Перейти к содержимому

ಪಕ್ಷಿಕೆರೆ ಅತ್ತೂರು ಬಳಿ ಮನೆಗೆ ಬಡಿದ ಸಿಡಿಲು -ಮೂವರಿಗೆ ಗಂಭೀರ ಗಾಯ

Skanda Tv

0:00 / 0:00

ಪಕ್ಷಿಕೆರೆ ಅತ್ತೂರು ಬಳಿ ಮನೆಗೆ ಬಡಿದ ಸಿಡಿಲು -ಮೂವರಿಗೆ ಗಂಭೀರ ಗಾಯ

29 926 просмотров · 1 дн. назад
Skanda Tv
3,85 тыс. подписчиков
29 926 просмотров · 1 дн. назад
ಪಕ್ಷಿಕೆರೆ ಅತ್ತೂರು ಬಳಿ ಮನೆಗೆ ಬಡಿದ ಸಿಡಿಲು -ಮೂವರಿಗೆ ಗಂಭೀರ ಗಾಯ ಮುಲ್ಕಿ:: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಅತ್ತೂರು ಗ್ರಾಮದ ಅರಿಂಜಗುಡ್ಡೆ ಎಂಬಲ್ಲಿ ಮಿಥುನ್ ಎಂಬವರ ಮನೆಗೆ ಸಿಡಿಲು ಹೊಡೆದು ಮನೆಗೆ ಹಾನಿಯಾಗಿದ್ದು ಮನೆಯಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಗಾಯಗೊಂಡವರನ್ನು ಸ್ಥಳೀಯ ನಿವಾಸಿಗಳಾದ ಲಕ್ಷ್ಮಿ (62), ವೀಕ್ಷಿತ (33), ಮಿಶಿಕ (8) ಎಂದು ಗುರುತಿಸಲಾಗಿದ್ದು ಕೆಲಸದ ನಿಮಿತ್ತ ಮಿಥುನ್ ಹೊರಗಡೆ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಗುರುವಾರ ರಾತ್ರಿ ಸುಮಾರು ಎಂಟು ಗಂಟೆಗೆ ಮನೆಯ ಹಿಂಭಾಗಕ್ಕೆ ಸಿಡಿಲು ಹೊಡೆದಿದ್ದು ಈ ಸಂದರ್ಭ ಮನೆಯ ಒಂದು ಪಾರ್ಶ್ವ ಬಿರುಕು ಬಿಟ್ಟಿದೆ ಮನೆಯೊಳಗಿನ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ನಾಶವಾಗಿದೆ ಈ ಸಂದರ್ಭ ಮನೆಯೊಳಗಿದ್ದ ವೀಕ್ಷಿತ ಹಾಗೂ ಅವರ ಮಗಳು ಮಿಶಿಕಾ ರವರಿಗೆ ಸಿಡಿಲು ಹೊಡೆದು ಗಂಭೀರ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ವೀಕ್ಷಿತಾ ರವರ ತಾಯಿ ಲಕ್ಷ್ಮಿರವರಿಗೂ ಸಿಡಿಲು ಹೊಡೆದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಬಡತನದಲ್ಲಿರುವ ಮಿಥುನ್ ಕುಟುಂಬ ಸಿಡಿಲಾಘಾತದಿಂದ ತತ್ತರಿಸಿ ಹೋಗಿದೆ ಇನ್ನೊಂದು ಪ್ರಕರಣದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಾಡುಬಳಿಯ ಬಂಗಾರಪ್ಪ ಶಾಡಾ ಗುಪ್ಪಿ ಎಂಬವರ ಮನೆಗೆ ಸಿಡಿಲು ಬಡಿದು ನಷ್ಟ ಸಂಭವಿಸಿದೆ ಕೆಮ್ರಾಲ್ ಗ್ರಾಮ ಪಂಚಾಯಿತಿಗೆ ಕೂಡ ಸಿಡಿಲು ಬಡಿದು ಫ್ಯಾನ್ ಸೋಲಾರ್, ಹಾಗೂ ಪಂಚಾಯತ್ ಗೆ ಸೇರಿದ ಭಟ್ಟಕೋಡಿ ಬಳಿಯ ಕೊಳವೆಬಾವಿ ಪಂಪ್ ಗೆ ಹಾನಿಯಾಗಿ ನಷ್ಟ ಸಂಭವಿಸಿದೆ ಸ್ಥಳಕ್ಕೆ ಕೆಮ್ರಾಲ್ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಮಯ್ಯದ್ದಿ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಕೇಶವ ದೇವಾಡಿಗ, ವಿಎ ಆಶಾ ಮೆಹಂದಲೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