ಕಣಿಪುರೇಶನ ಕೃಪೆಯೊಂದಿರಲು | ಸ್ವರ್ಣಾಲಂಕಾರ ಕವಚ ಮೆರವಣಿಗೆ 15.02.2024 @PrakritiSamskriti
PrakritiSamskriti
0:00 / 0:00
ಕಣಿಪುರೇಶನ ಕೃಪೆಯೊಂದಿರಲು | ಸ್ವರ್ಣಾಲಂಕಾರ ಕವಚ ಮೆರವಣಿಗೆ 15.02.2024 @PrakritiSamskriti
1 979 просмотров · 2 года назад
PrakritiSamskriti
1,57 тыс. подписчиков
1 979 просмотров · 2 года назад
ಕಣಿಪುರೇಶನ ಕೃಪೆಯೊಂದಿರಲು | ಕಣಿಪುರ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಸ್ವರ್ಣಾಲಂಕಾರ ಕವಚ ಮೆರವಣಿಗೆ 15.02.2024 @PrakritiSamskriti
ಕಣಿಪುರೇಶನ ಕೃಪೆಯೊಂದಿರಲು | ಸ್ವರ್ಣಾಲಂಕಾರ ಕವಚ ಶೋಭಾಯಾತ್ರೆ @PrakritiSamskriti
• ಕಣಿಪುರೇಶನ ಕೃಪೆಯೊಂದಿರಲು | ಸ್ವರ್ಣಾಲಂಕಾರ ಕವಚ ...
Kumble Gopalakrishna Temple Brahmakalasha 16-29 Feb 2024. Swarnalankara Kavacha Samarpana Procession
@PrakritiSamskriti
#kumble #kanipuresha #gopalakrishna #prakritisamskriti #shripriyau #ganeshakanathila
#kanyara #youtube #brahmakalasha #motoedge40 #moto #ashtabandha #naveekarana #yashoda
#yashomatimaiyakenandlal #shripriyau #shreeram #gajamukhane #kanipureshanakripeyondiralu #kite
Coverage by Ganesha Kanathila
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ೧೬-೨೪ ಫೆಬ್ರವರಿ ೨೦೨೪. ವಾರ್ಷಿಕ ಜಾತ್ರೆ ೨೫-೨೯ ಫೆಬ್ರವರಿ ೨೦೨೪
Kumble Shree Gopalakrishna Temple naveekarana Punahapratishta Ashtabandha Brahmakalashotsava 16-24 Feb 2024. Annual fest 25-29 Feb 2024
ಕೇರಳ - ಕರ್ನಾಟಕ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಅತೀ ಪುರಾತನ ಕ್ಷೇತ್ರ. ಇದರ ಇತಿಹಾಸ ತ್ರೇತಾಯುಗದಿಂದಲೇ ಆರಂಭವಾಗಿದೆ.
ಶ್ರೀರಾಮನ ವನವಾಸದ ಸಂದರ್ಭದಲ್ಲಿ, ಕಣ್ವಮಹರ್ಷಿಗಳು ಅವನ ದರ್ಶನಾರ್ಥಿಯಾಗಿ ಒಂದು ಕುಂಭದಲ್ಲಿ ಅವನ ಅಭಿಷೇಕಕ್ಕಾಗಿ ಜಲವನ್ನು ಕಾಯ್ದಿರಿಸಿ ತಪೋನಿರತರಾಗಿದ್ದರು. ಅವರು ಎಚ್ಚೆತ್ತಾಗ ತ್ರೇತಾಯುಗ ಮುಗಿದು ದ್ವಾಪರಯುಗ ಆರಂಭವಾಗಿತ್ತು. ಅರ್ಥಾತ್ ಶ್ರೀರಾಮನ ಅವತಾರ ಸಮಾಪ್ತಿಯಾಗಿ ಶ್ರೀಕೃಷ್ಣಾವತಾರ ಆರಂಭವಾಗಿತ್ತು. ತಮ್ಮ ಮನೋನೇತ್ರದಿಂದಲೇ ಇದನ್ನರಿತ ಮಹರ್ಷಿಗಳು ದ್ವಾರಕೆಗೆ ತೆರಳಿ ಶ್ರೀಕೃಷ್ಣನಲ್ಲಿ ತಮ್ಮ ಅಭೀಷ್ಟವನ್ನು ಅರುಹಿದರು. ಆಗ ಶ್ರೀಕೃಷ್ಣನು ತನ್ನ ವಿಗ್ರಹವೊಂದನ್ನು ಅವರ ಕೈಗಿತ್ತು ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ನಿರ್ದೇಶಿಸಿದನು. ಕೃಷ್ಣನೇ ಕಣ್ವರಿಗೆ ತಿಳಿಸಿದಂತೆ, ಆ ವಿಗ್ರಹವು ಸ್ವತಃ ಕೃಷ್ಣನೇ ತನ್ನ ನೆನಪಿಗಾಗಿ ಸಾಕುತಾಯಿ ಯಶೋದೆಗೆ ನೀಡಿದ ವಿಗ್ರಹವಾಗಿದ್ದು, ಅದರಲ್ಲಿ ಶ್ರೀಕೃಷ್ಣ ಸಾನ್ನಿಧ್ಯ ಸದಾ ಇರುವುದು.
ಕಣ್ವರು ಯೋಗ್ಯ ಸ್ಥಳದ ಅನ್ವೇಷಣೆಯಲ್ಲಿ ದಕ್ಷಿಣಕ್ಕೆ ಬರುತ್ತಿರಲು, ವಾಸುಕೀಕುಂಡವೆಂಬ ಈ ಪುಣ್ಯಸ್ಥಳವೇ ಸೂಕ್ತವೆಂದು ಮನಗಂಡು, ಇಲ್ಲಿಯೇ ಆ ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಕುಂಭಜಲದ ಅಭಿಷೇಕದಿಂದ ಕುಂಭಿನೀ ಹೊಳೆ ಹರಿದು, ಈ ಪುಣ್ಯಸ್ಥಳಕ್ಕೆ ಕುಂಬಳೆ ಎಂಬ ಹೆಸರು ಬಂತು. ಕಣ್ವಮಹರ್ಷಿಗಳು ಪ್ರತಿಷ್ಠಾಪಿಸಿದ ಕ್ಷೇತ್ರ ಕಣ್ವಪುರ -ಕಣಿಪುರ ಎಂದು ಪ್ರಸಿದ್ಧಿ ಹೊಂದಿತು.