Перейти к содержимому

ಚಳ್ಳಕೆರೆ ಗೋಪನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ! 6 ತಿಂಗಳಿಂದ ಸಮಸ್ಯೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

janadhwani news

0:00 / 0:00

ಚಳ್ಳಕೆರೆ ಗೋಪನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ! 6 ತಿಂಗಳಿಂದ ಸಮಸ್ಯೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

270 просмотров · 20 часов назад
janadhwani news
6,18 тыс. подписчиков
270 просмотров · 20 часов назад
ಚಳ್ಳಕೆರೆ | ಕುಡಿಯುವ ನೀರಿಗಾಗಿ ಜನರ ಪರದಾಟ… ಅಧಿಕಾರಿಗಳ ಮೌನಕ್ಕೆ ನಿವಾಸಿಗಳ ಆಕ್ರೋಶ! ಒಂದೆಡೆ ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುತ್ತಿದ್ದಾರೆ… ಮತ್ತೊಂದೆಡೆ ಕುಡಿಯುವ ನೀರು ರಸ್ತೆಯ ಮೇಲೆ ಹರಿದು ವ್ಯರ್ಥವಾಗುತ್ತಿದೆ! ಇದು ಯಾವ ನ್ಯಾಯ? ಜನರಿಗೆ ಕುಡಿಯಲು ನೀರಿಲ್ಲ… ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳಿಗೆ ಮಾತ್ರ ಕಾಳಜಿಯೇ ಇಲ್ಲವೇ? ಹೌದು! ಇಂತಹ ಗಂಭೀರ ಪರಿಸ್ಥಿತಿ ಕಂಡುಬಂದಿರುವುದು ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ರಂಗಪ್ಪ ಬಡಾವಣೆಯ ಉಪ್ಪಾರ ಬೀದಿಯಲ್ಲಿ! ಕಳೆದ ಐದಾರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬ ಆರೋಪ ಕೇಳಿಬಂದಿದೆ. ಗ್ರಾಮದ ಇತರ ಪ್ರದೇಶಗಳಿಗೆ ನೀರು ಸರಬರಾಜಾಗುತ್ತಿದ್ದರೂ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ ಹಾಗೂ ಉಪ್ಪಾರ ಬೀದಿಯ ಜನರು ಮಾತ್ರ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವಿಪರ್ಯಾಸ ಏನೆಂದರೆ, ಇಡೀ ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ತಮ್ಮ ಜಮೀನಿನಲ್ಲಿದ್ದರೂ, ತಮ್ಮ ಮನೆಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ನಿವಾಸಿ ಅಭಿಷೇಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ! ಜುಲೈ ತಿಂಗಳಲ್ಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದು, ಆಗಸ್ಟ್‌ನಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಪರಿಹಾರ ಸಿಕ್ಕಿಲ್ಲ ಎಂಬುದು ನಿವಾಸಿಗಳ ಆರೋಪ. ಇಷ್ಟೇ ಅಲ್ಲ! ನೀರು ಸರಬರಾಜಾಗುತ್ತಿದ್ದ ಪೈಪ್‌ಗೆ ಕಲ್ಲು ಹೊಡೆದು ಮುಚ್ಚಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರಿಗೆ ನೀರು ಪೂರೈಸುವ ವ್ಯವಸ್ಥೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಇನ್ನು ಉಪ್ಪಾರ ಬೀದಿಯ ಸಮಸ್ಯೆ ಕುಡಿಯುವ ನೀರಿಗೆ ಮಾತ್ರ ಸೀಮಿತವಾಗಿಲ್ಲ! ಸಮರ್ಪಕ ರಸ್ತೆ ಇಲ್ಲ… ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ… ಮೂಲಸೌಕರ್ಯಗಳ ಕೊರತೆಯಿಂದ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ. ಇನ್ನೊಂದೆಡೆ, ಬೀದಿಯಲ್ಲಿ ನಿರ್ಮಿಸಲಾದ ಚರಂಡಿಯ ಡಕ್ ಕಾಮಗಾರಿ ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿದಿದೆ ಎಂಬ ಮೈಲಾರಪ್ಪ ಅವರ ಆರೋಪ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡು ಇಂಚಿನ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿ… ಸುಸಜ್ಜಿತ ಚರಂಡಿ ನಿರ್ಮಿಸಿ… ಸಿಸಿ ರಸ್ತೆ ಕಲ್ಪಿಸಿ… ಇದು ಉಪ್ಪಾರ ಬೀದಿಯ ನಿವಾಸಿಗಳ ಪ್ರಮುಖ ಆಗ್ರಹವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದಿದ್ದರೆ ಜನರು ಯಾರ ಬಳಿ ಹೋಗಬೇಕು? ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು? ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸ್ಥಳ ಪರಿಶೀಲನೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸಬೇಕಿದೆ. ಜೊತೆಗೆ ರಸ್ತೆ ಮತ್ತು ಚರಂಡಿ ಕಾಮಗಾರಿಗಳತ್ತವೂ ಗಮನಹರಿಸಬೇಕಿದೆ. ಜನರ ಸಮಸ್ಯೆ ಕೇಳುವುದು ಮಾತ್ರವಲ್ಲ… ಅದಕ್ಕೆ ಪರಿಹಾರ ಕಲ್ಪಿಸುವುದೂ ಅಧಿಕಾರಿಗಳ ಜವಾಬ್ದಾರಿ! ಗೋಪನಹಳ್ಳಿ ಗ್ರಾಮದ ಉಪ್ಪಾರ ಬೀದಿಯ ನಿವಾಸಿಗಳ ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಸ್ಪಂದಿಸುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ. ಸ್ಥಳೀಯ ಸಮಸ್ಯೆಗಳ ನೈಜ ವರದಿ, ಜನರ ಧ್ವನಿಗೆ ನ್ಯಾಯ ಒದಗಿಸುವ ಪ್ರಯತ್ನ… ನಿಮ್ಮ ಜನಧ್ವನಿ… ನಮ್ಮ ಜನಧ್ವನಿ… ಜನಧ್ವನಿ ನ್ಯೂಸ್!#JanadhwaniNews #ಜನಧ್ವನಿನ್ಯೂಸ್ #Gopanahalli #Challakere #Chitradurga #DrinkingWaterProblem #ಕುಡಿಯುವನೀರು #ನೀರಿನಸಮಸ್ಯೆ #ಗ್ರಾಮಪಂಚಾಯಿತಿ #ಉಪ್ಪಾರಬೀದಿ #KarnatakaNews #KannadaNews #LocalNews #BreakingNews #PublicIssues