ಸಾಲ ಮರುಪಾವತಿ,ಮರುಸಾಲ ನೀಡದಿದ್ದಕ್ಕೆ ರೈತರ ಆಕ್ರೋಶ: ಕುರುಬೂರು ಸಹಕಾರ ಸಂಘದ ಸಭೆಯಲ್ಲಿ ಗದ್ದಲ...!
A1tvnews chintamani
0:00 / 0:00
ಸಾಲ ಮರುಪಾವತಿ,ಮರುಸಾಲ ನೀಡದಿದ್ದಕ್ಕೆ ರೈತರ ಆಕ್ರೋಶ: ಕುರುಬೂರು ಸಹಕಾರ ಸಂಘದ ಸಭೆಯಲ್ಲಿ ಗದ್ದಲ...!
692 просмотра · 1 день назад
A1tvnews chintamani
11,4 тыс. подписчиков
692 просмотра · 1 день назад
ಸಾಲ ಮರುಪಾವತಿ,ಮರುಸಾಲ ನೀಡದಿದ್ದಕ್ಕೆ ರೈತರ ಆಕ್ರೋಶ: ಕುರುಬೂರು ಸಹಕಾರ ಸಂಘದ ಸಭೆಯಲ್ಲಿ ಗದ್ದಲ
ಸ್ತ್ರೀ ಶಕ್ತಿ ಸಂಘಗಳ 10 ಕೋಟಿ ರೂ. ಬಾಕಿ ಸಾಲ:ಕುರುಬೂರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಬಿಸಿಬಿಸಿ ಚರ್ಚೆ
ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಈ ಮಹಾಸಭೆಯಲ್ಲಿ ಸಂಘದ ಸಾಲ ಮರುಪಾವತಿ ಹಾಗೂ ಹಣಕಾಸಿನ ವಸೂಲಾತಿ ವಿಚಾರವಾಗಿ ರೈತರು ಹಾಗೂ ಆಡಳಿತ ಮಂಡಳಿಯ ನಡುವೆ ತೀವ್ರ ವಾಗ್ವಾದ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ರೈತ ಸದಸ್ಯರು,ಸಂಘದ ಮೂಲಕ ನೀಡಲಾದ ಸಾಲಗಳ ವಸೂಲಾತಿ ಪ್ರಕ್ರಿಯೆ ಮತ್ತು ಹಣದ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ತ್ರೀ ಶಕ್ತಿ ಸಂಘಗಳಿಂದ ಎಷ್ಟು ಸಾಲ ವಸೂಲಾತಿಯಾಗಿದೆ ಮತ್ತು ಇನ್ನೂ ಎಷ್ಟು ಬಾಕಿ ಇದೆ?"ಎಂದು ರೈತರು ಪ್ರಶ್ನಿಸಿದರು. ಇದಕ್ಕೆ ಸಂಘದ ಕಡೆಯಿಂದ "ಹಿಂದೆ ನೀಡಲಾಗಿದ್ದ 14 ಕೋಟಿ ರೂ.ಗಳಲ್ಲಿ ಸುಮಾರು 10 ಕೋಟಿ ರೂ.ಗಳಷ್ಟು ಬಾಕಿ ಇದೆ" ಎಂಬ ಮಾಹಿತಿ ಬಂದಾಗ,ರೈತರು"ವಸೂಲಿಯಾದ ಹಣವನ್ನು ಸರಿಯಾಗಿ ಮರುಪಾವತಿಸದೆ ರೈತರಿಗೆ ತೊಂದರೆ ನೀಡಲಾಗುತ್ತಿದೆ"ಎಂದು ಆಕ್ರೋಶ ವ್ಯಕ್ತಪಡಿಸಿದರು.
"ವರ್ಷ, ಒಂದೂವರೆ ವರ್ಷ ಅಥವಾ ಎರಡು ವರ್ಷಗಳಿಂದ ನಿಯಮಿತವಾಗಿ ಕಂತುಗಳನ್ನು ಕಟ್ಟುತ್ತಿರುವ ರೈತರಿಗೆ ಮರುಸಾಲ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ?ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ ಸಂಘದಿಂದ ನ್ಯಾಯ ಸಿಗುತ್ತಿಲ್ಲ" ಎಂದು ರೈತ ಸದಸ್ಯರು ಏರಿದ ಧ್ವನಿಯಲ್ಲಿ ಆಡಳಿತ ಮಂಡಳಿಯನ್ನು ತೊಳಲಿ ತುಳಿದರು.
ರೈತರ ಸಾಲು ಸಾಲು ಪ್ರಶ್ನೆಗಳು ಹಾಗೂ ಆಕ್ರೋಶಕ್ಕೆ ಸ್ಪಂದಿಸಿದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಲ ಮರುಪಾವತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳ ಬಗ್ಗೆ ವಿವರಣೆ ನೀಡಿದರು.
"ಬ್ಯಾಂಕ್‌ಗಳಿಂದ ಹಣ ಬಿಡುಗಡೆಯಾಗುವಲ್ಲಿ ಹಾಗೂ ಮರುಪಾವತಿ ಪ್ರಕ್ರಿಯೆಯಲ್ಲಿ ಕೆಲವೊಂದು ತೊಂದರೆಗಳು ಎದುರಾಗಿವೆ.ಇದರಿಂದಾಗಿ ಸಕಾಲದಲ್ಲಿ ಮರುಸಾಲ ನೀಡಲು ಸಾಧ್ಯವಾಗಿಲ್ಲ.ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.ಈ ತಿಂಗಳ 30ನೇ ತಾರೀಖಿನ ಒಳಗಾಗಿ ಸಾಲ ಮರುಪಾವತಿ ಹಾಗೂ ಹೊಸ ಸಾಲದ ಪ್ರಕ್ರಿಯೆಗಳನ್ನು ಕ್ಲಿಯರ್ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು"ಎಂದು ಅಧ್ಯಕ್ಷರಾದ ದೊಡ್ಡ ಬೊಮ್ಮನಹಳ್ಳಿ ವೆಂಕಟರೆಡ್ಡಿ ಎಂ ಸಭೆಗೆ ಭರವಸೆ ನೀಡಿ,ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಪ್ಪ ಕೆ ಎಂ, ಮಂಜುನಾಥ ಕೆ ಎಂ,ನಟರಾಜ್ ಕೆ ಎಂ,ಶಿವರೆಡ್ಡಿ ಎಂ, ಶ್ರೀನಿವಾಸ್ ಗೌಡ,ನೇತಾ ಗೌಡ,ವಿಶ್ವನಾಥ್ ರೆಡ್ಡಿ, ಮುನಿವೆಂಕಟಪ್ಪ,ಕೃಷ್ಣಪ್ಪ,ಚಂದ್ರಕಳ,ಗಂಗಮ್ಮ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮೂರ್ತಿ,ಸೇರಿದಂತೆ ಮತ್ತಿತರರು ಇದ್ದರು