Перейти к содержимому

ಖಾಸಗಿ ಉದ್ಯೋಗ ತೊರೆದು ಕೃಷಿಯತ್ತ ಮುಖ | ವಿದೇಶಿ ತಳಿ ಡ್ರ್ಯಾಗನ್ ಹಣ್ಣು ಬೆಳೆದ ಯುವ ರೈತ

DD Chandana News

0:00 / 0:00

ಖಾಸಗಿ ಉದ್ಯೋಗ ತೊರೆದು ಕೃಷಿಯತ್ತ ಮುಖ | ವಿದೇಶಿ ತಳಿ ಡ್ರ್ಯಾಗನ್ ಹಣ್ಣು ಬೆಳೆದ ಯುವ ರೈತ

1 053 просмотра · 6 дней назад
DD Chandana News
109 тыс. подписчиков
1 053 просмотра · 6 дней назад
ಖಾಸಗಿ ಕಂಪನಿಯ ಕೆಲಸದಲ್ಲಿ ಕೈತುಂಬಾ ಸಂಬಳದ ಸಿಗುತ್ತಿದ್ದರೂ, ಕೊಪ್ಪಳ ಜಿಲ್ಲೆಯ ಗಿಣಿಗೇರಿ ಗ್ರಾಮದ ಯುವಕ ಹನಮಂತಪ್ಪ ಕೊಲಕಾರ, ಆ ಕೆಲಸ ತೊರೆದು, ರಾಸಾಯನಿಕಮುಕ್ತ ಸಾವಯವ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೇವಲ ಒಂದು ಎಕರೆ ಜಮೀನಿನಲ್ಲಿ, ವಿದೇಶಿ ತಳಿ ಡ್ರ್ಯಾಗನ್ ಹಣ್ಣು ಬೆಳೆಯುವ ಮೂಲಕ, ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಗಳಿಸಿ, ಯುವ ರೈತ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಈ ಕುರಿತು ಒಂದು ವರದಿ.. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಆಹಾರ ಪದಾರ್ಥಗಳು ಮತ್ತು ಹಣ್ಣುಗಳಿಗೆ ಬಾರಿ ಬೇಡಿಕೆಯಿದ್ದು, ಯುವ ರೈತ ಹನಮಂತಪ್ಪ ಸಾವಯವ ಕೃಷಿ ಮಾದರಿಯಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತನಗಿರುವ ಒಂದು ಎಕರೆ ಜಮೀನಿನಲ್ಲಿ ನಾಲ್ಕು ನೂರು ಗಿಡಗಳನ್ನು ನಾಟಿ ಮಾಡಿದ್ದು, ಗಿಡಗಳಿಗೆ ಕೊಟ್ಟಿಗೆ ಗೊಬ್ಬರ, ಕುರಿ ಮೇಕೆ ಮತ್ತು ಕೋಳಿ ಗೊಬ್ಬರವನ್ನು ನೀಡುತ್ತಿದ್ದಾರೆ. ಜೊತೆಗೆ, ಈ ಹಣ್ಣಿಗೆ ಸಾಮಾನ್ಯವಾಗಿ ಕಾಡುವ ಶಿಲೀಂಧ್ರವನ್ನು ಹತೋಟಿಗೆ ತರಲು ರಾಸಾಯನಿಕ ಅಂಶಗಳ ಅಗತ್ಯವಿರಲಿದೆ ಎಂದು ತಜ್ಞರ ಸಲಹೆ ನೀಡಿದ್ದರೂ, ಮನೆಯಲ್ಲಿ ಸಿಗುವ ಹುಳಿ ಮಜ್ಜಿಗೆಯನ್ನು ಸಿಂಪಡಣೆ ಮಾಡುವ ಮೂಲಕ ಶಿಲೀಂಧ್ರವನ್ನು ಹತೋಟಿಗೆ ತಂದಿದ್ದಾರೆ. ಗಿಡಗಳಿಗೆ ಅಗತ್ಯವಿರುವ ಕ್ಯಾಲ್ಷಿಯಂ ಗಾಗಿ ಕೋಳಿ ಮೊಟ್ಟೆಯ ಸಿಪ್ಪೆ ಹಾಕುತ್ತಿದ್ದಾರೆ ಮತ್ತು ಬೇವಿನಿಂದ ಉತ್ಪನ್ನಗಳ - ನೀಮ್ ಕೇರ್ ಬಳಸುತ್ತಿದ್ದಾರೆ. ಇದರಿಂದ ಡ್ರ್ಯಾಗನ್ ಹಣ್ಣಿನಲ್ಲಿ ಸಿಹಿ ಮತ್ತು ರುಚಿ ಹೆಚ್ಚಳವಾಗುತ್ತಿದ್ದು, ಹಣ್ಣಿನ ಆಯುಷ್ಯ ಜಾಸ್ತಿಯಾಗಿ ಬಹಳದಿನ ಸಂಗ್ರಹಕ್ಕೆ ಸಹಕಾರಿಯಾಗುತ್ತಿದೆ. ಡ್ರಾಗನ್ ಹಣ್ಣಿನ ಬೆಳೆಯ ಜೊತೆಗೆ ಮಿಶ್ರಬೆಳೆ ಬೆಳೆಯುತ್ತಿದ್ದು, ಬದುವಿಗೆ ನುಗ್ಗೆಕಾಯಿ ಗಿಡಗಳಿಂದ ಕೃತಕ ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಆ ಮೂಲಕ ಡ್ರ್ಯಾಗನ್ ಬೆಳೆಯ ರಕ್ಷಣೆ ಮತ್ತು ಹೊರಗಿನಿಂದ ಬರುವ ಕೀಟಗಳನ್ನು ತಡೆಯಲಾಗುತ್ತಿದ್ದು, ಉತ್ತಮ ಇಳವರಿ ಕಂಡುಕೊಂಡಿದ್ದಾರೆ. ಸಂಪೂರ್ಣ ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿರುವ ಹನಮಂತಪ್ಪ ಕೊಲಕಾರ, ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ರೂಪಾಯಿವರೆಗೂ ಆದಾಯ ಗಳಿಸುತ್ತಿದ್ದಾರೆ. ಈ ಕುರಿತಂತೆ ದೂರದರ್ಶನದೊಂದಿಗೆ ಯುವ ರೈತ ಹನಮಂತಪ್ಪ ಕೊಲಕಾರ, ಡ್ಯಾಗನ್ ಹಣ್ಣು ಬೆಳೆಯವುದು ಅಷ್ಟೇ ಅಲ್ಲ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮುಖ್ಯವಾಗಿದೆ. ಬಾಂಬೆ, ಕೊಲ್ಕತ್ತಾ, ಗೋವಾ ಮತ್ತು ಚೆನ್ನೈ ನಗರಗಳಿಗೆ ನೈಸರ್ಗಿಕ ಕೃಷಿಯಲ್ಲಿ ಬೆಳೆದ ಹಣ್ಣಿಗೆ ಬೇಡಿಕೆ ಇದೆ ಅಲ್ಲಿಗೆ ಕಳಿಸುವ ಕೆಲಸ ಮಾಡುತ್ತೇನೆ ಎಂದರು. ರೈತ ಹನುಮಂತಪ್ಪ ಡೊಳ್ಳಿನ, ಸಾಂಪ್ರದಾಯಿಕ ಕೃಷಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಲಾಭದ ಪ್ರಮಾಣ ಕಡಿಮೆಯಾಗಲಿದೆ. ಆದರೆ, ಡ್ರ್ಯಾಗನ್ ಹಣ್ಣನ್ನು ಬೆಳೆದಲ್ಲಿ ಹೆಚ್ಚಿನ ಲಾಭವೂ ಸಿಗಲಿದ್ದು, ಪ್ರತಿ ಕೆ.ಜಿಗೆ ನೂರು ರೂಪಾಯಿಯಂತೆ ಮಾರಾಟವಾಗುತ್ತಿದೆ ಎಂದರು. ರೈತ ಯಲ್ಲಪ್ಪ, ನಮ್ಮ ರಾಜ್ಯದ ಜನರಿಗೆ ಉತ್ತಮ ಹಣ್ಣು ನಮ್ಮ ಗ್ರಾಮದಿಂದ ಸರಬರಾಜು ಆಗುವುದರ ಜೊತೆಗೆ ಬೇರೆ ರಾಜ್ಯಗಳಿಗೂ ರವಾನೆಯಾಗುತ್ತಿರುವುದು ಖುಷಿಯ ಸಂಗತಿ ಎಂದರು. ರೈತ ಮಹಿಳೆ ದೇವಮ್ಮ, ಹನಮಂತಪ್ಪ ಕೊಲಕಾರ ಕಷ್ಟಪಟ್ಟು ಭೂಮಿ ತಾಯಿ ನಂಬಿ ದುಡಿದು ಉತ್ತಮ ಕೃಷಿಕರಾಗಿ ಯುವ ರೈತರಿಗೆ ಮಾದರಿಯಾಗಿದ್ದಾರೆ ಎಂದರು. ಕೊಪ್ಪಳ ಜಿಲ್ಲೆ ತೋಟಗಾರಿಕೆ ಇಲಾಖೆ ಸಾಹಯಕ ನಿರ್ದೇಶಕ ಮಂಜುನಾಥ ದೊಡ್ಡಪತ್ತಾರ, ಹನಮಂತಪ್ಪ ಕೊಲಕಾರ ಅವರು ಖಾಸಗಿ ಕಂಪನಿಯ ಉದ್ಯೋಗ ತೊರೆದು ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಕುಟುಂಬ ಸದಸ್ಯರೊಂದಿಗೆ ಸಾವಯವ ಪದ್ಧತಿಯಲ್ಲಿ ಡ್ರ್ಯಾಗನ್‌ ಹಣ್ಣಿನ್ನು ಬಳೆಯುತ್ತಿದ್ದು ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದಾರೆ. ಇವರ ಸಾಧನೆ ಇತರೆ ರೈತರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು. ಒಟ್ಟಾರೆ. ಕೃಷಿಯನ್ನು ಆಧುನಿಕ ತಂತ್ರಜ್ಞಾನದ ಜೊತೆಗೆ ಬೆಸೆದು, ಸಾವಯವ ಕೃಷಿ ಮಾಡಿ ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಒದಗಿಸುವ ಕಾರ್ಯದಲ್ಲಿ ಯುವ ರೈತ ಹನಮಂತಪ್ಪ ಕೊಲಕಾರ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದ್ದು ಆರ್ಥಿಕ ಸಬಲತೆಯೊಂದಿಗೆ ಉತ್ತಮ ಜೀವನ ಕಂಡುಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ. #LiveDDChandanaNews #DDChandanaNews #DDChandana #DDKannada