Перейти к содержимому

ಸೌಜನ್ಯ ಶವ ಸಿಕ್ಕ ಜಾಗಕ್ಕೆ SIT ಎಂಟ್ರಿ- SITಯಿಂದ ಪೊಲೀಸರ ವಿಚಾರಣೆ- ಡಿಕೆಶಿ ವಿರುದ್ಧ ಸುಪ್ರೀಂಗೆ ದೂರು- Soujanya

Third Eye

0:00 / 0:00

ಸೌಜನ್ಯ ಶವ ಸಿಕ್ಕ ಜಾಗಕ್ಕೆ SIT ಎಂಟ್ರಿ- SITಯಿಂದ ಪೊಲೀಸರ ವಿಚಾರಣೆ- ಡಿಕೆಶಿ ವಿರುದ್ಧ ಸುಪ್ರೀಂಗೆ ದೂರು- Soujanya

89 245 просмотров · 19 ч назад
Third Eye
1,59 млн подписчиков
89 245 просмотров · 19 ч назад
#SoujanyaCase #SoujanyaJustice #Soujanya #Dharmasthala #SITInvestigation #ChetanSinghRathore #KarnatakaPolice #KarnatakaNews #SIT #ForensicInvestigation #CrimeSceneRecreation #KannadaNews #ThirdEyeKannada #JusticeForSoujanya ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯಲ್ಲಿ ದಿನದಿಂದ ದಿನಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸುಮಾರು 14 ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಈಗ ಎಸ್‌ಐಟಿ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ನೇಮಕವಾಗಿದ್ದಾರೆ. 2007ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಇವರು ಪೊಲೀಸ್ ಇಲಾಖೆಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2026ರಲ್ಲಿ ಇವರಿಗೆ ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವಿಸ್ (PMMS) ಗೌರವವೂ ಲಭಿಸಿದೆ. ಇದಕ್ಕೂ ಮೊದಲು ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರನ್ನು ಬದಲಾಯಿಸಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ವೆಂಕಟೇಶ್ ಪ್ರಸನ್ನ ಬದಲಿಗೆ ಹಾಸನದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮರುತನಿಖೆಯ ಭಾಗವಾಗಿ ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಎಂಟು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. 15ಕ್ಕೂ ಹೆಚ್ಚು ಹಿಂದಿನ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಿರುವ ವರದಿಗಳೂ ಪ್ರಕಟವಾಗಿವೆ. ಇನ್ನು ಅಕ್ಟೋಬರ್ 31ರಂದು ಎಸ್‌ಐಟಿ ತಂಡ ಧರ್ಮಸ್ಥಳದ ಮಣ್ಣಸಂಕದ ಅರಣ್ಯ ಪ್ರದೇಶದಲ್ಲಿ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದೆ. 14 ವರ್ಷಗಳ ಹಿಂದಿನ ಘಟನೆಯ ಸೀನ್ ರೀಕ್ರಿಯೇಷನ್ ಮಾಡಲಾಗಿದೆ. ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಬೆಂಗಳೂರು ಎಫ್‌ಎಸ್‌ಎಲ್ ಮತ್ತು SOCO ತಜ್ಞರ ತಂಡವೂ ಪರಿಶೀಲನೆಯಲ್ಲಿ ಭಾಗವಹಿಸಿದೆ. ಆದರೆ 14 ವರ್ಷಗಳ ನಂತರ ಮತ್ತೆ ಸ್ಥಳ ಮಹಜರು ಮಾಡುವ ಉದ್ದೇಶವೇನು? ಮಣ್ಣಿನ ಮಾದರಿಗಳಿಂದ ಯಾವ ರೀತಿಯ ವೈಜ್ಞಾನಿಕ ಮಾಹಿತಿ ಪಡೆಯಬಹುದು? ಸೀನ್ ರೀಕ್ರಿಯೇಷನ್‌ನಿಂದ ಹಿಂದಿನ ತನಿಖೆಯ ಯಾವ ಅಂಶಗಳನ್ನು ಪರಿಶೀಲಿಸಬಹುದು? ಹೊಸ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ಮುಂದಿರುವ ಸವಾಲುಗಳೇನು? ಈ ಎಲ್ಲ ವಿಚಾರಗಳ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ತನಿಖೆ ನಡೆಯುತ್ತಿದ್ದು, ತನಿಖೆಯ ಅಂತಿಮ ಫಲಿತಾಂಶ ಮತ್ತು ನ್ಯಾಯಾಲಯದ ನಿರ್ಧಾರವನ್ನು ಕಾದುನೋಡಬೇಕಿದೆ. thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.