Перейти к содержимому

ನಮ್ಮ ಊರಿನಲ್ಲಿ ಇದೇ ಪುರಾತನ ನಿಗೂಡ ಕಲ್ಲು, ಕನಸಿನಲ್ಲಿ ಬಂದು ವಿಡಿಯೋ ಮಾಡುಅಂತ ಪ್ರೇರೇಪಿಸಿತು.

Grameena Baduku

0:00 / 0:00

ನಮ್ಮ ಊರಿನಲ್ಲಿ ಇದೇ ಪುರಾತನ ನಿಗೂಡ ಕಲ್ಲು, ಕನಸಿನಲ್ಲಿ ಬಂದು ವಿಡಿಯೋ ಮಾಡುಅಂತ ಪ್ರೇರೇಪಿಸಿತು.

97 просмотров · 2 дня назад
Grameena Baduku
476 подписчиков
97 просмотров · 2 дня назад
ನನ್ನ ಪ್ರೀತಿಯ ಸ್ನೇಹಿತರೇ ಈ ವೀಡಿಯೋ ಮಾಡಿದ ಉದ್ದೇಶ ವೇನೆಂದರೆ, ಒಂದು ದಿನ ನಾನು ಮಲಗಿರುವಾಗ ನನ್ನ ಕನಸಿನಲ್ಲಿ ಈ ಕಲ್ಲು ಕಂಡಿತು ಈ ಕಲ್ಲಿನ ಬಳಿ ವೀಡಿಯೋ ಮಾಡುತ್ತಿರುವಂತೆ ನನಗೆ ಕನಸಿನಲ್ಲಿ ಸೂಚಿಸಿತು,ಆದ್ದರಿಂದ ನಾನು ಬೆಳಿಗ್ಗೆ ಎದ್ದಿದ ತಕ್ಷಣ , ನಾನು ಆ ಜಾಗದ ಕಡೆ ಆ ಜಾಗದಲ್ಲಿರುವ ಕಲ್ಲನ್ನು ಹುಡುಕಿಕೊಂಡು ಆ ಜಾಗದ ಕಡೆ ಒರಟೆ.ನಾನು ಹೋಗಿ ಕನಸಿನಲ್ಲಿ ಬಂದಂತ ಜಾಗದಲ್ಲಿ ನಿಂತು ನೋಡಿದೆ ಸ್ವಲ್ಪವತ್ತು ಯಾವುದೇ ಕಲ್ಲು ಕಾಣಲಿಲ್ಲ ಇಡೀ ಜಾಗದಲ್ಲೇಲ್ಲ ಬೇಲಿಗಳು ಪದೆಗಳು ಬೆಳೆದು ನಿಂತಿದ್ದವು ಏನೋ ಸುಮ್ಮನೆ ಕನಸು ಬಂದಿರುಬೇಕು ಎಂದುಕೊಂಡೆ ನಂತರ ಸ್ವಲ್ಪವತ್ತು ಅಲ್ಲೇ ನಿಂತುಕೊಂಡು ತುಂಬ ಸೂಕ್ಷ್ಮವಾಗಿ ನಿಂತು ನೋಡಿದಾಗ ಒಂದು ತುಂಬ ಬೇಲಿಗಳು ಪದೆಗಳು ಬೆಳೆದುಕೊಂಡ ಜಾಗದಲ್ಲಿ ನನಗೆ ಒಂದು ದೂರದಿಂದ ಒಂದು ಕಲ್ಲು ಕಂಡಿತು.