Перейти к содержимому

ಶ್ರೀ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಂಪೂರ್ಣ ವಿಡಿಯೋ

SRI HARKOOD

0:00 / 0:00

ಶ್ರೀ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಂಪೂರ್ಣ ವಿಡಿಯೋ

246 просмотров · 12 ч назад
SRI HARKOOD
35,1 тыс. подписчиков
246 просмотров · 12 ч назад
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಪೀಠಾಧಿಪತಿಗಳಾದ "ಶಿವಾಚಾರ್ಯರತ್ನ" "ಧರ್ಮರತ್ನ" "ಸದ್ಧರ್ಮ ಶಿಖಾಮಣಿ" "ಕರ್ನಾಟಕ ಸಾಂಸ್ಕೃತಿಕ ರತ್ನ" ಶ್ರೀ ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು, ಸಂಸ್ಥಾನ ಹಿರೇಮಠ, ಸುಕ್ಷೇತ್ರ ಹಾರಕೂಡ ಇವರ ಪಾವನ ಸಾನಿಧ್ಯದಲ್ಲಿ ದಿನಾಂಕ 19-10-2026 ಸೋಮವಾರ ಬೆಳಗ್ಗೆ 11 ಗಂಟೆಗೆ ಲಿಂಗೈಕ್ಯ ಶ್ರೀ ಗುರುಲಿಂಗ ಶಿವಾಚಾರ್ಯರ 57ನೇ ಪುಣ್ಯ ಸ್ಮರಣೋತ್ಸವ ಹಾಗೂ 40ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಮತ್ತು ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಸಮಾರಂಭದ ಉದ್ಘಾಟನೆ ಡಾ. ವಿಕ್ರಮ ವಿಸಾಜಿ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣು ಸಲಗರ ಶಾಸಕರು, ಬಸವಕಲ್ಯಾಣ ವಹಿಸಿದ್ದರು. 2026ನೇ ಸಾಲಿನ "ಶ್ರೀ ಚನ್ನ ರೇಣುಕ ಬಸವ" ರಾಷ್ಟ್ರೀಯ ಪ್ರಶಸ್ತಿಯನ್ನು ನಾಡೋಜ ಪಂಡಿತ ಡಾ. ಎಂ. ವೆಂಕಟೇಶಕುಮಾರ ಅವರಿಗೆ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಒಂದು ಲಕ್ಷ ರೂಪಾಯಿ ನಗದು ಎರಡು ತೊಲೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು ಶ್ರೀ ಮಲ್ಲಿನಾಥ ಹಿರೇಮಠ ಹಾರಕೂಡ ಅವರು ಸಂಪಾದಿಸಿದ ಸದ್ಗುರು ಶ್ರೀ ಹಾರಕೂಡ ಚನ್ನಬಸವ ಶಿವಯೋಗಿಗಳ ಕುರಿತು ಭಕ್ತಿಗೀತೆಗಳ "ಶ್ರೀ ಹಾರಕೂಡ ಚನ್ನಬಸ" ಗ್ರಂಥ ಹಾಗೂ ಹಿರಿಯ ಪ್ರಾಧ್ಯಾಪಕರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಲೇಖನದ, ಬೇಂದ್ರೆ ಕಾವ್ಯ : "ಮರ್ತ್ಯದಲ್ಲಿ ಅರಳಿದ ದೇವಲೋಕ" ಗ್ರಂಥವನ್ನು ಶ್ರೀ ಸುಭಾಷ ಮುರುಡ ಬೆಳಮಗಿ, ಉಪಾಧ್ಯಕ್ಷರು ಸಹಕಾರಿ ಸಕ್ಕರೆ ಕಾರ್ಖಾನೆ ಆಳಂದ ಬಿಡುಗಡೆಗೊಳಿಸಿದರು. ಉಪನ್ಯಾಸ : ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಹಿರಿಯ ಪ್ರಾಧ್ಯಾಪಕರು, ಧಾರವಾಡ ವಿಷಯ : ಬೇಂದ್ರೆ ಕಾವ್ಯ : ಮರ್ತ್ಯದಲ್ಲಿ ಅರಳಿದ ದೇವಲೋಕ. ಮುಖ್ಯ ಅತಿಥಿಗಳು ಡಾ. ಸಂಗಮೇಶ ಸವದತ್ತಿಮಠ, ಹಿರಿಯ ಉಪನ್ಯಾಸಕರು, ಧಾರವಾಡ, ಶ್ರೀ ಪ್ರಕಾಶ ಕುದರೆ ಕೆ.