NIRMAN 2026 | ITI COLLEGE Ground |BALLARI.
Avinash Ballari Rider
0:00 / 0:00
NIRMAN 2026 | ITI COLLEGE Ground |BALLARI.
536 просмотров · 3 дня назад
Avinash Ballari Rider
76,4 тыс. подписчиков
536 просмотров · 3 дня назад
ಒಂದೇ ವೇದಿಕೆ… ನಿರ್ಮಾಣದ ಸಂಪೂರ್ಣ ಪರಿಚಯ: ಜಿಲ್ಲಾಧಿಕಾರಿ ವಿ ನಾಗೇಂದ್ರ ಪ್ರಸಾದ್
ಬಳ್ಳಾರಿ.
“ಮನೆ ನಿರ್ಮಾಣವೆಂದರೆ ಕೇವಲ ನಾಲ್ಕು ಗೋಡೆಗಳಲ್ಲ… ಅದು ಒಂದು ಕುಟುಂಬದ ಕನಸು, ಭವಿಷ್ಯದ ಭದ್ರತೆ ಮತ್ತು ಬದುಕಿನ ಹೊಸ ಅಧ್ಯಾಯ.ಇಂತಹ ನಿರ್ಮಾಣ ಕ್ಷೇತ್ರದ ಹೊಸ ತಂತ್ರಜ್ಞಾನ, ಆಧುನಿಕ ಉತ್ಪನ್ನಗಳು ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ACCEA ‘ನಿರ್ಮಾಣ 2026 ಮನೆ ನಿರ್ಮಿಸುವವರಿಗೆ ಸದುಪಯೋಗ ಆಗಲಿದೆ ಅಂಥಾ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ಅವರು ಹೇಳಿದರು.
ಇಂದಿನಿಂದ ಮೂರು ದಿನಗಳ ಕಾಲ ನಗರದ ಐಟಿಐ ಮೈದಾನದಲ್ಲಿ ನಡೆಯುತ್ತೀರುವ ನಿರ್ಮಾಣ್ ೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನಸಿನ ಮನೆ ಕಟ್ಟುವ ಪ್ರತಿಯೊಬ್ಬರಿಗೂ ಹೊಸ ಮಾಹಿತಿ ಜೋತೆಗೆ ನಿರ್ಮಾಣ ಕ್ಷೇತ್ರದ ಪ್ರತಿಯೊಂದು ಉದ್ಯಮಿಗೂ ಹೊಸ ಅವಕಾಶಗಳು ಇಂತಹ ಕಾರ್ಯಕ್ರಮದ ಮೂಲಕ ದೊರೆಯಲಿದೆ ಅಂಥಾ ಹೇಳಿದರು.
ಇದೇ ವೇಳೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ ಎಸ್ ಸತ್ಯನಾರಾಯಣ ಅವರು ಮಾತನಾಡುತ್ತಾ ಬಳ್ಳಾರಿಯ ಜನರ ನಾಡಿಮಿಡಿತ ಅರಿತು ಈ ದಿನ ಅತ್ಯುತ್ತಮ ಸಾಮಗ್ರಿಗಳ ಎಕ್ಸ ಪೋ ಮಾಡುವ ಮೂಲಕ ಬಳ್ಳಾರಿ ಜನರಿಗೆ ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಒಂದೇ ವೇದಿಕೆಯನ್ನು ACCEA ಆಯೋಜನೆ ಮಾಡುವ ಮೂಲಕ ಒಂದೇ ಸೂರಿನಡಿ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲ ಸಾಮಗ್ರಿಗಳ ಪ್ರದರ್ಶನವನ್ನು ಆಯೋಜನೆ ಮಾಡಿದೆ.ಅಂಥಾ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮ್ಮೇರ್.ಛೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಅವ್ವಾರು ಮಂಜುನಾಥ. ಕ್ರೀಸ್ಮರ ಕಂಪನಿಯ ಅಧ್ಯಕ್ಷ ಡಾ.ರಮೇಶ ಗೋಪಾಲ್.ಎಸಿಸಿಇಎ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.ಕಾರ್ಯಕ್ರಮವನ್ನು ಶೀರಿಷಾ ನಿರೂಪಿಸಿದ್ರೇ ಜಗದೀಶ್ ಪ್ರಾರ್ಥಿಸಿದ್ರೂ.ರಾಕೇಶ್ ಬಿಟಿ ವಂದಿಸಿದರು.
#NIRMAN #ITICOLLEGEGround #ballari #bellary #2026 #ciment #bricks #marble #stones #windows #doors #iron #wood #elctrical #pvc #paint #avinash