ತದನಂತರ ನಾನು ಆ ಕಲ್ಲಿನ ಬಳಿಗೆ ಕಲ್ಲಿನ ಅತ್ತಿರ ಹೋಗಿ ನೋಡಿದೆ ನೋಡಿದ ತಕ್ಷಣ ನನಗೂ ಸ್ವಲ್ಪ ಆಶ್ಚರ್ಯವಾಗಿತ್ತು ಏಕೆಂದರೆ ಅದರಲ್ಲಿ ಆ ಕಲ್ಲಿನ ಮೇಲೆ ಕೆಲವೊಂದು ಕೆತ್ತನೆಗಳು ಕಂಡವು. ಒಂದು ಶಿವಲಿಂಗದ ರೀತಿ ಕೆತ್ತನೆ, ಮತ್ತೆ ಆಂಜನೇಯನ ರೀತಿ ಕೆತ್ತನೆಗಳು, ಹಾಗೂ ಅದರಲ್ಲಿ ಯಾವುದೋ ಭಾಷೆಯ ಬರಹಗಳು ಕೂಡ ಇದ್ದವು. ಮತ್ತೆ ಆ ಕಲ್ಲಿನ ಕೆಳಗೆ ಯುದ್ಧ ಮಾಡಿದ ರೀತಿ ಸೈನಿಕರು ಯುದ್ಧ ಮಾಡಿ ಸಾಯುತ್ತಿರುವ ರೀತಿ ಯುದ್ಧದ ಸನ್ನಿವೇಶನನ್ನ ಕಣ್ಣಿಗೆ ಕಂಡಿತು,ಇದನ್ನೆಲ್ಲ ಗಮನಿಸಿದ ನಾನುನಾನು ಇದರ ಬಗೆ ತಿಳಿದುಕೊಳ್ಳಲು ಅಲ್ಲೇ ಇದ್ದಂತಹ ನಮ್ಮ ಊರಿನ ಜನರ ಬಳಿ ವಿಚಾರಿಸಲು ಪ್ರಯತ್ನ ಮುಂದುವರಿಸಿದೆ.ಇದರ ಬಗ್ಗೆ ಕೆಲವು ನಮ್ಮ ಊರಿನ ಹಿರಿಯರ ಬಳಿ ವಿಚಾರಿಸೆಲ ಪ್ರಯತ್ನ ಮಾಡಿದಾಗ ಅವರಿಗೆ ತಿಳಿದಂಥ ವಿಚಾರಗಳನ್ನು ನನ್ನ ಬಳಿ ಹೇಳಲು ಪ್ರಯತ್ನಿಸಿದರು, ಒಬ್ಬರ ಹೇಳಿಕೆಯೂ ವಿಭಿನ್ನವಾಗಿತ್ತು.ಕೆಲವರು ಇದನ್ನು ಚೋಳರ ಕಾಲದ ಕಲ್ಲು ಎಂದು ಹೇಳಿದರು,ಇನ್ನೂ ಕೆಲವರು ವೀರಗಲ್ಲು ಎಂದು ಹೇಳಿದರು,ಇನ್ನೂ ಕೆಲವರು ಇದು ಪಾಂಡವರು ಕೌರವರ ಕಾಲದ್ದು ಎಂದು ಹೇಳಿದರು,ಕೆಲವರಂತೂ ಅದರ ಬಗ್ಗೆ ವಿಚಿತ್ರ ಕಥೆಗಳನ್ನು ಹೇಳಲು ಶುರು ಮಾಡಿದರು, ಇದನ್ನೆಲ್ಲ ಕೇಳಿಸಿಕೊಂಡ ನನಗೆ ಅನಿಸಿದ್ದು ಒಂದೇ ಈ ವಿಚಾರವನ್ನು ಈ ಕಲ್ಲಿನ ಬಗ್ಗೆ ಒಂದು ಯುಟ್ಯೂಬ್ನಲ್ಲಿ ವೀಡಿಯೋ ಮಾಡಿ ಅದನ್ನು ಜನರಿಗೆ ತಲುಪಿಸಿ ಹಾಗೂ ಅದರಿಂದ ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ತಲುಪಿಸಿ ಇದರ ಬಗ್ಗೆ ಇದರ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕೆಂದು ಕುತೂಹಲ ಸುಷ್ಠಿಯಾಯಿತು,ಆದದ್ದರಿಂದ ನಾನು ಈ ವಿಡಿಯೋವನ್ನು ಮಾಡಿದ್ದೇನೆ,ನನ್ನ ಮನವಿ ಏನೆಂದರೆ, ಇದು ಐತಿಹಾಸಿಕ ಕಲ್ಲು. ಆದ್ದರಿಂದ ಇದರ ಬಗ್ಗೆ ತುಂಬ ಇತಿಹಾಸವಿದೆ. ಇದನ್ನು ಇದರಲ್ಲಿರುವ ಬಾರಾಹಗಳು, ಇದರಲ್ಲಿರುವ ಕೆತ್ತನೆಗಳು ಇತಿಹಾಸವನ್ನು ಹೇಳುತ್ತಿವೆ. ಆದ್ದರಿಂದ ಇದು ಒಂದು ಪಾಳುಬಿದ್ದ ಜಾಗದಲ್ಲಿ ಇರುವುದರಿಂದ ಇದರ ಬಗ್ಗೆ ಸಂಬಂಧಪಟ್ಟ ಸರ್ಕಾರ ಹಾಗೂ ಪುರಾತತ್ವ ಇಲಾಖೆ ಗಮನ ಹರಿಸಿ, ಇದು ಏನೆಂದು ತಿಳಿದು ಆ ಜಾಗವನ್ನು ಸಂರಕ್ಷಿಸಬೇಕೋ ಹಾಗೂ ಆ ಜಾಗದ ಸುತ್ತಮುತ್ತಲಿನ ಜಾಗ ಮುಂದಿನ ದಿನಗಳಲ್ಲಿ ಇಂಡಸ್ಟ್ರಿಯಲ್ ಏರಿಯಾಕೆ ಹೋಗುವುದರಿಂದ ಈ ಪುರಾತನ ಕಲ್ಲು, ಐತಿಹಾಸಿಕ ಕಲ್ಲು ಹಾಳಾಗಿ ಹೋಗುವ ಸಾಧ್ಯತೆ ಇರುತ್ತದೆ. ಆಗಾಗಿ ಇದನ್ನು ಗುರುತಿಸಿ ಈ ಸ್ಥಳವನ್ನು ಗುರುತಿಸಿ ಇದರ ಒಂದು ಇತಿಹಾಸವನ್ನು ಅನ್ವೇಷಿಸಿ ಇದರ ಸುತ್ತಮುತ್ತ ಒಂದು ಬದ್ರತೆಯನ್ನು ಮಾಡಿ ಇದಕ್ಕೆ ಒಂದು ಬದ್ರತೆಯನ್ನು ಕೊಡಲು ಮನವಿ ಮಾಡುತ್ತೇನೆ ಮತ್ತು ಇದರ ಸಂಬಂಧಪಟ್ಟ ಇತಿಹಾಸವನ್ನು ಒಂದು ದೊಡ್ಡ ಬೋರ್ಡಿನಲ್ಲಿ ಹಾಕಿ ಜನರಿಗೆ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.ಆದ್ದರಿಂದ ಈ ವೀಡಿಯೋ ನೋಡಿದ ಪ್ರತಿಯೊಬ್ಬರೂ ಇದನ್ನು ಶೇರ್ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಧನ್ಯವಾದಗಳು.(ಇದರಲ್ಲಿ ನಾವು ಮಾತಾಡಿರುವ ಸಂಬಾಷಣೆಗಳು ನಿಮಗೆ ಬೇರೆ ಅರ್ಥವನ್ನು ಕಲ್ಪಿಸಬಹುದು ಹಾಗೂ ಅಲ್ಲಿ ಮಾತನಾಡುತ್ತಿರುವ ವಿಚಾರಗಳು ನಿಮಗೆ ಬೇರೆ ರೀತಿ ಕೇಳಿಸಬಹುದು ಅದು ಅಲ್ಲಿನ ವಾತಾವರಣದ ಸಂಬಂಧ ಅದು ಸ್ವಲ್ಪ ಬೇರೆ ರೀತಿಯೇ ಕೇಳಿಸರಬಹುದು ನಿಮಗೆ ಏನಾದರೂ ತಪ್ಪಾಗಿ ಕೇಳಿಸಿದ್ದರೆ ನಾವು ವಿಶಾದಿಸುತ್ತೇವೆ ).