ದೀಪಾವಳಿಯ ಪ್ರಾರಂಭ ಗೋವತ್ಸ ದ್ವಾದಶಿ ಮಂತ್ರ ಸಹಿತ
Jeevanaa Belakuu | Dr. Anupama
0:00 / 0:00
ದೀಪಾವಳಿಯ ಪ್ರಾರಂಭ ಗೋವತ್ಸ ದ್ವಾದಶಿ ಮಂತ್ರ ಸಹಿತ
1 583 просмотра · 19 ч назад
Jeevanaa Belakuu | Dr. Anupama
5,72 тыс. подписчиков
1 583 просмотра · 19 ч назад
॥ ಶ್ರೀ ಸುರಭೀ ದೇವಿ ಸ್ತೋತ್ರ ||
ಪುರಂದರ ಉವಾಚ ।
ಓಂ ಸುರಭ್ಯೈ ನಮ ಇತಿ ಮಂತ್ರಸ್ತಸ್ಯಾಃ ಷಡಕ್ಷರಃ | ಸಿದ್ಧೋ ಲಕ್ಷಜಪೇನೈವ ಭಕ್ತಾನಾಂ ಕಲ್ಪಪಾದಪಃ ॥೧॥
ನಮೋ ದೇವ್ಯೈ ಮಹಾದೇವ್ಯೈ ಸುರಭ್ಯೈ ಚ ನಮೋ ನಮಃ
ಗವಾಂ ಬೀಜಸ್ವರೂಪಾಯೈ ನಮಸ್ತೇ ಜಗದಂಬಿಕೇ ||೨||
ನಮೋ ರಾಧಾಪ್ರಿಯಾಯೈ ಚ ಪದ್ಮಾಂಶಾಯೈ ನಮೋ ನಮಃ ನಮಃ ಕೃಷ್ಣಪ್ರಿಯಾಯೈ ಚ ಗವಾಂ ಮಾತ್ರೇ ನಮೋ ನಮಃ ॥೩॥
ಕಲ್ಪವೃಕ್ಷಸ್ವರೂಪಾಯೈ ಸರ್ವೇಷಾಂ ಸತತಂ ಪರೇ । ಕ್ಷೀರದಾಯೈ ಧನದಾಯೈ ಬುದ್ದಿದಾಯೈ ನಮೋ ನಮಃ
||೪||
ಶುಭಾಯೈ ಚ ಸುಭದ್ರಾಯೈ ಗೋಪ್ರದಾಯೈ ನಮೋ ನಮಃ
ಯಶೋದಾಯೈ ಕೀರ್ತಿದಾಯೈ ಧರ್ಮದಾಯೈ ನಮೋ :ನಮಃ ॥೫॥
ಸ್ತೋತ್ರಶ್ರವಣಮಾತ್ರೇಣ ತುಷ್ಟಾ ಹೃಷ್ಟಾ ಜಗತ್ಪ್ರಸೂಃ | ಆವಿರ್ಬಭೂವ ತತ್ರೈವ ಬ್ರಹ್ಮಲೋಕೇ ಸನಾತನೀ ||೬||
ಇದಂ ಸ್ತೋತ್ರಂ ಮಹಾಪುಣ್ಯಂ ಭಕ್ತಿಯುಕ್ತಶ್ಚ ಯಃ ಪಠೇತ್
ಸ ಗೋಮಾನ್ ಧನವಾಂಶೈವ ಕೀರ್ತಿಮಾನ್ಪುತ್ರವಾಂ ಸ್ತಥಾ
||೭||
ಸ ಸ್ನಾತಃ ಸರ್ವತೀರ್ಥೇಷು ಸರ್ವಯಜ್ಞೇಷು ದೀಕ್ಷಿತಃ |
ಇಹ ಲೋಕೇ ಸುಖಂ ಭುಕ್ತ್ವಾ ಯಾತ್ಯಂತೇ ಕೃಷ್ಣಮಂದಿರೇ
॥೮॥
ಸುಚಿರಂ ನಿವಸೇತ್ತತ್ರ ಕರೋತಿ ಕೃಷ್ಣಸೇವನಂ |
ನ ಪುನರ್ಭವನಂ ತತ್ರ ಬ್ರಹ್ಮಪುತ್ರೋ ಭವೇತ್ತತಃ ||೯||
🙏🙏🙏
ಗೋವತ್ಸ ದ್ವಾದಶೀ
ಆಶ್ವಿನ ಕೃಷ್ಣಪಕ್ಷದ ದ್ವಾದಶಿಯಂದು "ಗೋವತ್ಸ ದ್ವಾದಶೀ" ಇಂದು ಕರು ಸಹಿತವಾದ ಗೋವಿನ ಚಿತ್ರವನ್ನು ಬರೆದು ಗವಾಂತರ್ಯಾಮಿ ಗೋಪಾಲಕೃಷ್ಣನನ್ನು ಆವಾಹಿಸಿ ಚಂದನ ಪುಷ್ಪಾದಿಗಳಿಂದ ಪೂಜಿಸಬೇಕು. ನಂತರ ಕರು ಸಹಿತವಾದ ಗೋವನ್ನು ದೇವರಿಗೆ ಹಾಕಿದ ಪುಷ್ಪ ಮಾಲೆಯಿಂದ ಅಲಂಕರಿಸಿ, ಗಂಧವನ್ನು, ಅರಷಿಣ ಕುಂಕುಮವನ್ನು ಹಚ್ಚಿ ಹಸುವಿನ ಕಾಲುಗಳಿಗೆ ಅರ್ಘ್ಯವನ್ನು ತಾಮ್ರಪಾತ್ರೆಯಲ್ಲಿರುವ ಹಾಲಿನಿಂದ ಕೊಡಬೇಕು.
