Перейти к содержимому

ಜಾನಪದ ಸಿರಿ|| ಪಂಚಮಿ ಹಬ್ಬ ಉಳಿದಾವ ದಿನ ನಾಕ||

ನಾದ ಭಂಡಾರ

0:00 / 0:00

ಜಾನಪದ ಸಿರಿ|| ಪಂಚಮಿ ಹಬ್ಬ ಉಳಿದಾವ ದಿನ ನಾಕ||

1 262 просмотра · 1 месяц назад
ನಾದ ಭಂಡಾರ
634 подписчика
1 262 просмотра · 1 месяц назад
ಪಂಚಮಿ ಹಬ್ಬ ಉಳಿದಾವ ದಿನ ನಾಕ ಅಣ್ಣ ಬರಲ್ಲಿಲ್ಲ ಯಾಕ ಕರಿಯಾಕ||ಪ|| ನಮ್ಮ ತವರೂರು ಗೋಕುಲ ನಗರ ಮನಿ ಎಂಥದ್ದು ರಾಜ ಮಂದಿರ ನಮ್ಮ ಅಣ್ಣಯ್ಯ ದೊಡ್ಡ ಸಾಹುಕಾರ ಹ್ಯಾಂಗ ಆದೀತ ತಂಗಿ ಮರೆಯಾಕ||೧|| ನಮ್ಮ ತವರಲ್ಲಿ ಪಂಚಮಿ ಭಾರಿ ಮನಿ ತುಂಬಾ ಬಟ್ಟಲು ಕೊಬ್ಬರಿ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾ ತಿನುವಾಕಿ ಅಲ್ಲಿ ಮನಸಾರಿ||೨|| ನನ್ನ ಗೆಳತ್ಯಾರು ಮಾಡ್ತಾರ ಗೇಲಿ ಅವರು ಮಾಡೋದು ಅಲ್ಲಿ ಜೋಕಾಲಿ ಹಬ್ಬ ಬಂತು ಬರಲಿಲ್ಲ ಅಣ್ಣ ಯಾಕ ಮನಸು ಹರಿತೈತಿ ತವರಿಗೋಗಾಕ||೩||