Перейти к содержимому

Yagatipura Sri Mallikarjuna Ganga Udbhava Pavada | ಯಗಟಿ ಗಂಗೋದ್ಭವ‌ ಪವಾಡ | #Yagatipuramallikarjuna

SHIVA SANCHARI

0:00 / 0:00

Yagatipura Sri Mallikarjuna Ganga Udbhava Pavada | ಯಗಟಿ ಗಂಗೋದ್ಭವ‌ ಪವಾಡ | #Yagatipuramallikarjuna

12 205 просмотров · 4 года назад
SHIVA SANCHARI
5,3 тыс. подписчиков
12 205 просмотров · 4 года назад
#ಯಗಟಿಪುರದ_ಗಂಗೋದ್ಭವ_ಪವಾಡ: 🔱 ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಮಲ್ಲಿಕಾರ್ಜುನನ ಈ ಪವಾಡಕ್ಕೆ ಈ ವರ್ಷವೂ ಕೂಡ ಲಕ್ಷಾಂತರ ಜನರು ಪ್ರತ್ಯಕ್ಷ ಸಾಕ್ಷಿಯಾದರು, ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ನಡೆಯುವ ಜಾತ್ರಾ ಸಮಯದಲ್ಲಿ ಮಧ್ಯರಾತ್ರಿ ಈ ಚಕಿತ ನಡೆಯುತ್ತದೆ.. ಆ ಸಮಯಕ್ಕೆ ಸರಿಯಾಗಿ ತುಂಬೆ ಹೂಗಳಿಂದ ಮಲ್ಲಿಕಾರ್ಜುನನ‌ ಶಿವಲಿಂಗವನ್ನು ಮುಚ್ಚಲಾಗುತ್ತದೆ. ನಂತರ ಮಹಾಮಂಗಳಾರತಿ ಘಂಟಾನಾದದ ಜೊತೆಗೆ ಗುರುಜಂಗಮರಿಂದ ವೇದಮಂತ್ರ ಪಠಃಣೆ ನಡೆಯುತ್ತಿರುವ ಹೊತ್ತಿಗೆ, ಗಂಗೆ ಆವಿರ್ಭವಿಸಿ ಬಂದು ಅಲ್ಲಿದ್ದ ತುಂಬೆ ಹೂಗಳನ್ನು ಬದಿಗೆ ಸರಿಸಿ ಶಿವಲಿಂಗವನ್ನು ಮಜ್ಜನಗೊಳಿಸುತ್ತಾಳೆ, ಲಿಂಗದ ಸುತ್ತಲೂ ಜಲಾವೃತವಾಗುತ್ತದೆ. ಅಲ್ಲಿಗೆ ಗಂಗೋಧ್ಬವ ಖಾತರಿಯಾಗುತ್ತದೆ ಜನರಿಗೆ ಈ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತಾರೆ.. ವೇದಾವತಿ ನದಿ ತಟದ ಹೆಬ್ಬಂಡೆಯೊಂದರ ಮೇಲೆ ಉದ್ಭವ ಶಿವಲಿಂಗ ರೂಪದಲ್ಲಿ ಮಲ್ಲಿಕಾರ್ಜುನ ನೆಲೆಯಾಗಿದ್ದಾನೆ, ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಮಲ್ಲಪ್ಪನ ಪ್ರಚಂಡ ಶಕ್ತಿಯನ್ನು ಅರಿತ ಎರಡನೇ ವೀರಬಲ್ಲಾಳದೇವ ಒಂದು ಬೃಹತ್ ಶಿವಾಲಯ ನಿರ್ಮಿಸಿ ಕೃತಾರ್ಥನಾಗುತ್ತಾನೆ.. ಶ್ರೀಕ್ಷೇತ್ರ ಯಗಟಿಪುರ, ಕಡೂರು ತಾಲ್ಲೂಕು. ಚಿಕ್ಕಮಗಳೂರು ಜಿಲ್ಲೆ