ಅಪ್ಪು... ಅಪ್ಪು... ಅಪ್ಪು... ಮತ್ತೆ ಹುಟ್ಟಿ ಬನ್ನಿ ಅಪ್ಪು... ಚರಣ 3 ಎಲ್ಲಿ ಹುಡುಕಲಿ ನಿಮ್ಮಯ ರೂಪ, ಎಲ್ಲಿ ಕೇಳಲಿ ನಿಮ್ಮಯ ಧ್ವನಿಯು ಮಣ್ಣ ಸೇರಿದರೂ ನಿಮ್ಮಯ ದೇಹ ನಗುವ ನೋಡಲು ತೀರದ ದಾಹ ನಿಮ್ಮ ನೆನಪಿನ ಚಿಲುಮೆಯ ಧಾರೆ ಎಂದು ಬತ್ತೊಲ್ಲ ನಿಮ್ಮ ಮಗುವಿನ ನಗುವಿನ ಛಾಯೆ ಎಂದು ಅಳಿಸೊಲ್ಲ ಕರ್ನಾಟಕ ರತ್ನದ ಕಂದ ನಿಮ್ಮ ಮುಗ್ಧತೆ ನಮಗೆ ಚಂದ... ಮತ್ತೆ ಪಲ್ಲವಿ ಅಪ್ಪು ಅಪ್ಪು ಅಪ್ಪು ಅಪ್ಪು... ನಮ್ಮನ್ಯಾಕೆ ಬಿಟ್ಟೋದೆ ನೀ ಅಪ್ಪು.... ಅಪ್ಪು ಅಪ್ಪು ಅಪ್ಪು ಅಪ್ಪು... ಬಾರದೂರಿಗೆ ಯಾಕೆ ಹೋದೆ ಅಪ್ಪು... 🙏 ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಜೀವಂತ. ನಿಮ್ಮ ನಗು ಕನ್ನಡಿಗರ ಮನದಲ್ಲಿ ಸದಾ ಬೆಳಗುತ್ತಿರಲಿ. ಈ ಗೀತೆ ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಅರ್ಪಿಸಲಾದ ಭಾವನಾತ್ಮಕ ನಮನ. ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಅನಿಸಿಕೆಗಳನ್ನು Comment 💬 ಮಾಡಿ ಮತ್ತು ಇನ್ನಷ್ಟು ಕನ್ನಡ ಗೀತೆಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ❤️ ಮಾಡಿ. #PuneethRajkumar #Appu #PowerStar #EmotionalTribute #KannadaSong #AppuTribute #KannadaTributeSong #KhaliKagada #PramodKumar