“ಎಲ್ಲಾ ತರಕಾರಿ ಹಾಕಿ ಹೀಗೆ ಗ್ರೇವಿ ಮಾಡಿ ನೋಡಿ 😋 | Super Tasty Mixed Veg Gravy”
Homely Food With Prashu
0:00 / 0:00
“ಎಲ್ಲಾ ತರಕಾರಿ ಹಾಕಿ ಹೀಗೆ ಗ್ರೇವಿ ಮಾಡಿ ನೋಡಿ 😋 | Super Tasty Mixed Veg Gravy”
353 просмотра · 12 дней назад
Homely Food With Prashu
79 подписчиков
353 просмотра · 12 дней назад
“ಎಲ್ಲಾ ತರಕಾರಿ ಹಾಕಿ ಹೀಗೆ ಗ್ರೇವಿ ಮಾಡಿ ನೋಡಿ 😋 | Super Tasty Mixed Veg Gravy”
📝 Ingredients / ಪದಾರ್ಥಗಳು
ಮಸಾಲೆಗಾಗಿ:
1 cup grated coconut – 1 ಕಪ್ ತುರಿದ ತೆಂಗಿನಕಾಯಿ
2 Tomatoes – 2 ಟೊಮ್ಯಾಟೊ
2 pieces Cinnamon – 2 ಪೀಸ್ ಚಕ್ಕೆ
4 Cloves – 4 ಲವಂಗ
1 Cardamom – 1 ಏಲಕ್ಕಿ
1 inch Ginger – 1 ಇಂಚು ಶುಂಠಿ
1 Garlic – 1 ಬೆಳ್ಳುಳ್ಳಿ
2 Guntur red chillies – 2 ಗುಂಟೂರು ಒಣಮೆಣಸಿನಕಾಯಿ
2 Byadagi red chillies – 2 ಬ್ಯಾಡಗಿ ಒಣಮೆಣಸಿನಕಾಯಿ
1 tbsp Fennel seeds – 1 ಟೇಬಲ್ ಸ್ಪೂನ್ ಸೋಂಪು
Little water – ಸ್ವಲ್ಪ ನೀರು
ಗ್ರೇವಿಗಾಗಿ:
2 tbsp Oil – 2 ಟೇಬಲ್ ಸ್ಪೂನ್ ಎಣ್ಣೆ
1 finely chopped Onion – ಸಣ್ಣಗೆ ಹೆಚ್ಚಿದ ಈರುಳ್ಳಿ
Beans – ಬೀನ್ಸ್
Green peas – ಬಟಾಣಿ
Ridge gourd – ಹೀರೆಕಾಯಿ
Carrot – ಕ್ಯಾರೆಟ್
Salt – ಉಪ್ಪು
1–2 cups Water – 1–2 ಲೋಟ ನೀರು
1 tbsp Garam masala – 1 ಟೇಬಲ್ ಸ್ಪೂನ್ ಗರಂ ಮಸಾಲಾ
1 tbsp Coriander powder – 1 ಟೇಬಲ್ ಸ್ಪೂನ್ ಧನಿಯಾ ಪುಡಿ
¼ tbsp Turmaric powder -¼ tbsp ಅರಿಶಿಣ ಪುಡಿ
👩🍳 Method / ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್‌ಗೆ ತುರಿದ ತೆಂಗಿನಕಾಯಿ, ಎರಡು ಟೊಮ್ಯಾಟೊ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ, ಬೆಳ್ಳುಳ್ಳಿ, ಗುಂಟೂರು ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ ಮತ್ತು ಸೋಂಪು ಹಾಕಿಕೊಳ್ಳಿ.
ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಎಲ್ಲವನ್ನೂ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಮಸಾಲಾ ರೆಡಿ ಮಾಡಿಕೊಳ್ಳಿ.
ಈಗ ಒಂದು ಕಡಾಯಿಗೆ ಎರಡು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿಕೊಳ್ಳಿ.
ಈರುಳ್ಳಿ ಸ್ವಲ್ಪ ಬಾಡಿದ ಮೇಲೆ ಬೀನ್ಸ್, ಬಟಾಣಿ, ಅವರೆಕಾಳು, ಹೀರೆಕಾಯಿ ಮತ್ತು ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಬಾಡಿಸಿಕೊಳ್ಳಿ.
ತರಕಾರಿಗಳು ಸ್ವಲ್ಪ ಬಾಡಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ನಾವು ರೆಡಿ ಮಾಡಿಕೊಂಡಿರುವ ಮಸಾಲಾ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ 1–2 ಲೋಟ ನೀರು ಹಾಕಿ. ಇದಕ್ಕೆ ಒಂದು ಟೇಬಲ್ ಸ್ಪೂನ್ ಗರಂ ಮಸಾಲಾ, ಒಂದು ಟೇಬಲ್ ಸ್ಪೂನ್ ಧನಿಯಾ ಪುಡಿ ಮತ್ತು ಕಾಲು ಟೇಬಲ್ ಸ್ಪೂನ್ ಖಾರದ ಪುಡಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮುಚ್ಚಳ ಮುಚ್ಚಿ ಸುಮಾರು 10 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
ತರಕಾರಿಗಳು ಚೆನ್ನಾಗಿ ಬೆಂದು ಗ್ರೇವಿ ಚೆನ್ನಾಗಿ ಕುದಿದ ಮೇಲೆ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ನಮ್ಮ ಸರಳವಾದ, ರುಚಿಯಾದ Mixed Vegetable Gravy ರೆಡಿ! 😋
ಇದು ಅನ್ನ, ಚಪಾತಿ, ರೊಟ್ಟಿ, ಪೂರಿ ಎಲ್ಲದರ ಜೊತೆಯೂ ತುಂಬಾ ಚೆನ್ನಾಗಿರುತ್ತದೆ. ❤️
#MixedVegGravy
#MixedVegetableGravy
#VegGravy
#VegCurry
#VegetarianRecipe
#SouthIndianRecipes
#KarnatakaRecipes
#IndianRecipes
#EasyVegRecipe
#HomemadeFood
#VegRecipes
#LunchRecipe
#ChapatiSideDish
#RiceSideDish
#HomelyFoodWithPrashu