ನಡಿರೆ ನಡಿರೆ ನೋಡುವ ಶ್ರೀಕೃಷ್ಣನ | ಮಹಿಪತಿದಾಸರು | Nadire nadire noduva | Mahipati | Bhajane | Dasara Pada
Bhajane - Dasara Hadugalu ಭಜನೆ - ದಾಸರ ಹಾಡುಗಳು
0:00 / 0:00
ನಡಿರೆ ನಡಿರೆ ನೋಡುವ ಶ್ರೀಕೃಷ್ಣನ | ಮಹಿಪತಿದಾಸರು | Nadire nadire noduva | Mahipati | Bhajane | Dasara Pada
17 990 просмотров · 6 лет назад
Bhajane - Dasara Hadugalu ಭಜನೆ - ದಾಸರ ಹಾಡುಗಳು
24,7 тыс. подписчиков
17 990 просмотров · 6 лет назад
https://dasarahadugalu.blogspot.com/2...
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
ಸಾಹಿತ್ಯ : ಶ್ರೀ ಮಹಿಪತಿ ದಾಸರು
Kruti: Sri Mahipati Dasaru
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ||ಪ||
ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ ಅಡಿಗಳಾಶ್ರಯ ಹಿಡಿವ ಮಂಡಲದೊಳು ||ಅ.ಪ.||
ತುಡುಗತನದಿ ಬಂದು ಕಡಿದ ಬೆಣ್ಣೆಯ ಮೆದ್ದು ಒಡನೆ ಗೋಪ್ಯೇರ ಕಾಡಿದ ನೋಡಮ್ಮ |
ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡೆಯದೆ ಧುಮುಕಿದ ಮಡುವಿನೊಳು ರಂಗ ||೧||
ಕ್ರೀಡಿಸಿ ಗೋಪ್ಯೇರ ಉಡುಗೆ ಸೆಳೆದುಕೊಂಡು ಒಡನೆ ಗಿಡವನೇರಿದ ನೋಡಮ್ಮ |
ಮಾಡಿದ ಮಣಿದ ಬಿಡದೆ ಬೇಡಿಸಿಕೊಂಡು ಒಡನೆ ಉಡುಗೆ ನೀಡಿದ ನೋಡಮ್ಮ ||೨||
ಬಡವರಿಗಳವಲ್ಲ ಪೊಡವಿಯೊಳಗೆ ಇದು ಆಡಿದಾನಂದದಾಟವ ನೋಡಮ್ಮ
ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೩||
naDire naDire nODuva SrIkRuShNana naDire naDire nODuva ||pa||
naDire nODuva banni tuDuga SrIkRuShNana aDigaLASraya hiDiva maMDaladoLu ||a.pa.||
tuDugatanadi baMdu kaDida beNNeya meddu oDane gOpyEra kADida nODamma |
biDade kALiMgana heDeya meTTida nODi taDeyade dhumukida maDuvinoLu raMga ||1||
krIDisi gOpyEra uDuge seLedukoMDu oDane giDavanErida nODamma |
mADida maNida biDade bEDisikoMDu oDane uDuge nIDida nODamma ||2||
baDavarigaLavalla poDaviyoLage idu ADidAnaMdadATava nODamma
hiDiya hOgalu mUDha mahipatiya nODi oDala hokku kUDida oDeyanamma ||3||