ಎ.ಎಸ್. ಸಹಾಯಕ ಆಯುಕ್ತರು, ಬಸವಕಲ್ಯಾಣ, ಶ್ರೀ ಮಡೋಳಪ್ಪ ಪಿ.ಎಸ್ ಡಿ.ವಾಯ್.ಎಸ್.ಪಿ. ಹುಮನಾಬಾದ, ಶ್ರೀ ಬಾಬು ಹೊನ್ನಾನಾಯಕ ಅಧ್ಯಕ್ಷರು, ಕಾಡಾ-ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಾಧಿಕಾರ ಭೀಮರಾಯನ ಗುಡಿ, ಶ್ರೀ ಶಶಿಕಾಂತ ದುರ್ಗೆ ಅಧ್ಯಕ್ಷರು, ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ, ಬಸವಕಲ್ಯಾಣ, ಶ್ರೀ ಎಸ್. ಎಸ್. ನಾಗರಾಳೆ ಹಾರಕೂಡ, ನಿವೃತ್ತ ನ್ಯಾಯಾಧೀಶರು, ಬೆಂಗಳೂರು, ಶ್ರೀ ದೇವಿದಾಸ ಚವ್ಹಾಣ ಹಾರಕೂಡ ತಾಂಡಾ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ, ಪ್ರಾಸ್ತಾವಿಕ ನುಡಿ : ಡಾ. ಗವಿಸಿದ್ದಪ್ಪ ಎಚ್. ಪಾಟೀಲ, ಸಾಹಿತಿಗಳು ಕಲಬುರಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 2026ನೇ ಸಾಲಿನ "ಶ್ರೀ ಚನ್ನ ರೇಣುಕ ಬಸವ" ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಸಂಗೀತ ಲೋಕದ ದಿಗ್ಗಜ ಪಂ. ಡಾ. ಎಂ. ವೆಂಕಟೇಶಕುಮಾರ ಅವರು ತಮ್ಮ ಸುಮಧುರ ಕಂಠದಿಂದ ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ರಚಿಸಿದ ಚನ್ನ ಚಂದ್ರಹಾರ ಗ್ರಂಥದಲ್ಲಿನ 2 ಪದ್ಯಗಳನ್ನು ಹಾಡಿ ವಚನ ಗಾಯನ ಮಾಡಿದರು. ಪ್ರಾರ್ಥನೆ : ಡಾ. ಸಿದ್ರಾಮಯ್ಯ ಸ್ವಾಮಿ ಗೋರಟಾ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟೆ, ಶ್ರೀ ಜನಾರ್ಧನ ವಾಘಮಾರೆ ಹುಮನಾಬಾದ, ಶ್ರೀ ನವಲಿಂಗ ಪಾಟೀಲ ಅಕಾಶವಾಣಿ ಕಲಾವಿದರು. ಮನ್ನಾಖೇಳಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಶ್ರೀ ಅಂಬರಾಯ ಉಗಾಜಿ ಸ್ವಾಗತಿಸಿದರು. ಕುಮಾರಿ ರಾಜಶ್ರೀ ದಿಲೀಪಕುಮಾರ ಸ್ವಾಮಿ ಸಂಗೀತ ಸೇವೆ ಸಲ್ಲಿಸಿದರು. ನವಲಿಂಗ ಪಾಟೀಲ ನಿರೂಪಣೆ ಮಾಡಿದರು. ಶ್ರೀ ಜಗನ್ನಾಥ ಸಿದ್ರಾಮಪ್ಪಾ ಕುಂಬಾರ ಸರಜವಳಗಾ ಮು॥ ಲಾತೂರ ಅವರು 57ನೇ ಪುಣ್ಯ ಸ್ಮರಣೋತ್ಸವದ ದಾಸೋಹ ಸೇವೆ ಮಾಡಿದರು.