Перейти к содержимому

ಲವ್ ಮೆಮೊರಿಸ್ ಗೀತೆಯ ಬಿಡುಗಡೆ ಸಮಾರಂಭ | BY UTTARA KARNATAKA COMMERCIAL FILM CHAMBER® | SALAGA EDITZ

VINAYAK DODAMANI | SALAGA

0:00 / 0:00

ಲವ್ ಮೆಮೊರಿಸ್ ಗೀತೆಯ ಬಿಡುಗಡೆ ಸಮಾರಂಭ | BY UTTARA KARNATAKA COMMERCIAL FILM CHAMBER® | SALAGA EDITZ

77 просмотров · 7 часов назад
VINAYAK DODAMANI | SALAGA
2,04 тыс. подписчиков
77 просмотров · 7 часов назад
ಪ್ರೇಮವಿರಹದ ಭಾವನೆಗಳಿಗೆ ಕಾವ್ಯರೂಪ ನೀಡಿದ ‘ಲವ್ ಮೆಮೊರಿಸ್ ಸಿಕಂದರ ಮಹಾತ ಸಾಹಿತ್ಯ, ನಿರ್ದೇಶನ ಹಾಗೂ ಛಾಯಾಗ್ರಹಣ ರಾಮದುರ್ಗ: ಪ್ರೀತಿ, ವಿರಹ, ಹೃದಯವೇದನೆ ಹಾಗೂ ಮುರಿದುಬಿದ್ದ ಪ್ರೇಮದ ನೋವನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಸುವ ಕನ್ನಡದ ಸಂಗೀತ ವಿಡಿಯೊ ‘ಲವ್ ಮೆಮೊರಿಸ್’ ಗಮನ ಸೆಳೆಯುತ್ತಿದೆ. ಸಿಕಂದರ ಮಹಾತ ಅವರ ಸಾಹಿತ್ಯ, ನಿರ್ದೇಶನ ಹಾಗೂ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಚಿನ್ ದೊಡಮನಿ ಧ್ವನಿಯಾಗಿದ್ದಾರೆ. ಅಬ್ದುಲ್ ಬಾಗಲಕೋಟೆ ಮತ್ತು ಗೀತಾ ಧಾರವಾಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿನಾಯಕ ದೊಡಮನಿ ಅವರು ಈ ಹಾಡಿಗೆ ಸಂಕಲನ ಮಾಡಿದ್ದಾರೆ. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ® ಇವರ ಸಹಯೋಗದಲ್ಲಿ ಹಾಡು ಮೂಡಿಬಂದಿದೆ. ಪ್ರೀತಿಯ ಮಧುರ ಕ್ಷಣಗಳಿಂದ ಆರಂಭವಾಗಿ, ಸಂಬಂಧದಲ್ಲಿ ಎದುರಾಗುವ ನೋವು, ನಿರಾಸೆ ಹಾಗೂ ಅಗಲಿಕೆಯ ವೇದನೆಯವರೆಗಿನ ಭಾವನೆಗಳನ್ನು ಹಾಡು ತೆರೆದಿಡುತ್ತದೆ. ಸೂರ್ಯ ಮತ್ತು ಭೂಮಿಯ ರೂಪಕ, ಜೇಡರ ಬಲೆಗೆ ಸಿಲುಕಿದ ಕೀಟದ ಹೋಲಿಕೆ ಸೇರಿದಂತೆ ಕಾವ್ಯಾತ್ಮಕ ಅಭಿವ್ಯಕ್ತಿಗಳ ಮೂಲಕ ಪ್ರೇಮಿಗಳ ಅಂತರಂಗದ ತೊಳಲಾಟವನ್ನು ಚಿತ್ರಿಸಲಾಗಿದೆ. ಪ್ರೀತಿಯೇ ಬದುಕಿಗೆ ಬೆಳಕಾಗಿದ್ದರೂ, ಅದೇ ಪ್ರೀತಿ ಮುರಿದುಬಿದ್ದಾಗ ಆವರಿಸುವ ಕತ್ತಲೆ, ಪಶ್ಚಾತ್ತಾಪ ಮತ್ತು ಹೃದಯದ ನೋವನ್ನು ಸಾಹಿತ್ಯ ಮನಮುಟ್ಟುವಂತೆ ಕಟ್ಟಿಕೊಟ್ಟಿದೆ. ಗಾಯನ, ಸಾಹಿತ್ಯ ಹಾಗೂ ದೃಶ್ಯಗಳ ಸಂಯೋಜನೆಯ ಮೂಲಕ ವಿಫಲ ಪ್ರೇಮಕಥೆಯ ಭಾವನಾತ್ಮಕ ಚಿತ್ರಣವನ್ನು ನೀಡುವ ಪ್ರಯತ್ನವನ್ನು ಈ ಹಾಡು ಮಾಡಿದೆ. *ಸ್ಥಳೀಯ ಕಲಾವಿದರ ಸೃಜನಶೀಲ ಪ್ರಯತ್ನಕ್ಕೆ ಪ್ರೋತ್ಸಾಹ ಅಗತ್ಯ*: ಕನ್ನಡದ ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಸೃಜನಶೀಲ ಪ್ರಯತ್ನಗಳ ಮೂಲಕ ಗುರುತಿಸಿಕೊಳ್ಳಲು ಮುಂದಾಗಿರುವ ಸಿಕಂದರ ಮಹಾತ ಹಾಗೂ ತಂಡ ದ ಕಾರ್ಯಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕಿದೆ. ಸ್ಥಳೀಯ ಪ್ರತಿಭೆಗಳಿಗೆ ಬೆಂಬಲ ನೀಡುವ ಮೂಲಕ ಕನ್ನಡ ಕಲಾಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕೆಂಬ ಆಶಯವನ್ನು ಈ ಪ್ರಯತ್ನ ಮೂಡಿಸುತ್ತದೆ. *ವಿನಾಯಕ ದೊಡಮನಿ | ಸಲಗ*🐘🚩 #lovememories #love #salagaeditz #dharwad #ವಿನಾಯಕ