Перейти к содержимому

ನಂಬಿ ಬಂದವರ ಪಾಲಿನ ಆರಾಧ್ಯದೈವ ಈ ರೇವಣಸಿದ್ದೇಶ್ವರ : ರಟಕಲ್‌ ಗುಡ್ಡದ ದೇಗುಲ | Kalaburagi | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ನಂಬಿ ಬಂದವರ ಪಾಲಿನ ಆರಾಧ್ಯದೈವ ಈ ರೇವಣಸಿದ್ದೇಶ್ವರ : ರಟಕಲ್‌ ಗುಡ್ಡದ ದೇಗುಲ | Kalaburagi | Vijay Karnataka

5 417 просмотров · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
5 417 просмотров · 4 года назад
ಡ್ರೋಣ್‌ ಕಣ್ಣಲ್ಲಿ ಗುಡ್ಡದ ಮೇಲಿನ ದೇವಸ್ಥಾನದ ವಿಹಂಗಮ ನೋಟ.. ದೇಗುಲದ ಹೊರಗಿನ ವನದಲ್ಲಿ ಗಮನ ಸೆಳೆಯುತ್ತಿರುವ ಶಿವ, ಹಸುಗಳ ಪ್ರತಿಕೃತಿ.. ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರ ಆಕರ್ಷಿಸುತ್ತಿರುವ ಸರ್ವಾಲಂಕೃತ ಮೂರ್ತಿ.. ಈ ಆಕರ್ಷಕ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ ರಟಕಲ್‌ ರೇವಣಸಿದ್ದೇಶ್ವರ ಗುಡ್ಡದ ದೇವಸ್ಥಾನದಲ್ಲಿ.. ಹೌದು, ಅದು ಹಸಿರಿನ ಹೊದಿಕೆಯ ನಡುವೆ ಇರುವ ಎತ್ತರದ ಗುಡ್ಡ.. ಅದರ ನಡುವೆ ಗಮನ ಸೆಳೆಯುವ ಶ್ರೀ ಕ್ಷೇತ್ರ ರೇವಗ್ಗಿ ರಟಕಲ್‌ ರೇವಣಸಿದ್ದೇಶ್ವರ ದೇವಸ್ಥಾನ.. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ರೇವಣಸಿದ್ದೇಶ್ವರನ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಎತ್ತರದ ಶಿವನ ಮೂರ್ತಿ, ರೇವಣಸಿದ್ದೇಶ್ವರ ಮೂರ್ತಿ ಹಾಗೂ ರೈತರು ಹಾಗೂ ಹಸುಗಳ ಪ್ರತಿಕೃತಿಗಳಿರುವ ಹಳ್ಳಿ ಚಿತ್ರಣ ಗಮನ ಸೆಳೆಯುತ್ತವೆ. ಕಳೆದ ವರ್ಷ 54 ಅಡಿ ಎತ್ತರದ ರೇವಣಸಿದ್ದೇಶ್ವರ ಫೈಬರ್ ಮೂರ್ತಿ ಭಾರೀ ಗಾಳಿಗೆ ಧರೆಗುರುಳಿದ್ದು, ಅದನ್ನು ಕೂಡ ವಾಪಸ್‌ ನಿರ್ಮಿಸುವ ಕಾರ್ಯ ಭರದಿಂದ ಸಾಗ್ತಿದೆ. ಇನ್ನು, ದೇವಸ್ಥಾನದಲ್ಲಿ 187 ಹಸುಗಳನ್ನು ಉತ್ತಮವಾಗಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಹಸುವಿನ ಸಗಣಿಯನ್ನು ಸುಟ್ಟು ಶುದ್ಧಕರಿಸಿ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡದೇ ಉತ್ತಮವಾದ ವಿಭೂತಿ ತಯಾರಿಸಿ ಭಕ್ತರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ರೇವಗ್ಗಿ ಕಟಕಲ್ ರೇವಣಸಿದ್ದೇಶ್ವರ ದೇವಸ್ಥಾನ ಬಹಳ ಪೂರಾತನ ಕಾಲದ ದೇವಸ್ಥಾನವಾಗಿದ್ದು, ಈ ದೇವಸ್ಥಾನಕ್ಕೆ ನಂಬಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಯದ್ದು. ಹೀಗಾಗಿಯೇ ಕರ್ನಾಟಕ ಅಲ್ಲದೇ ಹೊರ ರಾಜ್ಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣದಿಂದ ಭಕ್ತರು ಬರ್ತಾರೆ. ಇಲ್ಲಿ ಪ್ರತಿ ವರ್ಷ 2 ಬಾರಿ ಜಾತ್ರೆ ನಡೆಯುತ್ತದೆ. ಇಲ್ಲಿಗೆ ನಂಬಿ ಬರುವ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸ್ವಾಮಿಗಳಿಗೆ ಊಟ ಬಡಿಸಿ ಕಾರ್ಯಕ್ರಮ ಪ್ರಾರಂಭಿಸುತ್ತಾರೆ ಅಂತಾರೆ ಭಕ್ತ ಶಿವರಾಜ ಪಾಟೀಲ್ ಗೋಣಗಿ. #RevannaSiddeshwara #Kalaburagi Our website: https://Vijaykarnataka.com Facebook:   / vijaykarnataka   Twitter:   / vijaykarnataka