ವೀರಮಣಿ ❌ಹನುಮಂತ 👌😁 |ಥಂಡಿಮನೆ ವೀರಮಣಿ |ಕೊಂಡದಕುಳಿ ಹನುಮಂತ |ಎಲ್ಲೋ ಗೋಲೆ ತಪ್ಪಿದ ಮಂಗ ಇದು 👌
GURUPRASANNA BHAT (GP)
0:00 / 0:00
ವೀರಮಣಿ ❌ಹನುಮಂತ 👌😁 |ಥಂಡಿಮನೆ ವೀರಮಣಿ |ಕೊಂಡದಕುಳಿ ಹನುಮಂತ |ಎಲ್ಲೋ ಗೋಲೆ ತಪ್ಪಿದ ಮಂಗ ಇದು 👌
6 906 просмотров · 1 дн. назад
GURUPRASANNA BHAT (GP)
3,33 тыс. подписчиков
6 906 просмотров · 1 дн. назад
ಥಂಡಿಮನೆ ಶೈಲಿ ಕೊಟ್ಟ ಶ್ರೀಪಾದ ಭಟ್ಟರು
ಯಕ್ಷಗಾನದ ಸಮಕಾಲೀನ ಮೇರು ಕಲಾವಿದರ ಸಾಲಿನಲಿದ್ದವರು ಥಂಡಿಮನೆ ಶ್ರೀಪಾದ ಭಟ್. ಕಥಾನಾಯಕ, ಪ್ರತಿನಾಯಕ ಎರಡೂ ಬಗೆಯ ಪಾತ್ರಗಳಲ್ಲಿ ಹೆಸರು ಮಾಡಿದವರು. ಖಳ ಪಾತ್ರಗಳಲ್ಲಿ ಮಾತ್ರವಲ್ಲದೇ ಸಾತ್ವಿಕ ಪಾತ್ರಗಳಲ್ಲೂ ಸ್ವಂತಿಕೆ ಸ್ಥಾಪಿಸಿಕೊಂಡವರು.ತಮ್ಮ ನಿಲುವು, ಅಪೂರ್ವವಾದ ಯಕ್ಷಗಾನೀಯ ಕಂಠ ಮಾಧುರ್ಯ, ಶ್ರುತಿಬದ್ಧತೆ, ಪ್ರತ್ಯುತ್ಪನ್ನಮತಿತ್ವ ಇವುಗಳಿಂದ ಸ್ವಂತಿಕೆ ಸ್ಥಾಪಿಸಿಕೊಂಡರು. 42 ವರ್ಷಗಳಿಂದ ಯಕ್ಷಗಾನ ವಲಯದಲ್ಲಿ ಮನೆಮಾತಾಗಿರುವ ಅವರು ಜೀವನ ರಂಗದಿಂದ ಅ.15 ರ ಗುರುವಾರ ಭೌತಿಕವಾಗಿ ನಿರ್ಗಮಿಸಿದ್ದಾರೆ.
ಸುಂದರವಾದ ದೇಹಭಾಷೆ, ಗತ್ತು, ಗಾಂಭೀರ್ಯ, ಹದವಾದ ಭಾವಾಭಿನಯ, ಸ್ಪಷ್ಟ ಮಾತುಗಾರಿಕೆಯಿಂದ ಯಕ್ಷಗಾನದಲ್ಲಿ ತಮ್ಮದೇ ಮುದ್ರೆಯೊತ್ತಿದ್ದ ಬಡಗುತಿಟ್ಟಿನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ. ಕಂಸ, ಯಮ, ಹಿರಣ್ಯಕಶ್ಯಪು, ಮಾಗದ, ಕೌರವ, ಭೀಮ, ವಾಲಿ, ವಲಲ, ದುಷ್ಟಬುದ್ಧಿ, ರಕ್ತಜಂಘ ಮೊದಲಾದ ಖಳ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡವರು ಮಾತ್ರವಲ್ಲ, ಸಾತ್ವಿಕ ಪಾತ್ರಗಳಿಗೂ ಅವರು ಪ್ರಸಿದ್ಧ. ಅವರು ಪಾತ್ರವೇ ಆಗಿಬಿಡುವ ದಶರಥ, ಭೀಷ್ಮ, ಅತಿಕಾಯ, ರಾಮ, ಯಯಾತಿ, ಹನುಮಂತ, ಅರ್ಜುನ, ಕರ್ಣ, ವಿಭೀಷಣನಂಥ ಪಾತ್ರಗಳೂ ಅವರಿಗೆ ಹೆಸರು ತಂದುಕೊಟ್ಟಿವೆ.
