ಗಸಗಸೆ ಪಾಯಸ (Gasagase Payasa)
ETV Bharat - Food - Kannada
0:00 / 0:00
ಗಸಗಸೆ ಪಾಯಸ (Gasagase Payasa)
1 166 974 просмотра · 9 лет назад
ETV Bharat - Food - Kannada
80,9 тыс. подписчиков
1 166 974 просмотра · 9 лет назад
ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿ ಎಂದರೆ ಪಾಯಸ. ಬಹಳಷ್ಟು ಸಾಮಗ್ರಿಗಳನ್ನು ಬಳಸಿ ಪಾಯಸ ಮಾಡಬಹುದು. ಆದರೆ ಅದರಲ್ಲಿ ಗಸಗಸೆ ಪಾಯಸ ವಿಶೇಷ ಎಂದೇ ಹೇಳಬಹುದು.
ಸಾಮಗ್ರಿಗಳು
ಗಸಗಸೆ - 1 ಕಪ್
ಕಾಯಿ - 1 ಕಪ್
ಒಣಕೊಬ್ಬರಿ - 1/2 ಕಪ್
ತುಪ್ಪ - 3/4 ಕಪ್
ಬೆಲ್ಲ - 1/2 ಕ ಪ್
ಏಲಕ್ಕಿ - 1/2 tsp.
ಬಾದಾಮಿ - ½ ಕಪ್
ದ್ರಾಕ್ಷಿ - ½ ಕಪ್
ಗೋಡಂಬಿ - ½ ಕಪ್
ತಯಾರಿಸುವ ವಿಧಾನ
ಮೊದಲಿಗೆ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಯನ್ನು ಗೋಲ್ಡನ್ ಬ್ರೌನ್ ಬರುವರೆಗೂ ಉರಿದುಕೊಂಡು ತೆಗೆದಿಡಿ.
ನಂತರ ಪ್ಯಾನ್ ಬಿಸಿ ಮಾಡಿ ಸಣ್ಣ ಉರಿಯಲ್ಲಿ ಗಸಗಸೆಯನ್ನು ಕೆಂಪಗೆ ಉರಿದುಕೊಂಡು ಸ್ವಲ್ಪ ನೀರು ಹಾಕಿ ತಣ್ಣಗಾಗಲು ಬಿಡಿ.
ಗಸಗಸೆ ತಣ್ಣಗಾದಾಗ ಅದರೊಂದಿಗೆ ಕಾಯಿತುರಿ , ಒಣಕೊಬ್ಬರಿ, ಬಾದಾಮಿ, 2 ಏಲಕ್ಕಿ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಪಾತ್ರೆಯನ್ನು ಸ್ಟೌ ಮೇಲೆ ಇಟ್ಟು 1 ಕಪ್ ನೀರು ಹಾಕಿ. ಅದಕ್ಕೆ ಬೆಲ್ಲ ಹಾಕಿ. ಬೆಲ್ಲ ಕರಗಿದ ನಂತರ ಆ ನೀರನ್ನು ಶೋಧಿಸಿಕೊಳ್ಳಿ.
ಬೆಲ್ಲದ ನೀರಿಗೆ ರುಬ್ಬಿದ ಗಸಗಸೆ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. 10 ನಿಮಿಷದ ನಂತರ ಅದಕ್ಕೆ ಫ್ರೈ ಮಾಡಿಕೊಂಡ ಗೋಡಂಬಿ, ದ್ರಾಕ್ಷಿ ಹಾಕಿ.
ಇದೀಗ ರುಚಿಯಾದ ಗಸಗಸೆ ಪಾಯಸ ರೆಡಿ. ಗಸಗಸೆ ಪಾಯಸ ಆರೋಗ್ಯಕ್ಕೆ ಒಳ್ಳೆಯದು. ಗಸಗಸೆ ನಿಮ್ಮ ದೇಹವನ್ನು ತಂಪಾಗಿಡುತ್ತದೆ.
Read Here: http://kannada.eenaduindia.com/Rainbo...
Subscribe Here: / @etvbharat-food-kannada1426
Follow Us On Facebook: / food.kannada.eenaduindia