ಅರ್ಘ್ಯ ಮಂತ್ರ..
ಕ್ಷೀರೋದಾರ್ಣವ ಸಂಭೂತೇ ಸುರಾಸುರ ನಮಸ್ಕೃತೇ |
ಸರ್ವದೇವಮಯೇ ಮಾತಃ ಗೃಹಾಣಾರ್ಘ್ಯಂ ನಮೋsಸ್ತು ತೇ ||
ಹಸುವಿಗೆ ಉದ್ದಿನ ದೋಸೆಗಳನ್ನು ಕೊಡಬೇಕು.
ಗೊಗ್ರಾಸ ಮಂತ್ರ..
ಸುರಭಿ ತ್ವಂ ಜಗನ್ಮಾತಃ ದೇವಿ ವಿಷ್ಣುಪದೇ ಸ್ಥಿತಾ |
ಸರ್ವದೇವಮಯೇ ಗ್ರಾಸಂ ಮಯಾ ದತ್ತಮಿಮಂ ಗ್ರಸ ।।
ತದ್ದಿನೇ ತೈಲಪಕ್ವಂ ಚ ಸ್ಥಾಲೀಪಕ್ವಂ ಯುಧಿಷ್ಠಿರ |
ಗೋಕ್ಷೀರಂ ಗೋಚ್ಛತಂ ಚೈವ ದಧಿ ತಕ್ರಂ ಚ ವರ್ಜಯೇತ್ ॥
ಗೋವತ್ಸ ದ್ವಾದಶಿಯಂದು ಎಣ್ಣೆಯಿಂದ ಕರಿದ ವಸ್ತುಗಳು, ಹಸುವಿನ ಹಾಲು, ಮೊಸರು, ತುಪ್ಪ, ಮಜ್ಜಿಗೆಯನ್ನು ಸೇವಿಸಬಾರದು
ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು*
ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..
೧. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..
೨. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..
೩. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..
೪. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ,
೫. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..
೬. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.
೭. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..
೮. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..
೯. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..
೧೦. ನಾಲಗೆಯಲ್ಲಿ ವರುಣನ ವಾಸ..
೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..
೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..
೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..
೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..
೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..
೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..
೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ
೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ
೧೯. ಬೆನ್ನಿನಲ್ಲಿ ರುದ್ರರ ವಾಸ..
೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.
೨೧. ಬಾಲದಲ್ಲಿ ಸೋಮದೇವತೆಯ ವಾಸ.
೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..
೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..
೨೪. ಗೋಮೂತ್ರದಲ್ಲಿ ಗಂಗೆಯ ವಾಸ..
೨೫. ಗೋಮಯದಲ್ಲಿ ಯಮುನೆಯ ವಾಸ..
೨೬. ಹಾಲಿನಲ್ಲಿ ಸರಸ್ವತಿಯ ವಾಸ..
೨೭. ಮೊಸರಿನಲ್ಲಿ ನರ್ಮದೆಯ ವಾಸ..
೨೮. ತುಪ್ಪದಲ್ಲಿ ಅಗ್ನಿಯ ವಾಸ..
೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..
೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..
೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..
೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..
ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವಿನ ರಕ್ಷಣೆ ನಮ್ಮ ಹೊಣೆ..