ಶ್ರೀಪಾದ ಭಟ್ಟರು ಜನಿಸಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೋಳಿಗಾರಲ್ಲಿ. ತಿಮ್ಮಣ್ಣ ಭಟ್ ಮತ್ತು ಗಿರಿಜಮ್ಮ ತಂದೆ-ತಾಯಿ. ತಂದೆ ಸ್ವತಃ ಕಲಾವಿದರು. ಹೀಗಾಗಿ ಶ್ರೀಪಾದ ಭಟ್ಟರಿಗೆ ಯಕ್ಷಗಾನ ತಂದೆಯಿಂದ ಬಂದ ಬಳವಳಿ. ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ತಾಳ, ಲಯ, ಹೆಜ್ಜೆ ಕಲಿತ ಶ್ರೀಪಾದ ಭಟ್ಟರು ಕೋಳಿಗಾರ ಸಹ್ಯಾದ್ರಿ ಸೋಂದಾ ಹವ್ಯಾಸಿ ಮೇಳದ ಕಲಾವಿದನಾಗಿ ಗೆಜ್ಜೆ ಕಟ್ಟಿದರು. 1984ರಲ್ಲಿ ಪಂಚಲಿಂಗೇಶ್ವರ ಮೇಳದಿಂದ ಅವರ ವೃತ್ತಿಜೀವನ ಆರಂಭವಾಯಿತು. ಯಕ್ಷರಂಗದ ಪ್ರಸಿದ್ಧರಾದ ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಚಿಟ್ಟಾಣಿ, ಗೋಡೆ, ಕೊಳಗಿ ಅನಂತ ಹೆಗಡೆ, ಯಾಜಿ, ಕೊಂಡದಕುಳಿ, ನಾವುಡ, ಧಾರೇಶ್ವರ ಮುಂತಾದವರ ಮಾರ್ಗದರ್ಶನ ಅವರಿಗೆ ದೊರೆಯಿತು.
ಕಾರ್ತವೀರ್ಯ, ಜಮದಗ್ನಿ, ಭೀಷ್ಮ, ವಾಲಿ, ಪರಶುರಾಮ ಮುಂತಾದ ಪಾತ್ರಗಳಿಗೆ ತಮ್ಮದೇ ಆದ ಹೊಸತನ ತುಂಬಿದವರು. ಅವರ ಪಾತ್ರ ನಿರ್ವಹಣೆಯನ್ನು ‘ಥಂಡಿಮನೆ ಶೈಲಿ’ಎಂದೂ ಕರೆಯಬಹುದು. ಮಾರಿಕಾಂಬಾ ಮೇಳ, ಸಾಲಿಗ್ರಾಮ ಮೇಳ, ಮಂದರ್ತಿ, ಪೆರ್ಡೂರು ಮೇಳಗಳಲ್ಲಿ ದುಡಿದ ಅವರು ಅಭಿನಯಿಸಿದ ಹಳೆಯ ಪೌರಾಣಿಕ ಪಾತ್ರಗಳಷ್ಟೇ ಅಲ್ಲ, ಆಧುನಿಕ ಕಾಲದ ‘ರಂಗನಾಯಕಿ’ ಪ್ರಸಂಗದ ಬೈರಾನ್ ಖಾನ್ ಪಾತ್ರ ಕೂಡ ತುಂಬ ಜನಪ್ರಿಯವಾಗಿದೆ.
ಹಲವಾರು ಸನ್ಮಾನ, ಗೌರವಗಳಿಗೆ ಭಾಜನರಾಗಿರುವ ಥಂಡಿಮನೆ ಶ್ರೀಪಾದ ಭಟ್ಟರು ಇನ್ನಷ್ಟು ಕಾಲ ಇರಬೇಕಿತ್ತು ಎಂಬ ನೋವನ್ನು ಉಳಿಸಿಯೇ ನಡೆದುಬಿಟ್ಟರು. ಅವರಿಗಿದೋ ಅಂತಿಮ ನಮನ.
#yakshagana #yakshaganavideos #yakshaganabadagutittu #yakshaganartist #ಯಕ್ಷಗಾನ #ಥಂಡಿಮನೆ #thandi