ಶಿಗ್ಲಿ ಎಸ್.ಎಸ್. ಕೊಡ್ಲಮಠ ಪ್ರೌಢಶಾಲೆಯಲ್ಲಿ ಅದ್ದೂರಿ ಗಣಪತಿ ಪ್ರತಿಷ್ಠಾಪನೆ
NEWS 83 KARNATAKA
0:00 / 0:00
ಶಿಗ್ಲಿ ಎಸ್.ಎಸ್. ಕೊಡ್ಲಮಠ ಪ್ರೌಢಶಾಲೆಯಲ್ಲಿ ಅದ್ದೂರಿ ಗಣಪತಿ ಪ್ರತಿಷ್ಠಾಪನೆ
1 155 просмотров · 9 дней назад
NEWS 83 KARNATAKA
80 подписчиков
1 155 просмотров · 9 дней назад
ಶಿಗ್ಲಿ ಎಸ್.ಎಸ್. ಕೊಡ್ಲಮಠ ಪ್ರೌಢಶಾಲೆಯಲ್ಲಿ ಅದ್ದೂರಿ ಗಣಪತಿ ಪ್ರತಿಷ್ಠಾಪನೆ
ನೃತ್ಯದ ಮೂಲಕ ವಿಘ್ನವಿನಾಯಕನಿಗೆ ಶಾಲಾ ಮಕ್ಕಳಿಂದ ಭವ್ಯ ಸ್ವಾಗತ
ಲಕ್ಷ್ಮೇಶ್ವರ ತಾಲೂಕು ಶಿಗ್ಲಿ ಗ್ರಾಮದ ಎಸ್.ಎಸ್. ಕೊಡ್ಲಮಠ ಪ್ರೌಢಶಾಲೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಗಣಪತಿ ಮೂರ್ತಿಯನ್ನು ಶಾಲಾ ಆವರಣಕ್ಕೆ ಭಕ್ತಿಭಾವದಿಂದ ಬರಮಾಡಿಕೊಂಡ ಸಂದರ್ಭದಲ್ಲಿ ಶಾಲಾ ಮಕ್ಕಳು ಮನಮೋಹಕ ನೃತ್ಯ ಪ್ರದರ್ಶನದ ಮೂಲಕ ವಿಘ್ನವಿನಾಯಕನಿಗೆ ಭವ್ಯ ಸ್ವಾಗತ ಕೋರಿದರು. ಮಕ್ಕಳ ನೃತ್ಯ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಣಪತಿ ಪೂಜೆಯಲ್ಲಿ ಭಾಗವಹಿಸಿ, ವಿಘ್ನವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮವು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ನಡೆಯಿತು.